Advertisement
ಈ ಹಣ್ಣು ಗಾತ್ರದಲ್ಲಿ ಹೇಗೆ ದೊಡ್ಡ ಸ್ಥಾನ ಪಡೆದಿದೆಯೋ ಹಾಗೆಯೇ ಆರೋಗ್ಯದ ದೃಷ್ಟಿಯಲ್ಲೂ ಅಷ್ಟೇ ಬಹುಮಹತ್ತರದ ಪಾತ್ರವಹಿಸಿದೆ. ಈ ಹಣ್ಣಿನಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಹೇರಳವಾಗಿ ಕಂಡು ಬರುತ್ತದೆ ಮಾತ್ರವಲ್ಲದೇ ಪೊಟಾಶಿಯಂ ಹಾಗೂ ಪ್ರೋಟೀನ್ ವಿರುವುದರಿಂದ ಆರೋಗ್ಯಕ್ಕೆ ಉತ್ತಮ.
Related Articles
Advertisement
ಬೇಕಾಗುವ ಸಾಮಗ್ರಿಗಳುಹಲಸಿನ ಹಣ್ಣಿನ ತೊಳೆ-20,ತುಪ್ಪ-4 ಚಮಚ,ಒಣದ್ರಾಕ್ಷಿ, ಬಾದಾಮಿ, ಗೋಡಂಬಿ, ಬೆಲ್ಲ-1/4ಕಪ್, ಏಲಕ್ಕಿ ಪುಡಿ-ಸ್ವಲ್ಪ. ತಯಾರಿಸುವ ವಿಧಾನ
ಮೊದಲಿಗೆ ಹಲಸಿನ ಹಣ್ಣನ್ನು ನೀರು ಸೇರಿಸದೆ ಮಿಕ್ಸಿಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ರುಬ್ಬಿಕೊಂಡ ಮಿಶ್ರಣವನ್ನು ಒಂದು ಬಾಣಲೆಗೆ ಹಾಕಿ ಅದಕ್ಕೆ ಬೆಲ್ಲವನ್ನು ಸೇರಿಸಿ ಮಿಶ್ರಣವನ್ನು ಕುದಿಸುತ್ತಾ ಕೈಯಾಡಿಸುತ್ತಿರಿ. ಮಧ್ಯಮ ಉರಿಯಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಅಂದರೆ ಕಂದು ಬಣ್ಣ ಬದಲಾಗುತ್ತ ಬರುತ್ತದೆ. ಈ ಮಿಶ್ರಣ ಗಟ್ಟಿ ಹದಕ್ಕೆ ಬಂದ ನಂತರ ತುಪ್ಪವನ್ನು ಸೇರಿಸಿ ಒಮ್ಮೆಲೆ ಹಾಕಬೇಡಿ ಸ್ವಲ್ಪ-ಸ್ವಲ್ಪ ಹಾಕುತ್ತಾ ಕೈಯಾಡಿಸಿರಿ.ತದನಂತರ ಏಲಕ್ಕಿ ಪುಡಿ,ಬಾದಾಮಿ,ಒಣದ್ರಾಕ್ಷಿ ಹಾಗೂ ಗೋಡಂಬಿ ತುಂಡುಗಳನ್ನು ಸೇರಿಸಿ ಹಲ್ವಾ ಪಾತ್ರೆಯ ಬದಿಗಳನ್ನು ಬಿಡಲು ಪ್ರಾರಂಭಿಸಿದಾಗ ಅದನ್ನು ತೆಗೆಯಿರಿ. ಆ ಬಳಿಕ ಒಂದು ಬಟ್ಟಲಿಗೆ ತುಪ್ಪವನ್ನು ಸವರಿ ಮಾಡಿಟ್ಟ ಹಲ್ವಾವನ್ನು ವರ್ಗಾಯಿಸಿ ತಣಿಯಲು ಬಿಡಿ. ತದನಂತರ ನಿಮಗೆ ಬೇಕಾಗುವ ಆಕಾರದಲ್ಲಿ ತುಂಡು ಮಾಡಿದರೆ ರುಚಿಕರವಾದ ಹಲಸಿನ ಹಣ್ಣಿನ ಹಲ್ವಾ ಸವಿಯಲು ಸಿದ್ಧ. -ಶ್ರೀರಾಮ್ ಜಿ . ನಾಯಕ್