Advertisement
ಪ್ರತಿದಿನ ಯಾತ್ರಾರ್ಥಿಗಳನ್ನು ಕರೆ ದೊಯ್ಯುವ ನೂರಾರು ಘನ ಹಾಗೂ ಲಘು ವಾಹನಗಳು ಕೊಲ್ಲೂರಿನತ್ತ ತೆರಳುತ್ತವೆ. ರಾಜ್ಯ ಹೆದ್ದಾರಿಯೂ ಆಗಿರುವ ಕಾರಣ ಕೊಲ್ಲೂರು, ಬೈಂದೂರು, ಮುದೂರು, ಹಳ್ಳಿ ಹೊಳೆ, ಸಿದ್ದಾಪುರ, ವಂಡ್ಸೆ ಕಡೆಗೆ ತೆರಳುವ ವಾಹನಗಳೂ ಜಡ್ಕಲ್ ವೃತ್ತದ ಮೂಲಕ ಸಾಗುತ್ತವೆ. ಇದರ ನಡುವೆ ಸರಿಯಾದ ಬಸ್ ನಿಲ್ದಾಣ ಇಲ್ಲದ ಕಾರಣ ಮುಖ್ಯ ರಸ್ತೆಯ ಬದಿಯಲ್ಲಿ ನಿಂತು ವಿದ್ಯಾರ್ಥಿಗಳು ಸಹಿತ ಗ್ರಾಮಸ್ಥರು ಬಸ್‌ಗಾಗಿ ಕಾಯಬೇಕಾಗಿದೆ. ಬಸ್‌ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವ ಕಾರಣ ಈ ವೇಳೆ ಅಪಾಯ ನಡೆಯುವ ಸಧಗಯಗಳೂ ಹೆಚ್ಚಿವೆ ಎಂಬುದು ಸ್ಥಳೀಯರ ಅಭಿಪ್ರಾಯ.
ಅಪಘಾತ ಝೋನ್ ಆಗಿ ಮಾರ್ಪಾಡಾ ಗುತ್ತಿರುವ ಈ ರಸ್ತೆಯ ಸಮಸ್ಯೆ ಬಗ್ಗೆ ಇಲಾಖೆ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟಕ ವಾಸುದೇವ ಮುದೂರು ಅವರು ಆಗ್ರಹಿಸಿದ್ದಾರೆ.