Advertisement
ಮೋದಿಯ ಅಧಿಕಾರದಿಂದ ಕೆಳಗಿಳಿಸುವವರೆಗೂ ಸಾಯಲ್ಲ: ಮಲ್ಲಿಕಾರ್ಜುನ ಖರ್ಗೆಸ್ವಲ್ಪ ಸಮಯದ ನಂತರ, ಅವರು ಕುಳಿತು ಕೆಲವು ನಿಮಿಷಗಳ ಕಾಲ ಭಾಷಣ ಮಾಡಿದರು, ಆದರೆ ಮಧ್ಯದಲ್ಲಿ ಮತ್ತೆ ನಿಲ್ಲಿಸಿದರು. ಬಳಿಕ ಎದ್ದು ನಿಂತು 2 ನಿಮಿಷ ಭಾಷಣ ಮಾಡಿದರು. “ನನಗೆ ಕೊಂಚ ಆಯಾಸದಿಂದ ತಲೆ ಸುತ್ತು ಬಂದಂತೆ ಆಯಿತು. ಹೀಗಾಗಿ ಕುಳಿತೆ, ಕ್ಷಮಿಸಿ. ಪ್ರಧಾನಿ ನರೇಂದ್ರ ಮೋದಿಯ
ವರನ್ನು ಸೋಲಿಸಿ ಅಧಿಕಾರದಿಂದ ಕೆಳಗೆ ಇಳಿಸುವವರೆಗೆ ನಾನು ಸಾಯುವುದಿಲ್ಲ. ಜಮ್ಮು-ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ತಂದುಕೊಡುವ ವರೆಗೆ ಹೋರಾಟ ಮುಂದುವರಿಸಲಿದ್ದೇವೆ. ನನಗೆ ಈಗ 83 ವರ್ಷ ವಯಸ್ಸು. ನಾನು ಅಷ್ಟು ಬೇಗ ಸಾಯುವುದಿಲ್ಲ’ ಎಂದರು.
Related Articles
Advertisement
ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟದ ಭಾಗವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮತದಾರರ ಮನವೊಲಿಸಲು ಖರ್ಗೆಯವರು ಜಸ್ರೋಟಾ ಮತ್ತು ರಾಮನಗರದಲ್ಲಿ ಸಭೆಗಳ ಉದ್ದೇಶಿಸಿ ಮಾತನಾಡುತ್ತಿದ್ದರು. ಅಕ್ಟೋಬರ್ 1 ರಂದು ಜಮ್ಮು ಮತ್ತು ಕಾಶ್ಮೀರ ಮೂರನೇ ಮತ್ತು ಕೊನೆಯ ಹಂತದ ಚುನಾವಣೆಗೆ ಸಜ್ಜಾಗುತ್ತಿದ್ದು, ಬಹಿರಂಗ ಪ್ರಚಾರಕ್ಕೆ ರವಿವಾರ ಕೊನೆಯ ದಿನವಾಗಿದೆ.
ಖರ್ಗೆ ಪುತ್ರ ಸಚಿವ ಪ್ರಿಯಾಂಕ್ ಟ್ವೀಟ್:
ಜಮ್ಮು ಮತ್ತು ಕಾಶ್ಮೀರದ ಜಸ್ರೋಟಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಭಾಷಣದ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ಸ್ವಲ್ಪ ಅಸ್ವಸ್ಥರಾದ್ದರಿಂದ ಸಮೀಪದ ಆಸ್ಪತ್ರೆಯಲ್ಲಿ ವೈದ್ಯಕೀಯ ತಂಡವು ಪರೀಕ್ಷಿಸಿ ರಕ್ತದ ಒತ್ತಡ ಕಡಿಮೆಯಾದ್ದರಿಂದ ಈ ರೀತಿಯಾಗಿದೆ. ಜನರ ಹಾರೈಕೆಯಿಂದ ಅವರು ಮತ್ತಷ್ಟು ಶಕ್ತಿಯುತವಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.