Advertisement

ಇದು ಸರ್ಟಿಫಿಕೇಟುಗಳ ಕಾಲವಯ್ನಾ!

06:00 AM Oct 07, 2018 | |

ಕರ್ನಾಟಕದಲ್ಲಿ ಒಂದು ವಿಶ್ವವಿದ್ಯಾಲಯಕ್ಕೆ ಉಪಕುಲಪತಿಗಳಾಗಿ ನೇಮಕ ಮಾಡಿ ಎಂದು ಸರಕಾರವನ್ನು ಕೇಳಿಕೊಂಡವರ ಬಯೋಡೇಟಾ ನಲವತ್ತು ಪುಟಗಳ ಒಂದು ಪುಸ್ತಕದಂತಿತ್ತು ! ಅದರಲ್ಲಿ ಅವರು ಯಾವ್ಯಾವ ಸಭೆ-ಸಮಾರಂಭಗಳಲ್ಲಿ, ಯಾವ್ಯಾವ ಮದುವೆ-ಮುಂಜಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಎಂಬುದನ್ನೂ ದಾಖಲಿಸಿದ್ದರು! ಆದರೆ ಟೆಸ್ಲಾ ಎಂಬ ಹಲವು ಕೋಟಿ ಡಾಲರುಗಳ ಕಂಪೆನಿಯನ್ನು ನಡೆಸುತ್ತಿರುವ ಎಲಾನ್‌ಮಸ್ಕ್ನ ಬಯೋಡಾಟ ಅರ್ಧಪುಟಕ್ಕಿಂತ ಹೆಚ್ಚಿಲ್ಲ! ನಮ್ಮ ಸಾಮರ್ಥ್ಯವನ್ನೆಲ್ಲ ಸರ್ಟಿಫಿಕೇಟುಗಳ ಮೂಲಕವೇ ಹೇಳಿಕೊಳ್ಳಬೇಕಾದಾಗ ಕಡತದ ದಪ್ಪ ಹೆಚ್ಚುತ್ತದೆ. 

