Advertisement

ಮದುವೆಯಾಗ್ಬೇಕು, ದಿನಾಂಕ ನಿಗದಿಯಾಗಿಲ್ಲ: ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂಡಾ

09:04 AM Nov 12, 2020 | keerthan |

ಕ್ರೈಸ್ಟ್‌ಚರ್ಚ್‌: ನ್ಯೂಜಿಲೆಂಡ್‌ ಸಂಸತ್‌ಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 2ನೇ ಬಾರಿಗೆ ಅಭೂತಪೂರ್ವ ಗೆಲುವು ಸಾಧಿಸಿ ಎರಡನೇ ಬಾರಿ ಪ್ರಧಾನಿಯಾದ ಜೆಸಿಂಡಾ ಅರ್ಡೆರ್ನ್ ಈಗ ತಮ್ಮ ಮದುವೆಗೆ ಸಿದ್ಧತೆ ನಡೆಸಿದ್ದಾರಂತೆ.

Advertisement

40 ವರ್ಷದ ಜೆಸಿಂಡಾ ಪ್ರಖ್ಯಾತ ಟೆಲಿವಿಷನ್‌ ನಿರೂಪಕ ಕ್ಲಾರ್ಕ್‌ ಗೇಫೋರ್ಡ್‌ (44) ರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಈ ಜೋಡಿಗೆ ಈಗಾಗಲೇ ಎರಡು ವರ್ಷದ ಮಗುವೂ ಇದೆ. ವಿವಾಹದ ದಿನಾಂಕ ಇನ್ನು ನಿಗದಿಯಾಗಿಲ್ಲವಾದರೂ, ಈ ಕುರಿತು ನಾವಿಬ್ಬರೂ ಪ್ಲ್ರಾನ್‌ ಅಂತೂ ಮಾಡುತ್ತಿದ್ದೇವೆ ಎನ್ನುತ್ತಾರೆ ಜೆಸಿಂಡಾ.

ಇದನ್ನೂ ಓದಿ:ಅಭಿಮತ: ಮೋದಿಗೆ ಧನ್ಯವಾದ ಹೇಳಬೇಕು ನಿತೀಶ್‌!

ಕೋವಿಡ್-19 ಸೋಂಕು ನಿಯಂತ್ರಿಸುವಲ್ಲಿ ಅವರು ಕೈಗೊಂಡ ಕ್ರಮಗಳು ವಿಶ್ವ ಮಾನ್ಯತೆ ಪಡೆದುಕೊಂಡಿದೆ. 2017ರಲ್ಲಿ ಅವರು ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಪ್ರಧಾನಿಯಾಗಿದ್ದ ಸಮಯದಲ್ಲೇ ಮಗುವಿಗೆ ಜನ್ಮ ನೀಡಿದ್ದರು. ಇತ್ತೀಚೆಗಷ್ಟೇ ನಡೆದ ಚುನಾವಣೆಯಲ್ಲಿ ಮತ್ತೆ ಗೆದ್ದು ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next