Advertisement

ದುರಸ್ತಿಗೆ ಇನ್ನೂ ಕೂಡಿ ಬಂದಿಲ್ಲ ಸಮಯ!

10:03 AM Dec 27, 2017 | Team Udayavani |

ಸುರತ್ಕಲ್‌: ಸುರತ್ಕಲ್‌ ಬಳಿಕ ಮಂಗಳೂರು ನಂತೂರು ವರೆಗೆ ಸಿಗುವ ಹೆದ್ದಾರಿ ಮಾತ್ರ ಹೀಗೇಕೆ ಎಂಬ ಪ್ರಶ್ನೆ ಸವಾರರಲ್ಲಿ ಮೂಡುವ ನಿತ್ಯದ ಪ್ರಶ್ನೆ. ಕಾರಣ ಅಲ್ಲಲ್ಲಿ ಕಾಣುವ ಹೊಂಡ, ಡಾಮರು ಕಿತ್ತು ಮಣ್ಣು ಕಾಣುತ್ತಿರುವ ಸರ್ವಿಸ್‌ ರಸ್ತೆಗಳು. ಹೊನ್ನಕಟ್ಟೆ, ಬೈಕಂಪಾಡಿ,
ಕೈಗಾರಿಕಾ ಪ್ರದೇಶ, ಸರ್ವಿಸ್‌ ರಸ್ತೆಗಳೇ ಇಲ್ಲದ ಹೆದ್ದಾರಿ. ಇದರಿಂದ ಅಪಘಾತ ಕಡಿಮೆಯಾಗಲು ಮಾಡಿದ ಚತುಷ್ಪಥ
ರಸ್ತೆಯ ಉದ್ದೇಶವೇ ಬುಡ ಮೇಲಾಗಿದೆ.

Advertisement

ಭರವಸೆ ಉಳಿಸಿಕೊಳ್ಳುವಲ್ಲಿ
ನಿತ್ಯ ದ್ವಿಚಕ್ರ ವಾಹನ ಸವಾರರಲ್ಲಿ ಕೆಲವು ನತದೃಷ್ಟರು ಆಸ್ಪತ್ರೆಯ ಕದತಟ್ಟುವಂತಾದರೆ, ವಾಹನಗಳ ಬಿಡಿ ಭಾಗಗಳೇ ಕಳಚಿ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೋಸಿ ಹೋದ ನಾಗರಿಕ, ವಿವಿಧ ಸಂಘಟನೆಗಳು ಪ್ರತಿಭಟಿಸಿ ರಾ.ಹೆ. ಪ್ರಾಧಿಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದರು. 

ಡಿ. 15ರ ಒಳಗಾಗಿ ಕಾಮಗಾರಿ ಆರಂಭಿಸುವ ಭರವಸೆಯೂ ಸಿಕ್ಕಿತ್ತು. ಭರವಸೆ ಉಳಿಸಿಕೊಳ್ಳುವಲ್ಲಿ ಇಲಾಖೆ ವಿಫಲವಾಗಿದ್ದು, ಪ್ರತಿಭಟನೆ ಹಮ್ಮಿಕೊಂಡ ಇಲಾಖೆಗಳು ಮತ್ತೆ ರಸ್ತೆಗಿಳಿಯಲು ಸಜ್ಜಾಗಿವೆ. ಡಿವೈಎಫ್‌ಐ ಬುಧವಾರ ಬೈಕಂಪಾಡಿ ಯಲ್ಲಿ ಅಣುಕು ಶವ ದಹನ ನಡೆಸಲು ನಿರ್ಧರಿಸಿದೆ. ಬೈಕಂಪಾಡಿಯಿಂದ ಪಾದಯಾತ್ರೆ ಮೂಲಕ ತೆರಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಿದೆ.

ಕಾಮಗಾರಿಗೆ ಮೀನ ಮೇಷ
ರಾಷ್ಟ್ರೀಯ ಕಾರ್ಮಿಕ ಸಂಘಟನೆ ಇಂಟಕ್‌ ರಾಷ್ಟ್ರೀಯ ಹೆದ್ದಾರಿ ಪ್ರಾ ಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಜ. 1ರಿಂದ ಪ್ರತಿಭಟನೆಗೆ ನಿರ್ಧರಿಸಿದೆ. 8 ಕೋಟಿ ರೂ. ದುರಸ್ತಿಗಾಗಿ ಬಿಡುಗಡೆಯಾಗಿದ್ದರೂ ಮೀನ ಮೇಷ ಎಣಿಸಲಾಗುತ್ತಿದೆ ಎಂದು ಇಂಟಕ್‌ ಜಿಲ್ಲಾಧ್ಯಕ್ಷ ಮನೋಹರ್‌ ಶೆಟ್ಟಿ ಆರೋಪಿಸಿದರು.

