Advertisement

ಜಾಧವ್‌ಗೆ ಗಲ್ಲು: ಇಂದು ಅಂ.ರಾ ಕೋರ್ಟ್‌ ತೀರ್ಪು

11:37 AM May 18, 2017 | Team Udayavani |

ಹೊಸದಿಲ್ಲಿ: ಪಾಕಿಸ್ಥಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಪ್ರಕರಣದ ತೀರ್ಪು ಗುರುವಾರ ಅಪರಾಹ್ನ 3.30ಕ್ಕೆ ಹೊರಬೀಳಲಿದೆ. ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ 11 ಮಂದಿ ನ್ಯಾಯಮೂರ್ತಿಗಳ ಪೀಠವು ತೀರ್ಪನ್ನು ಪ್ರಕಟಿಸಲಿದೆ.

Advertisement

ಸೋಮವಾರವಷ್ಟೇ ಭಾರತ ಮತ್ತು ಪಾಕಿಸ್ಥಾನದ ಪರ ವಕೀಲರು ಅಂತಾರಾಷ್ಟ್ರೀಯ ಕೋರ್ಟ್‌ ಮುಂದೆ ತಮ್ಮ ವಾದಗಳನ್ನು ಮಂಡಿಸಿದ್ದರು. ವಿಚಾರಣೆ ವೇಳೆ ಭಾರತವನ್ನು ಪ್ರತಿನಿಧಿಸಿದ ನ್ಯಾಯವಾದಿ ಹರೀಶ್‌ ಸಾಳ್ವೆ ಅವರು, ಕುಲಭೂಷಣ್‌ಗೆ ನೀಡಿರುವ ಶಿಕ್ಷೆಯನ್ನು ಕೂಡಲೇ ರದ್ದು ಮಾಡುವಂತೆ ಮತ್ತು ಪಾಕಿಸ್ಥಾನದ ಕ್ರಮವನ್ನು ಅಕ್ರಮ ಎಂದು ಘೋಷಿಸುವಂತೆ ಮನವಿ ಮಾಡಿದ್ದರು. 

ಏತನ್ಮಧ್ಯೆ, ಭಾರತ ಮತ್ತು ಪಾಕಿಸ್ಥಾನ ನಡುವಣ ಶಾಂತಿ ಮಾತುಕತೆಗೆ ಭಾರತ ಸಹಕರಿಸುತ್ತಿಲ್ಲ. ಪಾಕ್‌ ಮಾತುಕತೆಗೆ ಸಿದ್ಧವಿದೆ. ಆದರೆ ಭಾರತ ಹಳಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಅಮೆರಿಕದಲ್ಲಿನ ಪಾಕ್‌ ರಾಯಭಾರಿ ಐಜಾಜ್‌ ಅಹಮದ್‌ ಚೌಧರಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next