Advertisement

Jack Dorsey : ಇನ್ಸ್‌ಸ್ಟಾಗ್ರಾಮ್‌ ತ್ಯಜಿಸಿದ ಜಾಕ್‌ ಡಾರ್ಸೆ

07:33 PM Aug 20, 2023 | Team Udayavani |

ಟ್ವಿಟರ್‌ ಸಂಸ್ಥಾಪಕ, ಮಾಜಿ ಸಿಇಒ ಜಾಕ್‌ ಡಾರ್ಸೆ ಇನ್ಸ್‌ಸ್ಟಾಗ್ರಾಮ್‌ ತ್ಯಜಿಸಿದ್ದಾರೆ. ಮಾರ್ಕ್‌ ಜುಕರ್‌ಬರ್ಗ್‌ ಮಾಲೀಕತ್ವದ ಇನ್ಸ್‌ಸ್ಟಾಗ್ರಾಮ್‌ ತ್ಯಜಿಸುತ್ತಿರುವುದಾಗಿ ಟ್ವಿಟರ್‌(ಎಕ್ಸ್‌)ನಲ್ಲಿ ಘೋಷಿಸಿದ್ದಾರೆ. “12 ವರ್ಷಗಳ ನಂತರ ಇನ್ಸ್‌ಸ್ಟಾಗ್ರಾಮ್‌ ಖಾತೆಯನ್ನು ಡಿಲೀಟ್‌ ಮಾಡಿದ್ದೇನೆ.

Advertisement

ಇನ್ಸ್‌ಸ್ಟಾಗ್ರಾಮ್‌ನ ಮೊದಲ 10 ಖಾತೆದಾರರ ಪೈಕಿ ನಾನು ಒಬ್ಬನಾಗಿದ್ದೆ ಎಂದು ಭಾವಿಸುತ್ತೇನೆ. ಜತೆಗೆ ಮೊದಲ ಹೂಡಿಕೆದಾರರ ಪೈಕಿ ಒಬ್ಬನಾಗಿದ್ದೆ’ ಎಂದು ಜಾಕ್‌ ಡಾರ್ಸೆ ಟ್ವೀಟ್‌ ಮಾಡಿದ್ದಾರೆ. ಇದೇ ವೇಳೆ ಫೇಸ್‌ಬುಕ್‌ ಖಾತೆಯನ್ನು ಅವರು ಮುಂದುವರಿಸಿದ್ದಾರೆ. ಡಾರ್ಸೆ ಅವರ ಟ್ವೀಟ್‌ಗೆ ಬೆಂಕಿಯ ಎಮೊಜಿಯೊಂದಿಗೆ ಟ್ವಿಟರ್‌ ಮಾಲೀಕ ಎಲಾನ್‌ ಮಸ್ಕ್ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next