ಗ್ರಾಮೀಣ ಬದುಕಿನ ಸೊಗಡು ಬಿಂಬಿಸುವ ಆಶಯದೊಂದಿಗೆ ಗುರುಪುರ ಗೋಳಿದಡಿಗುತ್ತಿನಲ್ಲಿ ‘ಗುತ್ತುದ ವರ್ಸೊದ ಪರ್ಬೊದ ಅಂಗವಾಗಿ ‘ಪರ್ಬೊದ ಸಿರಿ’ ಕಾರ್ಯಕ್ರಮ ಜ.19 ಬೆಳಗ್ಗಿನಿಂದ ಜ.20ರ ರಾತ್ರಿಯವರೆಗೆ ಗುರುಪುರ ಗೋಳಿದಡಿ ಗುತ್ತುವಿನ ಶ್ರೀ ವೈದ್ಯನಾಥೇಶ್ವರ ಪ್ರಾಂಗಣದಲ್ಲಿ ನಡೆಯಲಿದೆ ಎಂದು ಗೋಳಿದಡಿಗುತ್ತುವಿನ ಗಡಿಕಾರರಾದ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ತಿಳಿಸಿದ್ದಾರೆ.
Advertisement
ತುಳುನಾಡಿನ ಗತಕಾಲದ ಜೀವನ ಶೈಲಿ ನಮ್ಮ ಸುಂದರ ಹಾಗೂ ನೈಜ ಬದುಕಿಗೆ ಸಾಕ್ಷಿಯಾಗಿದ್ದರೆ, ಅದು ಇಂದು ಮಾಯವಾಗಿ ಜನ ಪರಕೀಯ ಜೀವನ ಶೈಲಿಯೇ ಶ್ರೇಷ್ಠ ಎನ್ನುವ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದಾರೆ. ನಮ್ಮೂರ ಜಾತ್ರೆ, ಉತ್ಸವಗಳು ನಿಧಾನವಾಗಿ ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ತುಳುನಾಡಿನ ವಿನೂತನ ಕಾರ್ಯಕ್ರಮವಾಗಿ ಇದು ಮೂಡಿ ಬರಲಿದೆ. ಗ್ರಾಮ ಜೀವನವನ್ನು ಬಿಂಬಿಸಿ ಪುನರುತ್ಥಾನಗೊಳಿಸುವ ಧ್ಯೇಯದೊಂದಿಗೆ ಕಾರ್ಯಕ್ರಮ ಸಂಘಟಿಸಲಾಗಿದೆ.
ಹಿರಿಯರು ಉದ್ಘಾಟನೆ ನೆರವೇರಿಸಲಿದ್ದಾರೆ. ಗುರುಪುರ ಹಾಗೂ ಸುತ್ತಮುತ್ತಲಿನ 10 ಗ್ರಾಮಗಳ ಗ್ರಾಮೀಣ ಪುರುಷರಿಗೆ, ಮಹಿಳೆಯರಿಗೆ ಶಕ್ತಿ ಕಲ್ಲು ಎತ್ತುವ ಸ್ಪರ್ಧೆ, ವಿವಿಧ ರೀತಿಯ ಸರಕುಗಳ ಮಳಿಗೆಗಳ ಪ್ರದರ್ಶನ ಹಾಗೂ ಮಾರಾಟ ಆಯೋಜಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 6ಕ್ಕೆ ಗುತ್ತಿನ ವರ್ಷದ ಒಡ್ಡೊಲಗ ನಡೆಯಲಿದ್ದು ಹಲವು ಗಣ್ಯರು ಭಾಗವಹಿಸಲಿದ್ದಾರೆ.
Related Articles
Advertisement