Advertisement

ಪರಿಶೀಲನೆಯಲ್ಲಿ ಜಾಧವ್‌ ಅರ್ಜಿ

04:15 AM Jul 17, 2017 | Karthik A |

ಇಸ್ಲಾಮಾಬಾದ್‌: ಬೇಹುಗಾರಿಕೆ ಆರೋಪದ ಮೇರೆಗೆ ಪಾಕಿಸ್ಥಾನದ ಸೇನಾಕೋರ್ಟ್‌ನಿಂದ ಗಲ್ಲು ಶಿಕ್ಷೆಗೆ ಒಳಗಾಗಿರುವ ಭಾರತದ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರ ಕ್ಷಮಾದಾನ ಅರ್ಜಿಯನ್ನೀಗ ಸೇನಾ ಮುಖ್ಯಸ್ಥ ಜ| ಖಮರ್‌ ಜಾವೇದ್‌ ಬಾಜ್ವಾ ಪರಿಶೀಲನೆ ನಡೆಸುತ್ತಿದ್ದಾರೆ. ಅರ್ಹತೆ ಆಧಾರದ ಮೇರೆಗೆ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಪಾಕ್‌ ಸೇನೆ ಹೇಳಿದೆ.

Advertisement

ಜಾಧವ್‌ ಕಳೆದ ತಿಂಗಳು ಸೇನಾ ಮುಖ್ಯಸ್ಥರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾರೆ ಎಂದು ಪಾಕ್‌ನ ಆಂತರಿಕ ಸಂವಹನ ಸಂಪರ್ಕ ವಿಭಾಗ ಹೇಳಿತ್ತು. ಮಿಲಿಟರಿ ಕೋರ್ಟ್‌ ಜಾಧವ್‌ ಮೇಲ್ಮನವಿ ಅರ್ಜಿ ತಿರಸ್ಕರಿಸಿದ ಬಳಿಕ ಅವರು ಸೇನಾ ಮುಖ್ಯಸ್ಥರಿಗೆ ಅರ್ಜಿ ಸಲ್ಲಿಸಿದ್ದರು. ಪಾಕ್‌ ಕಾನೂನು ಪ್ರಕಾರ ಕ್ಷಮಾದಾನ ಅರ್ಜಿ ಸಲ್ಲಿಕೆಗೆ ಜಾಧವ್‌ ಅರ್ಹತೆ ಹೊಂದಿದ್ದು, ಒಂದು ವೇಳೆ ಅರ್ಜಿ ಸೇನಾ ಮುಖ್ಯಸ್ಥರಿಂದಲೂ ತಿರಸ್ಕೃತಗೊಂಡಲ್ಲಿ ಅಧ್ಯಕ್ಷರ ಮೊರೆ ಹೋಗುವ ಅವಕಾಶವಿದೆ ಎಂದು ಸೇನಾ ವಕ್ತಾರ ಮೇ| ಜ| ಆಸಿಫ್ ಗಫ‌ೂರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next