Advertisement

ಜ. 30ರಂದು ಸೌಹಾರ್ದಕಾಗಿ ಮಾನವ ಸರಪಳಿ

03:52 PM Jan 24, 2018 | |

ನಗರ : ಕರ್ನಾಟಕದಲ್ಲಿ ಕೋಮು ಸಾಮರಸ್ಯಕ್ಕಾಗಿ ಶಾಂತಿ ಸಂದೇಶ ಸಾರಲು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ರಾಜ್ಯಾದ್ಯಂತ ಏಕಕಾಲಕ್ಕೆ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜ. 30 ರಂದು ಪುತ್ತೂರಿನಲ್ಲಿ ಸೌಹಾರ್ದತೆಗಾಗಿ ಮಾನವ ಸರಪಳಿ ನಡೆಸಲು ತೀರ್ಮಾನಿಸಲಾಯಿತು. ನಗರದ ನಿರೀಕ್ಷಣ ಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ವಿಲ್ಫ್ರೆಡ್  ಡಿ’ಸೋಜಾ ಅವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

Advertisement

ಗಾಂಧಿಕಟ್ಟೆಯಿಂದ ಅಂಚೆ ಕಚೇರಿ
ಸಂಜೆ 4 ಗಂಟೆಗೆ ಪುತ್ತೂರು ಬಸ್‌ ನಿಲ್ದಾಣದ ಗಾಂಧಿಕಟ್ಟೆಯಿಂದ – ಮುಖ್ಯ ಅಂಚೆ ಕಚೇರಿ ತನಕ ಮಾನವ ಸರಪಳಿಯನ್ನು ಹಮ್ಮಿಕೊಳ್ಳಲಾಗುವುದು. ಈ ಮಾನವ ಸರಪಳಿ ವ್ಯಾಪ್ತಿಯಲ್ಲಿ ದೇವಸ್ಥಾನ, ಬಸದಿ, ಚರ್ಚ್‌ ಹಾಗೂ ಮಸೀದಿಯನ್ನೊಳಗೊಂಡಿರುತ್ತದೆ. ಈ ಕಾರ್ಯ ಕ್ರಮವು ಪಕ್ಷತೀತವಾದ ಮಾನವ ಬಂಧುತ್ವ ಬೆಸೆಯುವ ಕಾರ್ಯಕ್ರಮ ಇದಾಗಿದ್ದು, ಸೌಹಾರ್ದತೆಯನ್ನು ಬಯಸುವ ಎಲ್ಲ ಜಾತಿ, ಮತ ಧರ್ಮಗಳ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಲಾಯಿತು.

ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು, ಸಿಪಿಐಎಂ ತಾಲೂಕು ಕಾರ್ಯದರ್ಶಿ ನ್ಯಾಯವಾದಿ ಪಿ. ಕೆ. ಸತೀಶನ್‌, ಪುತ್ತೂರು ನಗರ ಕಾಂಗ್ರೆಸ್‌ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಮಾನವ ಬಂಧುತ್ವದ ವೇದಿಕೆಯ ಮುಖಂಡ ಅಮಳ ರಾಮಚಂದ್ರ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಂಬಾಳ, ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಸದಸ್ಯರಾದ ಎಚ್‌. ಮಹಮ್ಮದ್‌
ಆಲಿ, ಜೊಹರಾ ನಿಸಾರ್‌, ಅನ್ವರ್‌ ಖಾಸಿಂ, ಜೆಸಿಂತಾ ಮಸ್ಕರೇನಸ್‌, ಸ್ವರ್ಣಲತಾ ಹೆಗ್ಡೆ, ಮುಖೇಶ್‌ ಮೊಟ್ಟೆತ್ತಡ್ಕ, ಶೈಲಾ ಪೈ, ಶಕ್ತಿ ಸಿನ್ಹಾ, ನ್ಯಾಯವಾದಿ ನೂರುದ್ದೀನ್‌ ಸಾಲ್ಮರ, ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಅಶ್ರಫ್‌ ಕಲ್ಲೆಗ, ಕಾಂಗ್ರೆಸ್‌ ಸೇವಾದಳದ ಅಧ್ಯಕ್ಷ ಜೋಕಿಂ ಡಿ’ಸೋಜಾ, ಜೋ ಡಿ’ಸೋಜಾ ಚಿಕ್ಕಪುತ್ತೂರು, ನೆಲ್ಲಿಕಟ್ಟೆ ಬಾಲಕೃಷ್ಣ ರೈ, ರಾಜ್ಯ ಕಾಂಗ್ರೆಸ್‌ ಅಲ್ಪಸಂಖ್ಯಾಕ ಘಟಕದ ಸಂಯೋಜಕ ಇಸಾಕ್‌ ಸಾಲ್ಮರ, ಜಿಲ್ಲಾ ವಕ್ಫ್ ಸದಸ್ಯ ಹನೀಫ್‌ ಮಾಡಾವು, ಜೆಡಿಎಸ್‌ ಮುಖಂಡ ಅಬ್ದುಲ್‌ ರಹಿಮಾನ್‌, ಉದ್ಯಮಿ ಡೆನ್ನಿಸ್‌ ಮಸ್ಕರೇನಸ್‌ ಸೇಡಿಯಾಪು, ಬೋಳ್ಳೋಡಿ ಚಂದ್ರಹಾಸ ರೈ, ಖಾದರ್‌ ಹಾಜಿ ಕೆನರಾ, ವೇಣುಗೋಪಾಲ್‌ ಮೊಟ್ಟೆತ್ತಡ್ಕ, ಜಿಲ್ಲಾ ಕಾಂಗ್ರೆಸ್‌ ಕಾರ್ಮಿಕ ಘಟಕದ ಅಧ್ಯಕ್ಷ ಯು. ಲೋಕೇಶ್‌ ಹೆಗ್ಡೆ, ಜೆಡಿಎಸ್‌ ಮುಖಂಡ ಇಬ್ರಾಹಿಂ ಪರ್ಪುಂಜ, ಜೆಡಿಎಸ್‌ ಕಾರ್ಯದರ್ಶಿ ಚಂದ್ರಶೇಖರ ಅಂಚನ್‌, ಮಹೇಶ್ಚಂದ್ರ ಸಾಲಿಯಾನ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಯು.ಟಿ. ತೌಸೀಫ್‌, ಬೆಳ್ಳಿಪ್ಪಾಡಿ ಸುಭಾಸ್‌ ರೈ, ನ್ಯಾಯವಾದಿ ಜಗನ್ನಾಥ್‌ ರೈ, ನ್ಯಾಯವಾದಿ ಸಿದ್ದಿಕ್‌ ಹಾಜಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು.

ಕುತಂತ್ರಕ್ಕೆ ಪ್ರತಿಯಾಗಿ ಪ್ರಾಮಾಣಿಕತೆ
ಕೋಮುವಾದಕ್ಕೆ ಪ್ರತಿಯಾಗಿ ಸಾಮರಸ್ಯವನ್ನು, ದ್ವೇಷಕ್ಕೆ ಪ್ರತಿಯಾಗಿ ಸ್ನೇಹವನ್ನು, ಕುತಂತ್ರಕ್ಕೆ ಪ್ರತಿಯಾಗಿ ಪ್ರಾಮಾಣಿಕತೆಯನ್ನು ನಾವು ಎತ್ತಿ ಹಿಡಿಯಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಸ್ನೇಹದ ಸಾಮರಸ್ಯದ ಸಂದೇಶವನ್ನು ರಾಜ್ಯದ ಎಲ್ಲ ಭಾಗದಲ್ಲಿ ಹರಡುವುದು ಶಾಂತಿಪ್ರಿಯರಾದ ನಮ್ಮೆಲ್ಲರ ಕರ್ತವ್ಯವಾಗಬೇಕು. 1948 ಜ. 30 ರಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಹುತಾತ್ಮರಾದ ಆ ದಿನದಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸಾಮರಸ್ಯವನ್ನು ಮರಳಿ ಗಳಿಸುವ ಉದ್ದೇಶವಾಗಿದೆ ಎಂದು ವಿಲ್ಫ್ರೆಡ್ ಡಿ’ಸೋಜಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next