Advertisement

Reality Show; ಸ್ಟಾರ್ ಸುವರ್ಣದಲ್ಲಿ ‘ಜಾಕ್ ಪಾಟ್’

03:27 PM Nov 27, 2023 | Team Udayavani |

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಹೊಸ ಗೇಮ್‌ ಶೋ ಸುವರ್ಣ ಜಾಕ್‌ಪಾಟ್‌ ಆರಂಭವಾಗಿದೆ. “ಜಾಕ್‌ ಪಾಟ್’ ಇದೊಂದು ವಿಭಿನ್ನ ಕಾನ್ಸೆಪ್ಟ್ ಹೊಂದಿರುವ ಶೋ.

Advertisement

ಇಲ್ಲಿ ಭಾಗವಹಿಸುವ ಪ್ರತಿ ಸೆಲೆಬ್ರಿಟಿಗಳು ಆಟದ ಜೊತೆ 50 ಲಕ್ಷ ರೂಪಾಯಿ ಬೆಲೆಬಾಳುವ ಟಿವಿ, ಫ್ರಿಡ್ಜ್, ವಾಷಿಂಗ್‌ ಮೆಷಿನ್‌, ಲ್ಯಾಪ್‌ ಟಾಪ್‌, ಎಲೆಕ್ಟ್ರಿಕ್‌ ಸ್ಕೂಟರ್‌ ಹಾಗೂ ಇನ್ನಿತರ ಗೃಹಉಪಯೋಗಿ ವಸ್ತುಗಳನ್ನು ಪಡೆಯುವ ಅವಕಾಶ ಗಳಿಸುತ್ತಾರೆ. ಆದರೆ ನೀಡಿರುವ ಮಂತ್ರವನ್ನು ಸರಿಯಾಗಿ ಹೇಳಿದರೆ ಮಾತ್ರ ಅವರು ಆಯ್ಕೆ ಮಾಡಿದ ವಸ್ತುಗಳನ್ನು ಗೆಲ್ಲುತ್ತಾರೆ.

ಇದೊಂತರ ತಾರೆಯರಿಗೆ ಆಟದ ಜೊತೆ ನೆನಪಿನ ಶಕ್ತಿಗೆ ಸವಾಲೊಡ್ಡುವ ಗೇಮ್‌ ಶೋ.. ಪ್ರತಿ ವಾರ 2 ತಂಡಗಳು ಭಾಗವಹಿಸುತ್ತದೆ. ಬಾಗ್ಲು ತೆಗಿಯೇ ಸೇಸಮ್ಮ ಎಂಬ ಬರಹದಡಿ ಶುರುವಾಗುತ್ತಿದೆ.

ಈಗಾಗಲೇ “ಸುವರ್ಣ ಜಾಕ್‌ಪಾಟ್‌’ ಆರಂಭವಾಗಿದ್ದು, ಭಾನುವಾರ ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ. ಅನುಪಮಾ ಗೌಡ ಈ ಶೋನ ನಿರೂಪಕಿ.

Advertisement

Udayavani is now on Telegram. Click here to join our channel and stay updated with the latest news.

Next