Advertisement

ಅಧಿಕಾರಿಗಳ ಬೇಜವಾಬ್ದಾರಿಗೆ ಜಾಧವ್‌ ಕಿಡಿ

06:22 AM Feb 03, 2019 | Team Udayavani |

ಕಾಳಗಿ: ನೂತನ ತಾಲೂಕಿನ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜನಸ್ಪಂದನಾ ಸಭೆಗೆ ಬಹುತೇಕ ಅಧಿಕಾರಿಗಳು ಗೈರು ಹಾಜರಾಗಿದ್ದನ್ನು ಕಂಡು ಅಧಿಕಾರಿಗಳ ಬೇಜವಾಬ್ದಾರಿಗೆ ಶಾಸಕ ಡಾ| ಉಮೇಶ ಜಾಧವ್‌ ಕಿಡಿಕಾರಿದರು.

Advertisement

ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಸ್ಪಂದನಾ ಸಭೆ ಕುರಿತು 28 ಇಲಾಖೆಗಳ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಶನಿವಾರ ಬೆಳಗ್ಗೆ ಶಾಸಕರು, ಜನಸಾಮಾನ್ಯರು ಸಭೆಗೆ ಆಗಮಿಸಿ 12ಗಂಟೆ ಕಳೆದರೂ ಕೇವಲ ಬೆರಳಣಿಕೆಯಷ್ಟು ಅಧಿಕಾರಿಗಳು ಬಂದಿದ್ದರು. ಇದನ್ನು ನೋಡಿದ ಶಾಸಕರು ಆಕ್ರೋಶಗೊಂಡು ಎಲ್ಲ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿ, ಚುನಾವಣೆ ನೀತಿ ಸಂಹಿತೆ ಜಾರಿ ಆಗುವುದರ ಒಳಗೆ ನಾನು ಬರದಿದ್ದರೂ ಮತ್ತೂಮ್ಮೆ ಜನಸ್ಪಂದನ ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ತಹಶೀಲ್ದಾರ್‌ಗೆ ಆದೇಶಿದಿಸಿದರು.

ಕೆಲಸಗಳಿಗಾಗಿ ಕಚೇರಿಗೆ ಬರುವ ಸಾರ್ವಜನಿಕರನ್ನು ಸತಾಯಿಸದೆ, ಅವರ ಬಳಿ ಹಣ ಕೀಳದೆ, ಮನಃಸಾಕ್ಷಿಯಿಂದ ಕೆಲಸಮಾಡಿಕೊಟ್ಟು ಅವರ ಮನಗೆಲ್ಲಿರಿ. ಪಿಂಚಣಿ ಅದಾಲತ್‌ ಹಮ್ಮಿಕೊಂಡು ಎಲ್ಲ ವೃದ್ಧರಿಗೂ ಪಿಂಚಣಿ ಸೌಲಭ್ಯ ಒದಗಿಸಿ ಎಂದರು.

ಚಿಂಚೋಳಿ ಮತಕ್ಷೇತ್ರದ ಅಭಿವೃದ್ಧಿಗೆ ಎಸ್‌ಎಫ್‌ಸಿ ಯೋಜನೆಯಲ್ಲಿ ಆರು ಕೊಟಿ ರೂ. ಅನುದಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಿರುವುದರಿಂದ ನನ್ನ ಮಾತಿಗೆ ಮನ್ನಣೆ ನೀಡಿ ರಾಜ್ಯ ಸಮ್ಮಿಶ್ರ ಸರ್ಕಾರ 4ಕೊಟಿ ರೂ. ಮಂಜೂರು ಮಾಡಿದೆ. ಅದರಲ್ಲಿ ಚಿಂಚೋಳಿ ತಾಲೂಕು ಅವೃದ್ಧಿಗೆ ಎರಡು ಕೊಟಿ ರೂ., ಕಾಳಗಿ ತಾಲೂಕು ಅಭಿವೃದ್ಧಿಗೆ ಎರಡು ಕೊಟಿ ರೂ. ನೀಡುವುದಾಗಿ ತಿಳಿಸಿದರು.

ಇದೆ ವೇಳೆ ಕಾಳಗಿ ಗ್ರಾಪಂನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಲು ಕಾರಣರಾದ ಶಾಸಕ ಡಾ| ಉಮೇಶ ಜಾಧವ್‌ ಅವರನ್ನು ಸಾರ್ವಜನಿಕರು ಸನ್ಮಾನಿಸಿದರು.

Advertisement

ತಹಶೀಲ್ದಾರ್‌ ನೀಲಪ್ರಭ ಮಾತನಾಡಿ, ಬೇಸಿಗೆ ಕಾಲ ಹತ್ತಿರ ಬರುತ್ತಿದೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಮುನ್ನಚ್ಚರಿಕೆ ಕ್ರಮವಾಗಿ ಯೋಜನೆ ರೂಪಿಸುತ್ತಿದ್ದೇವೆ ಎಂದು ಹೇಳಿದರು.

ಸಿಪಿಐ ಭೋಜರಾಜ ರಾಠೊಡ, ಪಿಡಿಒ ಸಿದ್ದಣ್ಣ ಬರಗಲ್ಲಿ, ಗ್ರಾಪಂ ಅಧ್ಯಕ್ಷೆ ಶಿವಲೀಲಾ ಸಲಗೂರ, ಉಪಾಧ್ಯಕ್ಷ ದೇವಜೀ ಜಾಧವ್‌, ತಾಪಂ.ಸದಸ್ಯೆ ರತ್ನಮ್ಮ ಡೊಣ್ಣೂರ, ಗ್ರಾಪಂ.ಸದಸ್ಯರಾದ ಪ್ರಶಾಂತ ಕದಂ, ಜಗನ್ನಾಥ ಚಂದನಕೇರಿ, ಸೂರ್ಯಕಾಂತ ಕಟ್ಟಿಮನಿ, ಕಲ್ಯಾಣರಾವ ಡೊಣ್ಣೂರ, ಮತಿವಂತರಾವ ಕುಡ್ಡಳ್ಳಿ, ಗ್ರಾಪಂ ಮಾಜಿ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ನಿಂಬೆಣ್ಣಪ್ಪ ಸಾಹು ಕೋರವಾರ, ರಾಜಶೇಖರ ತಿಮ್ಮನಾಯಕ ತೆಂಗಳಿ, ಜೀಯಾವೋದ್ದೀನ್‌ ಸೌದಾಗಾರ ಇದ್ದರು.

ಅಧಿಕಾರಕ್ಕೆ ಅಂಟಿಕೊಂಡಿಲ್ಲ, ತ್ಯಾಗಕ್ಕೆ ಸಿದ್ಧ
ನಾನು ಯಾವತ್ತೂ ಅಧಿಕಾರಕ್ಕಾಗಿ ಅಂಟಿಕೊಂಡವನಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ದಿನದ 20ಗಂಟೆ ಶ್ರಮಿಸುತ್ತಿದ್ದೇನೆ. ಜನರ ಆಶಯದಂತೆ ಉತ್ತಮ ಆಡಳಿತ ನೀಡುತ್ತಿದ್ದೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯಾವ ತ್ಯಾಗಕ್ಕೂ ಸಿದ್ಧನಿದ್ದೇನೆ.
∙ಡಾ| ಉಮೇಶ ಜಾಧವ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next