Advertisement

ಒಮ್ಮೆ ನಾನು ಒಂದು ಫೈಲ್‌ ಕಳೆದುಕೊಂಡುಬಿಟ್ಟೆ. ನಾನು ಶಾಲೆ, ಕಾಲೇಜು, ಯೂನಿವರ್ಸಿಟಿಗಳಲ್ಲಿ ಪಡೆದ ಎಲ್ಲ ಪದವಿ ಪ್ರಮಾಣ ಪತ್ರಗಳೂ ಇದ್ದ ಕಡತವದು. ಜೊತೆಗೆ ಸ್ಕೌಟ್‌, ಎನ್‌ಸಿಸಿ, ಎನ್‌ಎಸ್‌ಎಸ್‌ ಮುಂತಾದ ಪಠ್ಯೇತರ ಚಟುವಟಿಕೆಗಳಲ್ಲಿ ಗಳಿಸಿದ ಪ್ರಾವೀಣ್ಯ ಪತ್ರಗಳೂ ಅದರಲ್ಲಿ ಇದ್ದವು. ದುರದೃಷ್ಟ , ಕಳೆದುಹೋಯಿತು! ಅದು ಕಳೆಯಿತು ಎಂದು ತಿಳಿದ ಮೇಲೆ ಅದಕ್ಕಾಗಿ ಬಹಳ ಹುಡುಕಾಡಿದೆ. ಎಲ್ಲೂ ಸಿಗಲಿಲ್ಲ. ಈಗ ಆ ಪ್ರಮಾಣಪತ್ರಗಳನ್ನೆಲ್ಲ ಮತ್ತೆ ಸಂಪಾದಿ ಸಬೇಕಾದರೆ ನಾನು ಅವನ್ನು ಮೊದಲು ನನಗೆ ಕೊಟ್ಟಿದ್ದ ಎಲ್ಲ ಸಂಸ್ಥೆಗಳಿಗೆ ಪತ್ರ ಬರೆಯಬೇಕಿತ್ತು. ಅವರು ನಕಲು ಪ್ರತಿಗಳನ್ನು ಕಳಿಸಿಕೊಡುತ್ತಾರೆ. ಅಂದರೆ ತಾವು ಕಳಿಸುವ ಸರ್ಟಿಫಿಕೇಟ್‌ಗಳ ಮೇಲೆ ಡ್ನೂಪ್ಲಿಕೇಟ್‌ ಕಾಪಿ ಎಂದು ಛಾಪಿಸುತ್ತಾರೆ. ಆದರೂ ಪರವಾಯಿಲ್ಲ; ಆ ಪತ್ರಗಳಿಗೆ ಮೂಲಪ್ರತಿಯಷ್ಟೇ ಮೌಲ್ಯ ಇರುತ್ತದೆ. ಆಮೇಲೆ ಒಂದು ದಿನ ಏಕಾಂಗಿಯಾಗಿ ಕೂತಿ¨ªಾಗ ಮನಸ್ಸು ಯೋಚನೆಗಿಳಿಯಿತು. ಆ ಪತ್ರಗಳಿಂದ ಆಗಬೇಕಾದ್ದೇನು? ನನ್ನ ಯೋಗ್ಯತೆಯನ್ನು ಜಗತ್ತಿಗೆ ತೋರಿಸಲಿಕ್ಕಾಗಿ ಆ ಪತ್ರಗಳು ನನಗೆ ಬೇಕೆ? ನಾನು ಗಳಿಸಿದೆ ಎಂದು ಹೇಳಿಕೊಳ್ಳಬಹುದಾದ ಯಾವ ಜ್ಞಾನವೂ ನನ್ನದಲ್ಲ. ಪರೀಕ್ಷೆಯಲ್ಲಿ ನಾನು ಬರೆದದ್ದು ಪಠ್ಯಪುಸ್ತಕದಲ್ಲಿ ಇದ್ದ ಉತ್ತರಗಳನ್ನೇ ಅಲ್ಲವೆ? ಅದರಲ್ಲಿ ನನ್ನ ಹೆಚ್ಚುಗಾರಿಕೆ ಏನು? ನಿಜಕ್ಕಾದರೆ ಆ ಪದವಿ ಪತ್ರಗಳೆಲ್ಲ ನನ್ನ ಜ್ಞಾಪಕ ಶಕ್ತಿಯ ಸಾಮರ್ಥ್ಯವನ್ನು ಹೇಳಬಲ್ಲ ಗುರುತುಗಳೇ ಹೊರತು ನನ್ನ ಜ್ಞಾನದ ಒರೆಗಲ್ಲುಗಳು ಖಂಡಿತ ಅಲ್ಲ. ಇನ್ನು ನೆನಪಿನ ಶಕ್ತಿ ಕೂಡ – ಆಗಿನ ಕಾಲದಲ್ಲಿ ಎಷ್ಟಿತ್ತೋ ಅಷ್ಟನ್ನು ಮಾತ್ರ ಆ ಪದವಿಪತ್ರಗಳು ಬಿಂಬಿಸಬಲ್ಲವೇ ಹೊರತು ಅದು ನನ್ನ ಈಗಿನ ನೆನಪಿನ ಶಕ್ತಿಯ ಸೂಚಕವೂ ಅಲ್ಲ. ಯಾಕೆಂದರೆ, ನಾನು ಶಾಲೆ, ಕಾಲೇಜುಗಳಲ್ಲಿ ಕಲಿತ ಅಥವಾ ನೆನಪಿನಲ್ಲಿ ಇರಿಸಿಕೊಂಡಿದ್ದ ಅದೆಷ್ಟೋ ವಿಷಯಗಳು ಈಗ ಮರೆತಿವೆ. ಸತುವಿನ ಮೇಲೆ ಸಲೂ#$Âರಿಕ್‌ ಆಮ್ಲ ಹಾಕಿದರೆ ಏನಾಗುತ್ತದೆ ಎಂಬುದನ್ನು ಸಮೀಕರಣ ಬರೆದು ತೋರಿಸುವ ಬಗೆ ಈಗ ನನಗೆ ಗೊತ್ತಿಲ್ಲ. ಸೂರ್ಯನಿಂದ ನೆಪೂcನ್‌ ಗ್ರಹ ಎಷ್ಟು ಕಿಲೋಮೀಟರ್‌ ದೂರದಲ್ಲಿದೆ ಎಂಬುದರ ಕರಾರುವಾಕ್‌ ಅಂಕೆ-ಸಂಖ್ಯೆಗಳು ಈಗ ಜ್ಞಾಪಕದಲ್ಲಿಲ್ಲ. ಮೂರನೇ ಘಾತದ ಸಮೀಕರಣಗಳನ್ನು ಬಿಡಿಸಲು ಕಾರ್ಡನ್‌ ವಿಧಾನ ಏನು ಎಂದು ಯಾರಾದರೂ ಕೇಳಿದರೆ ಈಗ ಸ್ವಲ್ಪ ಯೋಚಿಸಬೇಕಾಗುತ್ತದೆ. ಅಧ್ಯಯನದ ದಿನಗಳಲ್ಲಿ ಓದಿಕೊಂಡಿದ್ದ 99 ಶೇ. ವಿಷಯವೆಲ್ಲವೂ ಈಗ ಮರೆತುಹೋಗಿದೆ. ಹಾಗಾದರೆ, ಪದವಿಪತ್ರ ಈಗ ನನಗೆ ಎಷ್ಟು ಪ್ರಸ್ತುತ? ಹಾಗೆ ಯೋಚಿಸಿದ ನಂತರ ನಾನು ಕಳೆದುಕೊಂಡ ಕಡತದ ಬಗ್ಗೆ ಮರುಗುವುದನ್ನು ಬಿಟ್ಟೆ. 

