Advertisement

ಜಾಧವ್‌ ಕೇಸ್‌: ಭಾರತ ಅರ್ಜಿ 

12:30 AM Feb 17, 2019 | |

ಹೊಸದಿಲ್ಲಿ: ಗೂಢಚಾರಿಕೆ ಆರೋಪದಲ್ಲಿ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರಿಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ಹಿಂಪಡೆಯುವಂತೆ ಕೋರಿ ಭಾರತವು ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದೆ. ಪುಲ್ವಾಮಾ ಘಟನೆಯ ಬೆನ್ನಲ್ಲೇ ಭಾರತದ ಈ ಕ್ರಮ ಮಹತ್ವದ್ದಾಗಿದೆ. ಸೋಮವಾರ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯದಲ್ಲಿ ಭಾರತ ಅರ್ಜಿ ಸಲ್ಲಿಸಲಿದೆ. ಜಾಧವ್‌ನನ್ನು ಇರಾನ್‌ನಿಂದ ಪಾಕ್‌ ಅಪಹರಿಸಿತ್ತು. ಆತನಿಗೆ 2017 ಏಪ್ರಿಲ್‌ನಲ್ಲಿ ಗಲ್ಲು ಶಿಕ್ಷೆಯನ್ನೂ ಸೇನಾ ನ್ಯಾಯಾಲಯ ವಿಧಿಸಿತ್ತು.

Advertisement

ಸೋಮವಾರ ಭಾರತೀಯ ವಕೀಲರು ವಿಶ್ವಸಂಸ್ಥೆಯ ನ್ಯಾಯಾಲಯದಲ್ಲಿ ವಾದ ಮಂಡಿಸಲಿದ್ದಾರೆ. ನಂತರ ಮಂಗಳವಾರ ಪಾಕಿಸ್ಥಾನದ ವಕೀಲರು ತಮ್ಮ ವಾದ ಮುಂದಿಡಲಿದ್ದಾರೆ. ರಾಯಭಾರಿ ಸಂಪರ್ಕಕ್ಕೆ ಅವಕಾಶ ನೀಡದಿರುವ ಪಾಕಿಸ್ಥಾನದ ಕ್ರಮ ಹಾಗೂ ಪಾಕಿಸ್ಥಾನ ಕಾಂಗರೂ ನ್ಯಾಯಾಲಯದ ರೀತಿಯಲ್ಲಿ ನೀಡಿರುವ ಆದೇಶದ ಬಗ್ಗೆ ಭಾರತದ ದಾಖಲೆಗಳಲ್ಲಿ ವಿವರಿಸಲಾಗಿದೆ. ಭಾರತದ ವಾದವನ್ನು ಒಪ್ಪಿಕೊಂಡರೆ, ಕೋರ್ಟ್‌ ಜಾಧವ್‌ ಬಿಡುಗಡೆಗೆ ಆದೇಶಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next