Advertisement

ಇವಾಂಕಾ ಆಪ್ತ ಸಹಾಯಕಿಗೂ ಕೋವಿಡ್ 19 ವೈರಸ್,ಅಮೆರಿಕದಲ್ಲಿ ಸಾವಿನ ಸಂಖ್ಯೆ 77ಸಾವಿರಕ್ಕೆ ಏರಿಕೆ

08:28 AM May 10, 2020 | Nagendra Trasi |

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಆಪ್ತ ಸಹಾಯಕಿಗೂ ಕೋವಿಡ್ 19 ಸೋಂಕು ತಗುಲಿರುವುದಾಗಿ ವರದಿ ತಿಳಿಸಿದೆ. ಇವಾಂಕಾ ಆಪ್ತ ಸಹಾಯಕಿ ಸೇರಿದಂತೆ ಶ್ವೇತಭವನದ ಮೂವರು ಸಿಬ್ಬಂದಿಗಳು ಕೋವಿಡ್ ಸೋಂಕಿಗೆ ಒಳಗಾದಂತಾಗಿದೆ.

Advertisement

ಡೊನಾಲ್ಡ್ ಟ್ರಂಪ್ ಪುತ್ರಿಯ ಆಪ್ತ ಸಹಾಯಕಿ ಹಲವು ವಾರಗಳಿಂದ ಇವಾಂಕ ಬಳಿ ಸಂಪರ್ಕದಲ್ಲಿ ಇರಲಿಲ್ಲ ಎಂದು ಸಿಎನ್ ಎನ್ ವರದಿ ವಿವರಿಸಿದೆ. ಕಳೆದ ಎರಡು ತಿಂಗಳಿನಿಂದ ಆಪ್ತ ಸಹಾಯಕಿ ಟೆಲಿವರ್ಕಿಂಗ್ ಮೂಲಕ ಕೆಲಸ ಮಾಡುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಪರೀಕ್ಷಿಸಿದಾಗ ಕೋವಿಡ್ ಪಾಸಿಟಿವ್ ವರದಿ ಬಂದಿದೆ ಎಂದು ತಿಳಿಸಿದೆ.

ಶುಕ್ರವಾರ ಇವಾಂಕಾ ಹಾಗೂ ಪತಿ ಜಾರೆಡ್ ಕುಶ್ನೇರ್ ಅವರನ್ನು ಪರೀಕ್ಷಿಸಿದ್ದು ನೆಗೆಟಿವ್ ವರದಿ ಬಂದಿರುವುದಾಗಿ ಹೇಳಿದೆ. ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸೆ ಮಾಧ್ಯಮ ಕಾರ್ಯದರ್ಶಿ ಮಿಲ್ಲರ್ ಗೆ ಕೋವಿಡ್ 19 ವೈರಸ್ ತಗುಲಿರುವುದು ದೃಢಪಟ್ಟ ನಂತರ ಈ ಬೆಳವಣಿಗೆ ನಡೆದಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next