Advertisement
ಗ್ಯಾಜೆಟ್ ಗಳನ್ನು ಕೊಳ್ಳಬೇಕೆಂದುಕೊಂಡಿರುವವರು ಇನ್ನೊಂದು ವಾರ ಕಾಯುವುದೊಳಿತು! ಆನ್ ಲೈನ್ ಮಾರಾಟದ ದೈತ್ಯ ಸಂಸ್ಥೆಗಳಾದ ಅಮೆಝಾನ್ ಮತ್ತು ಫ್ಲಿಪ್ ಕಾರ್ಟ್ ವರ್ಷಕ್ಕೊಮ್ಮೆ ಮಾತ್ರ ಆಯೋಜಿಸುವ ಭಾರಿ ರಿಯಾಯಿತಿ ಮಾರಾಟದ ದಿನಗಳು ಮತ್ತೆ ಬಂದಿವೆ! ಫ್ಲಿಪ್ ಕಾರ್ಟ್, ಬಿಗ್ ಬಿಲಿಯನ್ ಡೇಸ್ ಎಂಬ ಹೆಸರಿನಲ್ಲಿ ಹಾಗೂ ಅಮೆಝಾನ್ ಕಂಪನಿ, ಗ್ರೇಟ್ ಇಂಡಿಯನ್ ಫೆಸ್ಟಿವಲ್ ಹೆಸರಿನಲ್ಲಿ ಮಾರಾಟ ಮೇಳ ಹಮ್ಮಿಕೊಂಡಿವೆ.
Related Articles
Advertisement
ಸಾಮಾನ್ಯವಾಗಿ, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಕಂಪೆನಿಗಳು ಗಣರಾಜ್ಯೋತ್ಸವಕ್ಕೆ, ಸ್ವಾತಂತ್ರ್ಯ ದಿನಾಚರಣೆಗೆ, ದೀಪಾವಳಿಗೆ ರಿಯಾಯಿತಿ ಮಾರಾಟ ಮಾಡುತ್ತವೆ. ಆಗಲೂ ಅನೇಕ ಆಫರ್‌ಗಳಿರುತ್ತವೆ. ಆದರೆ ಬಿಗ್ ಬಿಲಿಯನ್ ಡೇ ಹೆಸರಿನ ಮಾರಾಟದಲ್ಲಿ ಅತ್ಯಂತ ಹೆಚ್ಚಿನ ರಿಯಾಯಿತಿ ಗ್ರಾಹಕರಿಗೆ ದೊರಕುತ್ತದೆ. ಮೊಬೈಲ್ ಕಂಪೆನಿಗಳು ಅಮೇಜಾನ್ ಅಥವಾ ಫ್ಲಿಪ್‌ಕಾರ್ಟ್‌ಗೆ ಎಕ್ಸ್‌ಕ್ಲುಸಿವ್ ಆಗಿ ಮಾರಾಟಕ್ಕೆ ಕೊಡುವ ಮೊಬೈಲ್‌ಗಳಿಗೆ ಅದರ ತಯಾರಿಕಾ ವೆಚ್ಚಕ್ಕಿಂತ ಅಲ್ಪಲಾಭ ಇಟ್ಟುಕೊಂಡು ಮಾರಾಟಕ್ಕೆ ಬಿಟ್ಟಿರುತ್ತವೆ.
