Advertisement

ರಾಕ್ ಸ್ಟಾರ್ ರವಿಂದ್ರ ಜಡೇಜಾ ನನ್ನ ಇಷ್ಟದ ಆಟಗಾರ ಎಂದ ಆಸೀಸ್ ಹ್ಯಾಟ್ರಿಕ್ ವೀರ

10:21 AM Feb 23, 2020 | keerthan |

ಜೋಹಾನ್ಸ್ ಬರ್ಗ್: ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ನನ್ನ ಇಷ್ಟದ ಆಟಗಾರ. ನಾನು ಆತನಿಂದ ಬಹಳಷ್ಟು ಕಲಿತಿದ್ದೇನೆ ಎಂದು ಆಸ್ಟ್ರೇಲಿಯಾದ ಆಲ್ ರೌಂಡರ್ ಆಸ್ಟನ್ ಆಗರ್ ಹೇಳಿದ್ದಾರೆ.

Advertisement

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹ್ಯಾಟ್ರಿಕ್ ಸಹಿತ 5 ವಿಕೆಟ್ ಕಬಳಿಸಿದ ಆಸ್ಟನ್ ಆಗರ್ ಪಂದ್ಯದ ಬಳಿಕ ಈ ಮಾತುಗಳನ್ನಾಡಿದರು.

ಭಾರತದ ಜಡೇಜಾ ನನ್ನ ಇಷ್ಟದ ಆಟಗಾರ. ನಾನು ಆತನಂತೆ ಆಡಲು ಬಯಸುತ್ತೆನೆ. ಬ್ಯಾಟಿಂಗ್ ಇರಲಿ, ಬೌಲಿಂಗ್ ಅಥವಾ ಫೀಲ್ಡಿಂಗ್ ಇರಲಿ ರವೀಂದ್ರ ಜಡೇಜಾ ನಿಜವಾದ ರಾಕ್ ಸ್ಟಾರ್ ಎಂದು ಆಗರ್ ಗುಣಗಾನ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಆಸ್ಟ್ರೇಲಿಯಾ 107 ರನ್ ಅಂತರದಿಂದ ಜಯಿಸಿದೆ. ಬ್ಯಾಟಿಂಗ್ ವೇಳೆ ಆಗರ್ 9 ಎಸೆತಗಳಲ್ಲಿ 20 ರನ್ ಬಾರಿಸಿದರೆ ಬೌಲಿಂಗ್ ನಲ್ಲಿ 24 ರನ್ ನೀಡಿ ಐದು ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next