Advertisement

ಜೋಪಾನ…ಇದು ಜೀವ ಮೂಡುವ ಸಮಯ

09:21 AM Jan 16, 2020 | mahesh |

ಗರ್ಭಿಣಿಯರ ದೇಹ ಮತ್ತು ಮನಸ್ಸು, ಅತ್ಯಂತ ಸೂಕ್ಷ್ಮ. ಇನ್ನೊಂದು ಜೀವವನ್ನು ಒಡಲೊಳಗೆ ಇಟ್ಟುಕೊಂಡಿರುವ ಆ ಅವಧಿಯಲ್ಲಿ ಗರ್ಭಿಣಿಯು ತನ್ನ ಆರೋಗ್ಯದತ್ತ ಹೆಚ್ಚಿನ ಕಾಳಜಿ ವಹಿಸಬೇಕು. ಈ ಸಮಯದಲ್ಲಿ ದೇಹ ಮತ್ತು ಮನಸ್ಸಿನಲ್ಲಿ ಅನೇಕ ಬದಲಾವಣೆಗಳು ಆಗುವುದರಿಂದ, ಆಗಾಗ್ಗೆ ವೈದ್ಯಕೀಯ ಪರೀಕ್ಷೆ ಹಾಗೂ ಸಲಹೆಗಳನ್ನು ಪಡೆಯಬೇಕಾಗುತ್ತದೆ.

Advertisement

ಯೋಗ-ಧ್ಯಾನ-ವ್ಯಾಯಾಮ
-ಗರ್ಭಿಣಿಯರು ಪ್ರತಿನಿತ್ಯ ಯೋಗ, ಧ್ಯಾನ ಮಾಡಿದರೆ, ದೇಹದ ಜಡತ್ವ ಹೋಗಲಾಡಿಸಿ, ಮನಸ್ಸಿನ ಹಿಡಿತ ಸಾಧಿಸಲು ಸಾಧ್ಯ.

-ಮೊದಲ ಮೂರು ತಿಂಗಳು ಬಹಳ ಮಹತ್ವದ್ದಾಗಿದ್ದು,ಯೋಗಾಸನ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಈ ತ್ತೈಮಾಸಿಕದಲ್ಲಿ ಸರಳ ಉಸಿರಾಟದ ವ್ಯಾಯಾಮ, ವಿಶ್ರಾಂತಿ ಹಾಗೂ ಧ್ಯಾನ ಅನುಸರಿಸಬೇಕು. ಇವು ವಾಂತಿ, ತಲೆ ಸುತ್ತುವಿಕೆ, ಆಯಾಸ ಮುಂತಾದ ತೊಂದರೆಗಳನ್ನು ನಿವಾರಿಸಲು ಸಹಕಾರಿ.

-ಎರಡನೇ ಮತ್ತು ಮೂರನೇ ತ್ತೈಮಾಸಿಕ ಅವಧಿಯಲ್ಲಿ ಯೋಗಾಸನ ಮಾಡುವಾಗ ಮೆತ್ತನೆಯ ದಿಂಬು, ಕುಶನ್‌, ಕುರ್ಚಿಗಳನ್ನು ಬಳಸುವುದು ಆರಾಮದಾಯಕ. ಇವು ಗರ್ಭಿಣಿಯರಲ್ಲಿ ಕಂಡು ಬರುವ ಕಾಲು ಸೆಳೆತ, ಬೆನ್ನು ನೋವನ್ನು ನಿವಾರಿಸುತ್ತವೆ. ದೇಹದಲ್ಲಿ ರಕ್ತ ಸಂಚಾರವು ಸರಾಗವಾಗಿ, ಹೆರಿಗೆ ಸಂದರ್ಭದ ನೋವು ಕಡಿಮೆಯಾಗುವುದರ ಜತೆಗೆ ಸಹಜ ಹೆರಿಗೆಗೆ ಸುಲಭ ದಾರಿಯಾಗುತ್ತದೆ.

-ಗರ್ಭಿಣಿಯರು ಹೆಚ್ಚಿನ ಭಾರ ಎತ್ತುವ ಹಾಗೂ ಹೊಟ್ಟೆಯ ಮೇಲೆ ಮಲಗಿ ಮಾಡುವ ವ್ಯಾಯಾಮಗಳನ್ನು ಮಾಡಬಾರದು. ಕಷ್ಟವಿರುವ ಯಾವುದೇ ಭಂಗಿಗಳನ್ನು ಮಾಡುವ ಪ್ರಯತ್ನ ಬೇಡ.

Advertisement

-ಧ್ಯಾನ ಮಾಡುವುದರಿಂದ ಧನಾತ್ಮಕ ವಿಚಾರಗಳತ್ತ ಮನಸ್ಸು ಹರಿಯಲು ಸಾಧ್ಯವಾಗಿ ಒತ್ತಡವೂ ಕಡಿಮೆಯಾಗುತ್ತದೆ.

ಆಹಾರ ಕ್ರಮ
-ಗರ್ಭಿಣಿಯರಿಗೆ ಪ್ರತಿನಿತ್ಯ 200-300 ಗ್ರಾಂ ಕ್ಯಾಲರಿ ಶಕ್ತಿ ಹೆಚ್ಚಾಗಿ ಬೇಕಾಗಿರುತ್ತದೆ. ಸಸ್ಯಾಹಾರ ಕ್ರಮದಿಂದ ಹೆಚ್ಚಿನ ಪ್ರೋಟೀನ್‌ ಸಿಗುವುದರೊಂದಿಗೆ ದೇಹಕ್ಕೆ ಶಕ್ತಿಯೂ ದೊರಕುತ್ತದೆ.ಇದು ಮಗುವಿನ ಬೆಳವಣಿಗೆಗೂ ಸಹಕಾರಿ.

-ಕಬ್ಬಿಣಾಂಶದ ಆಹಾರಗಳ ಸೇವನೆಯಿಂದ ತಾಯಿಯಲ್ಲಿ ರಕ್ತ ಹೀನತೆ ನಿವಾರಿಸಬಹುದು.
-ಒಣಹಣ್ಣುಗಳು, ಧಾನ್ಯ, ಬೇಳೆ ಕಾಳುಗಳನ್ನು ಸೇವಿಸುವುದರಿಂದ ಸಾಕಷ್ಟು ಪೋಷಕಾಂಶ ದೊರಕುತ್ತದೆ.

-ವಿಟಮಿನ್‌ ಡಿ ಹಾಗೂ ಕ್ಯಾಲ್ಸಿಯಂಯುಕ್ತ ಆಹಾರಗಳು ಅವಶ್ಯಕವಾಗಿ ದೇಹಕ್ಕೆ ಸಿಗಬೇಕು.

-ಹಸಿರು ತರಕಾರಿಗಳು, ಹಾಲು, ಹಣ್ಣುಗಳನ್ನು ಸೇವಿಸಬೇಕು.

-ಹೆಚ್ಚಿನ ಪ್ರಮಾಣದಲ್ಲಿ ಎಳನೀರು, ಹಣ್ಣಿನ ರಸ, ಮಜ್ಜಿಗೆ ಕುಡಿಯುವುದರಿಂದ ವಾಂತಿ,ತಲೆ ಸುತ್ತುವಿಕೆ ನಿವಾರಿಸಬಹುದು.

-ಡಾ. ಶ್ರೀಲತಾ ಪದ್ಯಾಣ

Advertisement

Udayavani is now on Telegram. Click here to join our channel and stay updated with the latest news.

Next