Advertisement

ಜೂ,8: ಬದಿಯಡ್ಕದಲ್ಲಿ ಹಲಸು ಮೇಳ 2019 : ಭರದ ಸಿದ್ಧತೆ

12:24 AM Jun 03, 2019 | sudhir |

ವಿದ್ಯಾನಗರ: ಭಾರತೀಯ ಗೋವು ತಳಿಗಳ ಪ್ರೋತ್ಸಾಹ ಮತ್ತು ಸಂರಕ್ಷಣೆಗಾಗಿ ಹೊಸನಗರ ರಾಮಚಂದ್ರಾಪುರ ಮಠವು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕೈಗೊಂಡ ವಿವಿಧ ಸಮಾಜಮುಖೀ ಮಹಾತ್ವಾಕಾಂಕ್ಷಿ ಯೋಜನೆ ಗಳಲ್ಲಿ ಕಾಮದುಘಾ ಮಹತ್ವಪೂರ್ಣ ವಾದದ್ದು. . ಈ ಯೋಜನೆಯ ಮೂಲಕ ಕರ್ನಾಟಕ, ಕೇರಳ, ಮಹಾರಾಷ್ಟ್ರಗಳಲ್ಲಿ ಹದಿನಾಲ್ಕು ಮುಖ್ಯ ಗೋಶಾಲೆಗಳನ್ನು ಸ್ಥಾಪಿಸಿ ಸಹಸ್ರಾರು ಗೋವುಗಳಿಗೆ ಆಶ್ರಯ ನೀಡಿದ್ದಾರೆ. ಅವುಗಳಲ್ಲಿ ಒಂದು ಕಾಸರಗೋಡು ಜಿಲ್ಲೆಯ ಬಜಕೂಡ್ಲು ಅಮೃತಧಾರಾ ಗೋಶಾಲೆ. ಈ ಗೋಶಾಲೆಗೆ ನಿರಂತರ ಆಹಾರ ಪೂರೈಸುವ ಯೋಜನೆಯಂಗವಾಗಿ ಜೂನ್‌ 8ರಂದು ಬದಿಯಡ್ಕ ಭಾರತೀ ವಿದ್ಯಾಪೀಠದಲ್ಲಿ ಹಲಸುಮೇಳ ನಡೆಯಲಿದೆ. ಮಹಿಳ್ಳೋದಯ ಬದಿಯಡ್ಕ, ಮುಳ್ಳೇರಿಯ ಹವ್ಯಕ ಮಂಡಲ ಹಾಗೂ ಬಜಕೂಡ್ಲು ಗೋಶಾಲೆ ನೇತೃತ್ವದಲ್ಲಿ ಆಯೋಜಿಸಲಾದ ಹಲಸು ಮೇಳಕ್ಕೆ ಹಲವಾರು ಸಂಘ -ಸಂಸ್ಥೆಗಳು ಸಹಕಾರವೂ ಇದೆ.

Advertisement

ಹಲಸು ಮೇÙ‌

ಗೋಪ್ರೇಮಿಗಳು ಶ್ರೀಗಳ ಆಶೀರ್ವಾದದೊಂದಿಗೆ ಹಸಲು ಮೇಳವನ್ನು ಸಂಘಟಿಸಿದ್ದು ಇಲ್ಲಿ ಮಾರಾಟವಾದ ಹಲಸು ಮತ್ತು ಹಲಸಿನ ಉತ್ಪನ್ನಗಳಿಂದ ಬರುವ ಷಂಪೂರ್ಣ ಆದಾಯವನ್ನು ಗೋವುಗಳಿಗೆ ಮೇವಿಗಾಗಿ ಉಪಯೋಗಿಸಲಾಗುತ್ತದೆ.ಇದರ ಭಾಗವಾಗಿ ಕಾಸರಗೋಡು ಜಿಲ್ಲೆಯಾದ್ಯಂತ ಹಪ್ಪಳ ತಯಾರಿಕಾ ಕಾರ್ಯಾಗಾರ ನಡೆಯುತ್ತಿದೆ.

ಕೈಂಕರ್ಯದಲ್ಲಿ ಮಾತೆಯರು

ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದು ಹಪ್ಪಳ ತಯಾರಿಯಲ್ಲಿ ಕೆಲವು ಪ್ರಧಾನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹಪ್ಪಳ ತಯಾರಿಸಲಾಗಿದೆ. ಉಪ್ಪು ಮತ್ತು ಮೆಣಸಿನ ಹುಡಿ ಸೇರಿಸಿದ ಹಿಟ್ಟಿನಿಂದ ಸಾಮಾನ್ಯ 6ಇಂಚು ವ್ಯಾಸದ ಹಪ್ಪಳ ತಯಾರಿಸಿ 3ದಿನದ ಸರಿಯಾದ ಬಿಸಿಲಲ್ಲಿ ಒಣಗಿಸಿ 1 ದಿನ ನೆರಳಲ್ಲಿ ಹರಡಿಟ್ಟು ಸರಿಯಾದ ಆಕೃತಿ ಬರುವಂತೆ ಮಾಡಿದ ಮೇಲೆ ಒಂದೇ ರೀತಿಯ 25 ಹಪ್ಪಳಗಳ ಒಂದು ಕಟ್ಟ ಮಾಡಿ ಮೂರು ದಿನಗಳ ಕಾಲ ಕಟ್ಟುಗಳನ್ನು ಬಿಸಿಲಲ್ಲಿ ಪುನಃ ಒಣಗಿಸಿ ರಟ್ಟಿನ ಪೆಟ್ಟಿಗೆಗಳಲ್ಲಿ ಜೋಡಿಸಿ ಕೊನೆಯಲ್ಲಿ ತಮ್ಮಲ್ಲಿರುವ ಹಪ್ಪಳಗಳನ್ನು ಮಾತೃ ಪ್ರಧಾನೆಯರಿಗೆ ಹಸ್ತಾಂತರಿಸಿ ಮಹಿಳ್ಳೋದಯಕ್ಕೆ ತಲುಪಿಸಬೇಕಾಗಿದೆ.