ಭೀತಿಯಲ್ಲಿ ಸಣ್ಣ ವಾಹನಗಳು!
ಸಣ್ಣ ವಾಹನಗಳು ಇಲ್ಲಿನ ಹೆದ್ದಾರಿಯಲ್ಲಿ ಆತಂಕದಿಂದಲೇ ಓಡಾಡುವ ಸ್ಥಿತಿಯಿದೆ. ಒಂದೆರಡು ಬಾರಿ ಜಲ್ಲಿ ಸುರಿಯಲಾಗಿತ್ತಾದರೂ ಕೆಲವೇ ದಿನದಲ್ಲಿ ಮತ್ತೆ ಯಥಾ ಸ್ಥಿತಿ ಮುಂದುವರಿದಿದೆ. ಇಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚರಂಡಿ ನಿರ್ಮಾಣಕ್ಕೆ ಇಲಾಖೆ ಮುಂದಾಗಿತ್ತಾದರೂ ಗುತ್ತಿಗೆದಾರನಿಗೆ ಪಾವತಿ ಆಗದ ಕಾರಣ ಕಾಮಗಾರಿ ಅಪೂರ್ಣಗೊಂಡಿದೆ. ಕೆಟ್ಟು ಹೋದ ರಸ್ತೆಗಳನ್ನು ಶೀಘ್ರದಲ್ಲಿ ಸರಿಪಡಿಸಿ ಸುಗಮ ಸಂಚಾರಕ್ಕೆ ಅಣಿ ಮಾಡಬೇಕಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಕಾರ ನಿರ್ಲಕ್ಷ್ಯ ತಾಳಿರುವುದರಿಂದ ಬೇರೆ ಉಪಾಯವಿಲ್ಲದೆ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್‌ ಅಳವಡಿಸಿದ್ದಾರೆ.

Advertisement

ವಿಳಂಬ ಮಾಡಿದಲ್ಲಿ ಶಿಸ್ತು ಕ್ರಮ
ಹೆದ್ದಾರಿ ದುರಸ್ತಿಗೆ ಈಗಾಗಲೇ ಟೆಂಡರ್‌ ನೀಡಲಾಗಿದೆ. ಗುತ್ತಿಗೆದಾರರಿಗೆ ಈಗಾಗಲೇ ಕಾಮಗಾರಿ ಆರಂಭಿಸುವಂತೆ ಸೂಚಿಸಿ ನೋಟಿಸ್‌ ನೀಡಲಾಗಿದೆ. ವಿಳಂಬ ಮಾಡಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
 – ಅಜಿತ್‌ ಕುಮಾರ್‌, ಎಂಜಿನಿಯರ್‌ ರಾ.ಹೆ. ಇಲಾಖೆ

ಸಭೆ ಕರೆದು ಚರ್ಚಿಸುವೆ
ಡಿ. 15ರ ಬಳಿಕಆರಂಭಿಸುವುದಾಗಿ ಹೆದ್ದಾರಿ ಅಧಿಕಾರಿಗಳು ಭರವಸೆ ನೀಡಿದ್ದರು. ಇದಕ್ಕಾಗಿ ವಿವಿಧ ಸಂಘಟನೆ ಪ್ರತಿಭಟನೆ ಮಾಡಿದರೂ ವಿಳಂಬವಾಗುತ್ತಿದೆ. ಮುಂದಿನ ಸೋಮವಾರ ಎನ್‌ಎಚ್‌ಎಐ ಅ ಧಿಕಾರಿಗಳ ಸಭೆ ಕರೆದು ಚರ್ಚಿಸುತ್ತೇನೆ.
– ಮೊಯಿದಿನ್‌ ಬಾವಾ, ಶಾಸಕರು. 

Advertisement

Udayavani is now on Telegram. Click here to join our channel and stay updated with the latest news.

Next