Advertisement

ಕಾಶ್ಮೀರ ಹಿಮಪಾತ: ಐವರಲ್ಲಿ ಮೂರು ಸೈನಿಕದ ಮೃತ ದೇಹ ಪತ್ತೆ

11:45 AM Dec 19, 2017 | Team Udayavani |

ಶ್ರೀನಗರ : ಕಳೆದ ವಾರ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿನ ಗುರೇಜ್‌ ಮತ್ತು ನೌಗಾಂವ್‌ನಲ್ಲಿ ಭಾರೀ ಹಿಮಪಾತ ಉಂಟಾದ ಸಂದರ್ಭದಲ್ಲಿ ದ ನಾಪತ್ತೆಯಾಗಿದ್ದ ಐವರು ಸೈನಿಕರ ಪೈಕಿ ಮೂವರ ಮೃತ ದೇಹಗಳನ್ನು ಶೋಧ ಮತ್ತು ರಕ್ಷಣಾ ತಂಡ ಪತ್ತೆ ಹಚ್ಚಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. 

Advertisement

ಗುರೇಜ್‌ನಲ್ಲಿ ಇಬ್ಬರು ಸೈನಿಕರ ಮೃತ ದೇಹ ಹಾಗೂ ನೌಗಾಂವ್‌ ನಲ್ಲಿ ಒಬ್ಬ ಸೈನಿಕನ ಮೃತ ದೇಹ ಪತ್ತೆಯಾಯಿತು ಎಂದು ಸೇನಾ ಮೂಲಗಳು ಹೇಳಿವೆ. 

ಇನ್ನೂ ಪತ್ತೆಯಾಗದಿರುವ ಇತರ ಇಬ್ಬರು ಸೈನಿಕರ ಮೃತ ದೇಹಗಳ ಶೋಧ ಕಾರ್ಯ ಈಗಲೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next