Advertisement
ಹಾಲುಮತ ಮಹಾಸಭಾದ ಆಶ್ರಯದಲ್ಲಿ ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಕನಕ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನಕರು ಬಸವಣ್ಣನಂತೆ ಕ್ರಾಂತಿಕಾರಿಯಾಗಿದ್ದರು. ಹಿಂದುಳಿದ ವರ್ಗದಲ್ಲಿ ಅವತರಿಸಿದ ಕನಕ ದಾಸರು ಇಡೀ ರಾಜ್ಯಕ್ಕೆ ಏಕತಾ ಸಂದೇಶ ನೀಡಿ ದವರು. ಶ್ರೀಕೃಷ್ಣನನ್ನು ತಿರುಗಿಸುವ ಮೂಲಕ ಸಮಾಜದ ಕಣ್ಣು ತೆರೆಸಿದ್ದಾರೆ. ಶ್ರೀಕೃಷ್ಣ ಪೂರ್ವ ದಿಂದ ಪಶ್ಚಿಮಕ್ಕೆ ತಿರುಗಿದ್ದಾನೆ. ಯುವಜನತೆ ಪಾಶ್ಚಾತ್ಯದಿಂದ ನಮ್ಮ ಸಂಸ್ಕೃತಿಯತ್ತ ತಿರುಗಬೇಕು ಎಂದರು.
Related Articles
Advertisement
ಹಾಲುಮತ ಮಹಾಸಭಾ ನನ್ನನ್ನು ಉಡುಪಿಗೆ ಬರುವಂತೆ ಮಾಡಿದ್ದು, ಉಡುಪಿ-ಕಾಗಿನೆಲೆಗೆ ಸೇತುವೆಯಾಗಿದೆ. ಪೇಜಾವರ ಶ್ರೀಗಳು ಕನಕನ ವಿಚಾರದ ಕುರಿತಂತೆ ಎಲ್ಲ ಅನುಮಾನಗಳನ್ನು ದೂರ ಮಾಡಿದ್ದಾರೆ ಎಂದರು.
ಬುದ್ಧಿಜೀವಿಗಳಿಂದ ಅಪಚಾರಕೆಲವು ಬುದ್ಧಿಜೀವಿಗಳು ಪ್ರಚಾರಕ್ಕಾಗಿ ಕನಕನಭಕ್ತಿಗೆ ಕೃಷ್ಣ ತಿರುಗಿ ನಿಂತಿಲ್ಲ ಎನ್ನುತ್ತಾರೆ. ಆದರೆ ಕನಕನ ಕಿಂಡಿ ಕನಕನ ಪವಾಡ ಇದೆಲ್ಲ ಇತಿಹಾಸ. ಯಾರೂ ಇದನ್ನು ಬದಲಿಸಲು ಸಾಧ್ಯವಿಲ್ಲ. ಕನಕನ ಕಿಂಡಿಯಿಂದ ಉಡುಪಿಗೂ ಕೀರ್ತಿ ಬಂದಿದೆ ಎಂದು ಕಾಗಿನೆಲೆ ಸ್ವಾಮೀಜಿ ಹೇಳಿದರು. ಶ್ರೀ ಪೇಜಾವರ ಮಠದ ಕಿರಿಯ ಯತಿ, ಸುವರ್ಣಮುಖೀ ಸಂಸ್ಕೃತಧಾಮದ ಸಂಸ್ಥಾಪಕ ಆಚಾರ್ಯ ಡಾ| ಅಮೆರಿಕ ನಾಗರಾಜ್, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ, ಮೈಸೂರು ಶಾಸಕ ಎಂ.ಕೆ. ಸೋಮಶೇಖರ, ವಿಶ್ವನಾಥ್, ರಾಜಶೇಖರ ಇಟ್ನಾಳ, ಗಾಜಿಗೌಡ್ರು, ಡಾ| ನಾಗಾಲಕ್ಷ್ಮೀ, ಪಳನಿಸ್ವಾಮಿ, ಪುಷೋತ್ತಮ ಮರಿಗೌಡ, ರಾಮಪ್ಪ, ಆರ್. ಶಂಕರ್ ಉಪಸ್ಥಿತರಿದ್ದರು. ಮಾಲೇಗೌಡ ಪ್ರಸ್ತಾವನೆಗೈದರು. ರುದ್ರಣ್ಣ ಗುಳಗುಳಿ ಸ್ವಾಗತಿಸಿದರು. ಕನಕ-ಉಡುಪಿಗೆ ಅವಿನಾಭಾವ ಸಂಬಂಧವಿದೆ. ಕಾಗಿನೆಲೆ ಮಠದ ಶಾಖೆಯನ್ನು ಉಡುಪಿಯಲ್ಲಿ ಸ್ಥಾಪಿಸಲು ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಈ ವಿಚಾರದ ಕುರಿತಾಗಿ ಮುಖ್ಯಮಂತ್ರಿಗಳ ಜತೆಗೂ ಚರ್ಚಿಸುತ್ತೇನೆ. 50 ವರ್ಷದ ಹಿಂದಿನ ಕನಕ ಗುಡಿಯ ಪುನರ್ ನಿರ್ಮಾಣಕ್ಕೂ ಅನುದಾನ ತರಲು ಪ್ರಯತ್ನಿಸುತ್ತೇನೆ.
