ಕುಂದಾಪುರ: ನವ್ಯಚೇತನಟಸ್ಟ್ (ರಿ)ಉಡುಪಿ, ಜಡ್ಕಲ್‌ಗ್ರಾ.ಪಂ.ಕಸ್ತೂರ್ಬಾ ಮೆಡಿಕಲ್‌ಕಾಲೇಜ್‌ಆಸ್ಪತ್ರೆ, ಮಣಿಪಾಲ್‌ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಬೀಸಿರವಾಲೆ ಜಡ್ಕಲ್ ಶ್ರೀ ಕೊಲ್ಲೂರು ಮೂಕಾಂಬಿಕ ದೇಗುಲದ ಪ್ರೌಢಶಾಲೆಯಲ್ಲಿ ಜರಗಿತು.
ನವ್ಯಚೇತನ ಟ್ರಸ್ಟ್‌ನ ಅಧ್ಯಕ್ಷ ಡಾ|ಶಿವಾನಂದ್ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಗ್ರಾಮೀಣ ಭಾಗಗಳಲ್ಲಿ ಇಂತಹ ಶಿಬಿರಗಳು ಮಹತ್ತರವಾದ ಪಾತ್ರವನ್ನುವಹಿಸುತ್ತವೆೆ.ಅದ್ದರಿಂದ ನಮ್ಮ ಟ್ರಸ್ಟ್ ಇಂತಹ ಅನೇಕ ಸಾಮಾಜಿಕ ಕಾರ್ಯಗಳನ್ನು ನಿರಂತವಾಗಿ ಮಾಡುತ್ತಾ ಬಂದಿದೆ, ಅದಲ್ಲದೆ ಮಳೆ ನೀರುಕೊಯ್ಲು, ವನಮಹೋತ್ಸಹದಂತಹ ಪರಿಸರಕ್ಕೆ ಸಂಬಂಧಿತ ಚಟುವಟಿಕೆಯನ್ನು ನಡೆಸುತ್ತಿದೆ ಎಂದರು.
ಜಡ್ಕಲ್‌ಗಾÅ.ಪಂ.ಅಧ್ಯಕ್ಷ ಮೂರ್ತಿ ಭಟ್ ಮಾತನಾಡಿ, ನಮ್ಮ ಗ್ರಾಮದಲ್ಲಿ ನಡೆಯುತ್ತಿರುವ ಈ ಶಿಬಿರದ ಉಪಯೋಗವನ್ನು ಪ್ರತಿಯೊಬ್ಬ ಗ್ರಾಮಸ್ಥರು ಪಡೆದುಕೊಳ್ಳಬೇಕೆಂದರು. ಈ ಶಿಬಿರದಲ್ಲಿ 15 ಜನ ವೈದ್ಯರ ತಂಡ ಭಾಗವಹಿಸಿದ್ದು, 150ಕ್ಕೂ ಹೆಚ್ಚು ಗ್ರಾಮಸ್ಥರು ಶಿಬಿರದ ಪ್ರಯೋಜನ ವನ್ನು ಪಡೆದರು.
ಉಪಾಧ್ಯಕ್ಷ ವಿಶ್ವನಾಥ್, ಸದಸ್ಯ ನಾರಾಯಣ್ ಹಾಗೂ ಸರ್ವ ಸದಸ್ಯರು, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಬೇಬಿ ಶೆಡ್ತಿ, ನವ್ಯಚೇತನ ಟ್ರಸ್ಟ್‌ನ ಸದಸ್ಯರಾದ ರಾಜಶಂಕರ ಹಾಗೂ ಉದಯ್ ಶೆಟ್ಟಿ ಉಪಸ್ಥಿತರಿದ್ದರು.
ಶಶಿಧರ ಎಚ್.ಪಿ. ಕಾರ್ಯಕ್ರಮ ನಿರೂಪಿಸಿದರು.