Advertisement

ಹಲಸು ಬೆಳೆಸಿ, ಗೋವು ಉಳಿಸಿ

ಪ್ರತಿಮನೆಯಿಂದಲೂ ಕನಿಷ್ಠ 100 ಹಪ್ಪಳಗಳನ್ನು ಬಜಕೂಡ್ಲಿನ ಗೋವಿಗಾಗಿ ಸಮರ್ಪಿಸುವ ಅಪೂರ್ವವಾದ ಅವಕಾಶ ಗೋಪ್ರೇಮಿಗಳ ಉತ್ಸಾಹವನ್ನು ಹೆಚ್ಚಿಸಿತು. ಸಮರ್ಪಿಸುವ ನೂರು ಹಪ್ಪಳದ ಮೌಲ್ಯವು ಹತ್ತು ಗೋವುಗಳ ಒಂದು ದಿನದ ಆಹಾರಕ್ಕೆ ಸಾಕು ಎಂಬ ಮಾಹಿತಿ ಹೆಚ್ಚಿನ ಸಂಖ್ಯೆಯಲ್ಲಿ ಗೋಪ್ರೇಮಿಗಳು ಈ ಕಾಯಕದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತು. ಸೇವಾ ಅಘ್ಯರ್ದಡಿಯಲ್ಲಿ ಹಪ್ಪಳ ಸಮರ್ಪಣೆ ನಡೆಯಲಿದ್ದು ಮಂಡಲ, ವಲಯ, ಘಟಕದ ಮಾತೃ ಪ್ರಧಾನೆಯರು ಹಪ್ಪಳ ತಯಾರಿಕೆಯ ಸಂಯೋಜನೆ ಮಾಡಿದ್ದಾರೆ. ಅತೀ ಸುಲಭವಾಗಿ ಪ್ರತಿ ಮನೆಯಲ್ಲಿ ಮಾಡಬಹುದಾದ ಅಘ್ಯರ್ ಇದಾಗಿದೆ.

ಲಕ್ಷ ಮೀರಿದ ಹಪ್ಪಳ

ಒಂದು ಲಕ್ಷ ಹಪ್ಪಳಗಳನ್ನು ತಯಾರಿಸುವ ಯೋಜನೆ ಹಾಕಿದ್ದು ಇದೀಗ ಹಪ್ಪಳದ ಸಂಖ್ಯೆ ಲಕ್ಷ ಮೀರಿ ಗುರಿ ಸಾಕ್ಷಾತ್ಕಾರವಾಗುವ ಲಕ್ಷಣ ಕಂಡುಬರುತ್ತಿದೆ. ಅತ್ಯಂತ ಆಸಕ್ತಿಯಿಂದ ಈ ಕಾರ್ಯಾಗಾರದಲ್ಲಿ ಗೋಪ್ರೇಮಿಗಳು ಕೈಜೋಡಿಸಿರುವುದೇ ಇದಕ್ಕೆ ಕಾರಣ. ಸಾವಿರಾರು ಕಾರ್ಯಕರ್ತರು ನಿಸ್ವಾರ್ಥ ಸೇವೆ ಸಲ್ಲಿಸಿ ಹಲಸು ಮೇಳಕ್ಕೆ ಪೂರ್ಣ ಸಹಕಾರ ನೀಡುತ್ತಿದ್ದಾರೆ. ಕೊಡಗಿನಿಂದ ಚಂದ್ರಗಿರಿ ವರೆಗೂ ಹಪ್ಪಳ ತಯಾರಿ ನಡೆಯುತ್ತಿದೆ, ಹಾಗೆಯೇ ಮಂಗಳೂರು, ಸುಳ್ಯ, ಬೆಳ್ತಂಗಡಿ, ವಿಟ್ಲ, ಪುತ್ತೂರು ಸಹಿತ ದಕ್ಷಿಣ ಕನ್ನಡದ ಗೋಪ್ರೇಮಿಗಳೂ ಕೈಜೋಡಿಸಿದ್ದಾರೆ. ಹಲಸು ಮೇಳದಲ್ಲಿ ಎಂಟರಿಂದ ಹತ್ತು ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

– ವಿದ್ಯಾ ಗಣೇಶ್ ಅಣ್ಣಂಗೂರು

Advertisement

Udayavani is now on Telegram. Click here to join our channel and stay updated with the latest news.

Next