– ಪ್ರಮೋದ್ ಮಧ್ವರಾಜ್
ಜಿಲ್ಲಾ ಉಸ್ತುವಾರಿ ಸಚಿವ ನಿಮ್ಮದು ಗಂಗಾಮತ-ನಮ್ಮದು ಹಾಲುಮತ
ಹಾಲುಮತ ಸಮುದಾಯದ ವತಿಯಿಂದ ಕಾಗಿನೆಲೆ ಶ್ರೀಗಳು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಸಮ್ಮಾನಿಸಿ, ನಿಮ್ಮದು ಗಂಗಾಮತ ನಮ್ಮದು ಹಾಲುಮತ. ಯಾವುದೇ ಪ್ರಾಣಿಯೂ ಜನ್ಮತಾಳಿದ ಕೂಡಲೇ ಬೇಕಾ ಗಿರುವುದು ಹಾಲು. ಅದು ಬೆಳೆಯುವಾಗ ಬೇಕಾಗಿರುವುದು ನೀರು. ಹೀಗಾಗಿ ಹಾಲುಮತ-ಗಂಗಾಮತ ಕೂಡಿ ಜಗತ್ತು ಆಳಬಹುದು ಎಂದರು. ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಕನಕನ ಕಿಂಡಿಯ ಮೂಲಕವೇ ಶ್ರೀಕೃಷ್ಣನ ದರ್ಶನ ಪಡೆದರು. ಆದರೆ ಶ್ರೀಕೃಷ್ಣ ಮಠದೊಳಗೆ ಪ್ರವೇಶಿಸಲಿಲ್ಲ. ಸಾವಿರಾರು ಪೂರ್ಣಕುಂಭ, ಚೆಂಡೆ, ಸ್ತಬ್ಧಚಿತ್ರಗಳೊಂದಿಗೆ ವೈಭವದ ಮೆರವಣಿಗೆಯಲ್ಲಿ ನಗರದ ಜೋಡುಕಟ್ಟೆಯಿಂದ ಸರ್ವಿಸ್ ಬಸ್ ನಿಲ್ದಾಣ ಮಾರ್ಗವಾಗಿ ಕಲ್ಸಂಕ ಮೂಲಕ ರಥಬೀದಿಗೆ ಆಗಮಿಸಿ ದರು. ಮಠದ ದಿವಾನ ರಘುರಾಮಾಚಾರ್ಯ ಹೂ ಮಾಲೆ ಹಾಕಿ ಸ್ವಾಗತಿಸಿದರು. ಪೇಜಾವರ ಶ್ರೀಗಳಿಗೆ ಆಹ್ವಾನ
ಪರ್ಯಾಯ ಪೇಜಾವರ ಶ್ರೀಗಳಿಗೆ ಕಾಗಿನೆಲೆ ಶ್ರೀಗಳು ಕರಿಯ ಕಂಬಳಿಯನ್ನು ಹಾಕಿ ಗೌರವಿಸಿ, ಆರೋಗ್ಯಯುತವಾಗಿರುವಂತೆ ಹಾರೈಸಿದರು. 2018 ಫೆಬ್ರವರಿಯಲ್ಲಿ ನಡೆಯುವ ಕಾಗಿನೆಲೆ ಗುರುಪೀಠದ ರಜತಮಹೋತ್ಸವಕ್ಕೆ ಪೇಜಾವರ ಶ್ರೀಗಳಿಗೆ ಆಹ್ವಾನ ನೀಡಿದರು. ಕರಿಯ ಕಂಬಳಿ ನಮ್ಮ ಸಂಸ್ಕೃತಿಯ ಪ್ರತೀಕ. ಕನಕದಾಸರು ಕರಿಯ ಕಂಬಳಿ ಹೊದ್ದು ಭಕ್ತಿ ಸಾಗರವನ್ನೇ ಹರಿಸಿದ್ದಾರೆ ಎಂದರು.