Advertisement

ಸಿದ್ಧಾರೂಢ ಮಠಕ್ಕೆ ಭೇಟಿ‌; ಗುರುನಾಥಾರೂಢರ ದರ್ಶನ ಪಡೆದ J.P. Nadda

01:08 PM Apr 19, 2023 | |

ಹುಬ್ಬಳ್ಳಿ: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ನಗರದ ಸಿದ್ಧಾರೂಢ ಮಠಕ್ಕೆ ಭೇಟಿ‌ ನೀಡಿ ಸಿದ್ಧಾರೂಢರ ಮತ್ತು ಗುರುನಾಥಾರೂಢರ ದರ್ಶನ ಪಡೆದರು.

Advertisement

ನಂತರ ಮೂರು ಸಾವಿರ ಮಠಕ್ಕೆ ಭೇಟಿ ನೀಡಿ ಗುರುಸಿದ್ಧೇಶ್ವರರ ಕರ್ತೃ ಗದ್ದುಗೆಗೆ ನಮಿಸಿ, ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದರು.ಬಳಿಕ ಸ್ವಾಮೀಜಿ ಅವರೊಂದಿಗೆ ನಡ್ಡಾ ಅವರು ಒಂದೆರಡು ನಿಮಿಷ ಗೌಪ್ಯವಾಗಿ ಮಾತುಕತೆ ನಡೆಸಿದರು.

ಮಠದಿಂದ ಹೊರಬಂದ ನಂತರ ನಡ್ಡಾ ಅವರು ಜಗದೀಶ ಶೆಟ್ಟರ ಅವರ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

ಈ ಸಂದರ್ಭದಲ್ಲಿ ಹು-ಧಾ. ಪಶ್ಷಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ, ಧಾರವಾಡ ವಿಭಾಗದ ಪ್ರಭಾರಿ ಲಿಂಗರಾಜ ಪಾಟೀಲ, ಪ್ರಭು ನವಲಗುಂದಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next