Advertisement
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ 2020-21ನೇ ಸಾಲಿನ ಮೂರನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡದ ಹಿನ್ನೆಲೆ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಸಚಿವರು, ಕೆಲಸ ಮಾಡದೆ ಅಧಿಕಾರಿಗಳು ಜಿಲ್ಲೆಯನ್ನೇ ಸಾಯಿಸುತ್ತಿದ್ದಾರೆ. ಕೊರೊನಾ, ನೀತಿ ಸಂಹಿತೆ ಹೆಸರಲ್ಲಿ ಜಡಗಟ್ಟಿದ್ದಾರೆ ಎಂದು ಸಿಡಿಮಿಡಿಗೊಂಡರು.
Related Articles
Advertisement
ತುಮಕೂರು ವಿಭಾಗದ ಪಿಆರ್ ಇಡಿಯ ಎಇಇ ಹರೀಶ್ ಬಾಬು ಅವರಿಗೆ ತರಾಟೆ ತೆಗೆದುಕೊಂಡ ಅವರು, ನೀನು ಕೆಲಸ ಮಾಡದಿದ್ದರೂ ‘ನಿನ್ನ ರಕ್ಷಣೆಗೆ ಸೀರೆ ಸುತ್ತುವ ಆ ಕೃಷ್ಣ ಯಾರು?’ ಎಂದು ಪ್ರಶ್ನಿಸಿದರು.
ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗಕ್ಕೆ 2.96 ಕೋಟೆಯಲ್ಲಿ 87 ಲಕ್ಷ ಖರ್ಚಾಗಿದೆ ಉಳಿದ ಹಣ ಯಾವಾಗ ಖರ್ಚು ಮಾಡುತ್ತೀರಿ ಎಂದು ಪ್ರಶ್ನಿಸಿದರು. ನೀರಾವರಿ ಇಲಾಖೆ ಅಧಿಕಾರಿಗಳ ಉತ್ತರಕ್ಕೆ ಸಚಿವರು ಸಿಡಿಮಿಡಿಗೊಂಡರು.
ನಮ್ಮ ತಾಲ್ಲೂಕಿಗೆ ಹೇಮಾವತಿ ನೀರು ಹರಿಸುವಲ್ಲಿ ವಂಚನೆ ಯಾಗಿದೆ ಎಂದು ಕುಣಿಗಲ್ ಶಾಸಕ ಡಾ.ರಂಗನಾಥ್ ಸಚಿವರನ್ನು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ ನಿಮ್ಮ ತಾಲ್ಲೂಕಿಗೆ ಸಾಕಷ್ಟು ಹೇಮಾವತಿ ನೀರು ಹರಿಸಿದ್ದೇವೆ. ಈ ಬಗ್ಗೆ ಮುಂದಿನ ದಿನದಲ್ಲಿ ಚರ್ಚೆಯನ್ನು ಮಾಡೋಣ ಎಂದು ಮಾತಿಗೆ ವಿರಾಮ ಎಳೆದು ಮುಂದಿನ ವಿಷಯದ ಬಗ್ಗೆ ಚರ್ಚೆ ಆರಂಭಿಸಿದರು.