ಎಂದಿನ ದಿನಗಳಲ್ಲೂ ಇವುಗಳ ದರ ಅಂಗಡಿಗಳಲ್ಲಿ ಕೊಳ್ಳುವ ಮೊಬೈಲ್‌ಗಳಿಗಿಂತ ಕಡಿಮೆಯೇ. ಆದರೆ ಬಿಗ್ ಬಿಲಿಯನ್ ಡೇ ಅಥವಾ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸಂದರ್ಭದಲ್ಲಿ ಇನ್ನೂ ಕಡಿಮೆಯಾಗುತ್ತದೆ. ಉದಾಹರಣೆಗೆ ಒಂದು ಮೊಬೈಲ್ ಅಮೇಜಾನ್ ಅಥವಾ ಫ್ಲಿಪ್‌ಕಾರ್ಟ್‌ನಲ್ಲಿ 15 ಸಾವಿರಕ್ಕೆ ಮಾರಾಟವಾಗುತ್ತಿದೆ ಎಂದುಕೊಳ್ಳೋಣ. ಆಫರ್ ಸಂದರ್ಭದಲ್ಲಿ ಅದನ್ನು 13 ಸಾವಿರ ಅಥವಾ 12 ಸಾವಿರಕ್ಕೆ ಮಾರಾಟ ಮಾಡಲಾಗುತ್ತದೆ. ಜೊತೆಗೆ ಬ್ಯಾಂಕ್ ಗಳ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಮತ್ತೆ ಎಕ್ಸ್‌ಟ್ರಾ ಶೇ. 10ರಷ್ಟು ರಿಯಾಯಿತಿ ದೊರಕುತ್ತದೆ!
ಕೆಲವಕ್ಕಂತೂ 10 ರಿಂದ 15 ಸಾವಿರದವರೆಗೂ ಡಿಸ್ಕೌಂಟ್ ನೀಡಲಾಗುತ್ತದೆ! ಈ ಬಾರಿಯ ಸೇಲ್ ಎಂದು?: ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ತಮ್ಮ ವೆಬ್ ಸೈಟ್‌ನಲ್ಲಿ ಕ್ರಮವಾಗಿ ಬಿಗ್‌ಬಿಲಿಯನ್ ಡೇಸ್ ಹಾಗೂ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಅನ್ನು ಘೋಷಿಸಿವೆ. ಅದರೆ ಲೇಖನ ಪ್ರಿಂಟ್‌ಗೆ ಹೋಗುವಾಗ ಯಾವತ್ತು ಎಂದು ದಿನಾಂಕ ಪ್ರಕಟಿಸಿರಲಿಲ್ಲ. ಬಹುತೇಕ ಸೆಪ್ಟೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ಮೊದಲ ಬಾರ ಮೂರರಿಂದ ನಾಲ್ಕು ದಿನಗಳ ಕಾಲ ಈ ಸೇಲ್ ಇರುತ್ತದೆ. ಅಮೆಜಾನ್ ಎಸ್‌ಬಿಐ ಕಾರ್ಡ್‌ಗೆ ಹಾಗೂ ಫ್ಲಿಪ್‌ಕಾರ್ಟ್ ಎಚ್‌ಡಿಎಫ್ಸಿ ಕಾರ್ಡ್‌ಗೆ ಎಕ್ಸ್‌ಟ್ರಾ ಡಿಸ್ಕೌಂಟ್ ಆಫರ್ ನೀಡಲಿವೆ.
ಆಫರ್ ಇರುವ ದಿನ ಮೊದಲಿಗೇ ನೀವು ಕೊಳ್ಳಬೇಕೆಂದಿರುವ ಗ್ಯಾಜೆಟ್‌ಗಳನ್ನು ಕೊಂಡುಬಿಡಿ. ಇಲ್ಲವಾದರೆ ಔಟ್ ಆಫ್ ಸ್ಟಾಕ್ ಆಗಿಬಿಡುತ್ತವೆ. ಯಾವ ಯಾವ ಗ್ಯಾಜೆಟ್‌ಗಳಿಗೆ ಆಫರ್ ಇದೆ ಎಂದು ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್‌ನಲ್ಲಿ ಮಾಹಿತಿ ಇರುತ್ತದೆ. ಅದನ್ನು ಸಾವಕಾಶವಾಗಿ ಗಮನಿಸಿ. ಒಂದೊಂದು ಗ್ಯಾಜೆಟ್ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್ ಎರಡರಲ್ಲೂ ಇರುತ್ತದೆ. ಯಾವುದರಲ್ಲಿ ಕಡಿಮೆ ಬೆಲೆ ಇದೆ ಎಂದು ಚೆಕ್ ಮಾಡಿ ಅದರಲ್ಲಿಯೇ ಖರೀದಿಸಿ. ಹ್ಯಾಪಿ ಶಾಪಿಂಗ್!
* ಕೆ.ಎಸ್. ಬನಶಂಕರ ಆರಾಧ್ಯ