Advertisement
ಮದುವೆಯ ಬಳಿಕ ಹೆಣ್ಣು. ಅಡುಗೆ ಕೆಲಸಕ್ಕೆನೇ ಸಿಮೀತವಾಗಿ ಬಿಡುತ್ತಾಳೆ ಎನ್ನುವ ಎಷ್ಟೋ ಜನರ ನಂಬಿಕೆಗೆ ವಿರುದ್ಧವಾಗಿ ಸಾಧನೆಗೈದ ನಾರಿಯರು ಬಹಳ ಇದ್ದಾರೆ. ಗಂಡನ ಸಹಕಾರ,ಬೆಂಬಲವಿದ್ರೆ ವಿವಾಹಿತ ಹೆಣ್ಣು ಕೂಡ ತನ್ನ ಕನಸನ್ನು ಸಾಕಾರಗೊಳಿಸಿಕೊಳ್ಳಬಹುದು ಎನ್ನುವುದಕ್ಕೆ ಸಾಕ್ಷಿ ಜಮ್ಮು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಜರ್ಕಾ ತಂಜೀಲ್.
Advertisement
ಜರ್ಕಾ ಗೂಗಲ್ ನಲ್ಲಿ ಸಣ್ಣ ಉದ್ಯಮವನ್ನು ಆರಂಭಿಸುವುದು ಹೇಗೆ ಎಂದು ಹುಡುಕುತ್ತಾರೆ. ಆಗ ಅವರಿಗೆ ಸಿಕ್ಕಿದ್ದು ಡಿಟರ್ಜೆಂಟ್ ಯೂನಿಟ್ ಮಾಡುವ ಯೋಜನೆ. ಪ್ಲ್ಯಾನು ಏನೋ ಬಂತು. ಆದರೆ ಮಧ್ಯಮ ವರ್ಗದ ಕುಟುಂಬವಾಗಿರುವ ಕಾರಣ ಅದಕ್ಕೆ ಹಣ ಒದಗಿಸಲು ಜರ್ಕಾ ಕಷ್ಟ ಪಡುತ್ತಾರೆ. ಜರ್ಕಾರ ಅಪ್ಪ ಸರ್ಕಾರಿ ಉದ್ಯೋಗಿ ಆಗಿರುವ ಕಾರಣ ಮಗಳ ಆಸಕ್ತಿಗೆ ತನ್ನ ಉಳಿತಾಯದ ಹಣವನ್ನು ಕೊಟ್ಟು ಪ್ರೋತ್ಸಾಹಿಸುತ್ತಾರೆ. ಜರ್ಕಾರ ಗಂಡ ಕೂಡ ಒಂದಿಷ್ಟು ಆರ್ಥಿಕ ಸಹಾಯ ಮಾಡುತ್ತಾರೆ.
ಡಿಟರ್ಜೆಂಟ್ ಪೌಡರ್ ಮಾಡುವ ಸಾಮಾಗ್ರಿಗಳೆಲ್ಲಾ ಬಂದ ಮೇಲೆ ಅವುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡಲು ಅಡ್ಡಿ ಆದದ್ದು ಕೋವಿಡ್ ಲಾಕ್ ಡೌನ್, ಎರಡು ಬಾರಿಯೂ ಜರ್ಕಾ ಅವರಿಗೆ ತಯಾರಿಸಿದ ಡಿಟರ್ಜೆಂಟ್ ನ್ನು ಮಾರುಕಟ್ಟೆಗೆ ತಲುಪಿಸಲು ಲಾಕ್ ಡೌನ್ ಅಡ್ಡಿ ಆಗಿ ನಷ್ಟ ಆಗುತ್ತದೆ. ಈ ವೇಳೆ ಜರ್ಕಾಳಿಗೆ ಮಾನಸಿಕವಾಗಿ ಮನೆಯವರ ಬೆಂಬಲ ಸಿಗುತ್ತದೆ. ಸೋತು ಕೂರದಂತೆ, ಪ್ರೋತ್ಸಾಹಿಸುವ ಕೈಗಳು ಬೆನ್ನು ತಟ್ಟುತ್ತವೆ.
ಲಾಕ್ ಡೌನ್ ನಿಧಾನಕ್ಕೆ ತೆರವಾದಾಗ ಜರ್ಕಾ ತಮ್ಮ ಕನಸಿನ ಡಿಟರ್ಜೆಂಟ್ ಪೌಡರ್ ನ್ನು ಮತ್ತೆ ಪ್ರಾರಂಭಿಸುತ್ತಾರೆ. ಒಂದು ಸಣ್ಣ ಕೊಠಡಿಯ ಹಾಗಿರುವ ಜಾಗದಲ್ಲಿ ದೊಡ್ಡ ಯಂತ್ರದಲ್ಲಿ ಜರ್ಕಾರವರ ಲೋಕಲ್ ಬ್ರ್ಯಾಂಡ್ ‘ಕಾಶ್ಮೀರ್ ಶೈನ್ ‘ ಡಿಟರ್ಜೆಂಟ್ ಪೌಡರ್ ಸಿದ್ದವಾಗುತ್ತದೆ. ಕಾಶ್ಮೀರದ ಮೊದಲ ಸ್ವಂತ ಬ್ರ್ಯಾಂಡ್ ನಂತೆ ಜರ್ಕಾರ ಡಿಟರ್ಜೆಂಟ್ ಪೌಡರ್ ಮಾರುಕಟ್ಟೆಗೆ ಬರುತ್ತದೆ.
ಊರಿನ ಬ್ರ್ಯಾಂಡ್ ಅದಕ್ಕೊಂಡು, ಹೆಸರು, ಡಿಟರ್ಜೆಂಟ್ ಪೌಡರ್ ಅದರ ಮೇಲೆ ಹೆಸರು. ಅದರೊಳಗೆ ಡಿಟರ್ಜೆಂಟ್ ಪೌಡರ್, ನೋಡಾ ನೋಡುತ್ತಾ ಹಾಗೆ ಜರ್ಕಾರ ಡಿಟರ್ಜೆಂಟ್ ಹೆಸರುಗಳಿಸಲು ಪ್ರಾರಂಭವಾಗುತ್ತದೆ.
ಪೌಡರ್ ತಯಾರಾಗಲು ಒಂದು ಪುಟ್ಟ ಕಾರ್ಖಾನೆ, ಅದರಲ್ಲಿ 12 ಮಂದಿ ಕೆಲಸಗಾರರು ಇದ್ದಾರೆ. ತನ್ನ ಡಿಟರ್ಜೆಂಟ್ ಪೌಡರ್ ನ್ನು ಇನ್ನು ಮುಂದೆ ಎಲ್ಲೆಡೆ ಉತ್ಪಾದಿಸಿ, ತನ್ನ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕ ಯುವತಿರಿಗೆ ಕೆಲಸ ನೀಡಬೇಕೆನ್ನುವುದು ಜರ್ಕಾರ ಕನಸು. ಏನಾದರೂ ಮಾಡಬೇಕು ಎನ್ನುತ್ತಾ ಕೂರುವ ಬದಲು, ಏನಾದರೂ ಮಾಡಿ, ಸಾಧನೆಗೈದವರನ್ನು ನೋಡಿ ಸ್ಪೂರ್ತಿಗೊಂಡು, ಸಾಧಕರಾಗಿ..
-ಸುಹಾನ್ ಶೇಕ್