Advertisement

ನಕ್ಷತ್ರದ ಹಂಗಿಲ್ಲದ 172 ಗ್ರಹಗಳು ಪತ್ತೆ!  ಖಗೋಳ ವಿಜ್ಞಾನಿಗಳಿಗೆ ಜಾಕ್‌ಪಾಟ್‌

08:05 PM Dec 27, 2021 | Team Udayavani |

ನ್ಯೂಯಾರ್ಕ್‌: ಭೂಮಿಯು ಹೇಗೆ ಸೂರ್ಯನ ಕಕ್ಷೆಯಲ್ಲಿ ಸುತ್ತುತ್ತದೋ, ಅದೇ ರೀತಿ ಉಳಿದ ಗ್ರಹಗಳೂ ನಕ್ಷತ್ರವೊಂದರ ಸುತ್ತ ಸುತ್ತುತ್ತವೆ. ಆದರೆ, ಈಗ ಮೂಲ ನಕ್ಷತ್ರವೇ ಇಲ್ಲದ 70-172 ಗ್ರಹಗಳನ್ನು ಖಗೋಳವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ!

Advertisement

ಈ ರೀತಿ ಮುಕ್ತವಾಗಿ ಸಂಚರಿಸುವಂತಹ ಇಷ್ಟೊಂದು ಗ್ರಹಗಳು ಒಂದೇ ಬಾರಿಗೆ ಪತ್ತೆಯಾಗಿರುವುದು ಇದೇ ಮೊದಲು. ಅಲ್ಲದೇ, ಈವರೆಗೆ ಪತ್ತೆಯಾದ ಮುಕ್ತ-ಸಂಚಾರಿ ಗ್ರಹಗಳ ಸಂಖ್ಯೆಗೆ ಹೋಲಿಸಿದರೆ ಈ ಬಾರಿ ಇಂಥ ಗ್ರಹಗಳು ದುಪ್ಪಟ್ಟು ಸಂಖ್ಯೆಯಲ್ಲಿ ಕಂಡುಬಂದಿರುವುದು ವಿಶೇಷ.

ಗುರುವಿಗಿಂತ 13 ಪಟ್ಟು ಕಡಿಮೆ ದ್ರವ್ಯರಾಶಿ:

ಈ ಗ್ರಹಗಳ ಮೂಲವು ಇನ್ನೂ ನಿಗೂಢವಾಗಿಯೇ ಉಳಿದಿದೆ. ಸಾಮಾನ್ಯವಾಗಿ ನಕ್ಷತ್ರಗಳು ರೂಪುಗೊಳ್ಳುವಂಥ ಪ್ರಕ್ರಿಯೆಯ ವೇಳೆ ಈ ರೀತಿಯ ಗ್ರಹಗಳು ಸೃಷ್ಟಿಯಾಗುತ್ತವೆ. ಗುರುಗ್ರಹದ ದ್ರವ್ಯರಾಶಿಯ 13 ಪಟ್ಟು ಕಡಿಮೆ ದ್ರವ್ಯರಾಶಿಯನ್ನು ಹೊಂದಿರುವ ಗ್ರಹಗಳು ಇವು. ಇವುಗಳು ಯಾವುದೇ ನಕ್ಷತ್ರದ ಕಕ್ಷೆಯಲ್ಲಿ ಸುತ್ತುವುದಿಲ್ಲ. ಬದಲಿಗೆ, ಸ್ವಂತವಾಗಿ ತೇಲುತ್ತಿರುತ್ತವೆ. ಈ ಅನ್ವೇಷಣೆಗೆ ಸಂಬಂಧಿಸಿದ ವರದಿಯು ನೇಚರ್‌ ಆಸ್ಟ್ರಾನಮಿ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ಜೇಮ್ಸ್‌ ವೆಬ್‌ನಿಂದ ಹೆಚ್ಚಿನ ಅಧ್ಯಯನ:

Advertisement

ಈಗ ಪತ್ತೆಯಾಗಿರುವ ಮುಕ್ತ ಸಂಚಾರಿ ಗ್ರಹಗಳು ಮುಂದಿನ ಹಲವು ಅಧ್ಯಯನಗಳಿಗೆ ನೆರವಾಗಲಿದೆ. ಇತ್ತೀಚೆಗಷ್ಟೇ ನಾಸಾವು ಜೇಮ್ಸ್‌ ವೆಬ್‌ ಸ್ಪೇಸ್‌ ದೂರದರ್ಶಕವನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದು, ಈ ಟೆಲಿಸ್ಕೋಪ್‌ ಮೂಲಕ ಇಂಥ ಗ್ರಹಗಳ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸಲು ಸಾಧ್ಯವಾಗಬಹುದು ಎಂದೂ ಖಗೋಳವಿಜ್ಞಾನಿಗಳು ಅಂದಾಜಿಸಿದ್ದಾರೆ.

ಇದನ್ನೂ ಓದಿ : ಕಾವೇರಿ ತಾಯಿ ಮುಂದೆ ನಿಂತು ನಾಟಕ: ಡಿಕೆಶಿ ವಿರುದ್ಧ ಹೆಚ್ ಡಿಕೆ ತೀವ್ರ ವಾಗ್ದಾಳಿ

Advertisement

Udayavani is now on Telegram. Click here to join our channel and stay updated with the latest news.

Next