Advertisement

ಗೋವಾ: ಬಿಜೆಪಿ ಆಡಳಿತಾವಧಿಯಲ್ಲಿ ಅಪರಾಧಗಳ ಪತ್ತೆ ಪ್ರಮಾಣ ಹೆಚ್ಚಾಗಿದೆ- ಜೆ.ಪಿ ನಡ್ಡಾ

06:40 PM Dec 22, 2021 | Team Udayavani |

ಪಣಜಿ: ಗೋವಾ ಡ್ರಗ್ಸ್ ಮತ್ತು ಅಪರಾಧಗಳ ತಾಣವಾಗಿದೆ. ಆದರೆ ಈಗ ಬಿಜೆಪಿ ಆಡಳಿತಾವಧಿಯಲ್ಲಿ ಅಪರಾಧಗಳ ಪತ್ತೆ  ಪ್ರಮಾಣವು ಶೇ. 93 ರಷ್ಟಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನುಡಿದರು.

Advertisement

ಉತ್ತರ ಗೋವಾದಲ್ಲಿ ಬುಧವಾರ ಆಯೋಜಿಸಿದ್ದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಗೋವಾ ಡ್ರಗ್ಸ್ ಮತ್ತು ಅಪರಾಧ ತಾಣವಾಗಿ ಮಾರ್ಪಟ್ಟಿತ್ತು. ಆದರೆ ಬಿಜೆಪಿ ಆಡಳಿತದಲ್ಲಿ ಅಪರಾಧಗಳ ಪತ್ತೆ ಪ್ರಮಾಣವು ಶೇ 93 ಕ್ಕೆ ಏರಿಕೆಯಾಗಿದೆ ಎಂದರು.

ಗೋವಾದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಶೇ 100 ರಷ್ಟು ಟ್ಯಾಪ್ ನೀರನ್ನು ಒದಗಿಸಲಾಗುತ್ತಿದೆ. ಆಯುಷ್ಮಾನ್ ಭಾರತ್ ಮತ್ತು ದೀನ್‍ದಯಾಳ್ ಸ್ವಾಸ್ಥ್ಯ ಸೇವಾ ಯೋಜನೆಯ ಅಡಿಯಲ್ಲಿ ಗೋವಾದ ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯ ರಕ್ಷಣೆ ನೀಡಲಾಗುತ್ತಿದೆ ಎಂದು ನಡ್ಡಾ ನುಡಿದರು.

ಕೋವಿಡ್ ಲಸಿಕೆಯನ್ನು ಮೋದಿ ಟೀಕಾ ಬಿಜೆಪಿ ಟೀಕಾ ಎಂದು ಕರೆದ ವಿರೋಧ ಪಕ್ಷದ ನಾಯಕರನ್ನು ಜೆ.ಪಿ ನಡ್ಡಾ ತರಾಟೆಗೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next