Advertisement

ಯಡಿಯೂರಪ್ಪ ಪದತ್ಯಾಗಕ್ಕೆ ಐವನ್‌ ಆಗ್ರಹ

02:10 AM Nov 06, 2019 | Team Udayavani |

ಮಂಗಳೂರು: ಅನರ್ಹ ಶಾಸಕರ ನಡೆಯನ್ನು ಸಮರ್ಥಿಸಿಕೊಂಡಿರುವ ಆಡಿಯೋದಲ್ಲಿರುವ ಧ್ವನಿ ತನ್ನದೇ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಆಗ್ರಹಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಸ್ವಯಂ ಪ್ರೇರಿತ ರಾಗಿ ರಾಜೀನಾಮೆ ನೀಡಿಲ್ಲ. ಅದರ ಹಿಂದೆ ಬಿಜೆಪಿ ಇದೆ. ಸಿಎಂ ಅದನ್ನು ಒಪ್ಪಿಕೊಂಡಿ ರುವ ಧ್ವನಿ ಮುದ್ರಿಕೆಯನ್ನು ನಾವು ಸರ್ವೋಚ್ಚ ನ್ಯಾಯಾಲಯದ ಮುಂದೆ ಹಾಜರು
ಪಡಿಸಿದ್ದೇವೆ. ಅದರ ವಿಚಾರಣೆ ನಡೆಯಲಿದೆ. ರಾಜ್ಯಪಾಲರಿಗೂ ದೂರು ನೀಡಲಾಗಿದೆ. ಈಗ ಬಿಜೆಪಿಯ ಬಣ್ಣ ಬಯಲಾಗಿದೆ ಎಂದರು. ಕಾಂಗ್ರೆಸ್‌ ಮುಖಂಡರಾದ ಸದಾಶಿವ ಉಳ್ಳಾಲ, ಲಾವಣ್ಯಾ ಬಲ್ಲಾಳ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next