ಗುರುಕುಲ ಪದ್ಧತಿಯಲ್ಲಿ ಸರ್ಟಿಫಿಕೇಟ್‌ ಇರಲೇ ಇಲ್ಲ !
ಹಿಂದಿನ ಕಾಲದಲ್ಲಿ- ಅಂದರೆ ಗುರುಕುಲ ಪದ್ಧತಿ ಇದ್ದ ಸಮಯದಲ್ಲಿ ಪದವಿಪತ್ರಗಳನ್ನು ಕೊಡುವ ಪದ್ಧತಿ ಇರಲಿಲ್ಲ. ಓರ್ವ ವಿದ್ಯಾರ್ಥಿ ಕಲಿಯಬೇಕಾದ್ದನ್ನೆಲ್ಲ ಕಲಿತು ಜೀವನದ ಪ್ರವಾಹದಲ್ಲಿ ಈಜಲು ತಯಾರಾಗಿ¨ªಾನೆ ಎಂಬುದು ಖಚಿತವಾದರೆ ಮಾತ್ರ ಗುರು ಆತನಿಗೆ ಶಿಕ್ಷಣ ಮುಗಿಯಿತು ಎಂದು ಕಳಿಸುತ್ತಿದ್ದರು. ಗುರುಕುಲದಿಂದ ಹೊರಬಂದ ವಿದ್ಯಾರ್ಥಿ ತನ್ನ ಸಾಮರ್ಥ್ಯಕ್ಕನುಗುಣವಾದ ಉದ್ಯೋಗ ನೋಡಿಕೊಳ್ಳುತ್ತಿದ್ದ. ಹೆಚ್ಚಿನ ಸಮಯದಲ್ಲಿ ಅದು ಸ್ವಾವಲಂಬನೆಯ ಉದ್ಯೋಗವೇ ಆಗಿರುತ್ತಿತ್ತು. ಸರ್ಟಿಫಿಕೇಟ್‌ ಇದೆ ಎಂಬ ಮಾತ್ರಕ್ಕೆ ಆತನನ್ನು ರಾಜ ಸೇನೆಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಸರ್ಟಿಫಿಕೇಟ್‌ ಇದೆ ಎಂಬ ಏಕೈಕ ಕಾರಣಕ್ಕೆ ಯಾರೂ ವೈದ್ಯ, ವಕೀಲ, ಕವಿ, ತಂತ್ರಜ್ಞನಾಗಿ ಹೆಸರು ಮಾಡುತ್ತಿರಲಿಲ್ಲ. ಕೆಲವು ತರ್ಕ ಪಂಡಿತರು ಒಂದೂರಿಂದ ಇನ್ನೊಂದೂರಿಗೆ ಹೋಗುತ್ತ ಅಲ್ಲಿರುವ ತರ್ಕಶಿರೋಮಣಿಗಳನ್ನು ವಾದಕ್ಕೆ ಕರೆಯುತ್ತ ಅವರ ಜೊತೆ ವಾದ ನಡೆಸಿ ಗೆದ್ದರೆ, ಸೋತವರ ಕಡೆಯಿಂದ ತಾಮ್ರಪತ್ರ ಬರೆಸಿಕೊಳ್ಳುತ್ತಿದ್ದರು. ಬುದ್ಧನ ಕಾಲದಲ್ಲಿ ವಾದಿಸಿಂಹ ಎಂಬ ಹೆಸರಿನವನಿದ್ದ. ಆದರೆ, ಈ ತಾಮ್ರಪತ್ರಗಳು ಕೂಡ ಶಾಶ್ವತವಾಗಿ ಅವರ ಸ್ವತ್ತಲ್ಲ. ಮುಂದೆ ಯಾವುದಾದರೂ ಊರಿನಲ್ಲಿ ಅವರು ಮತ್ತೋರ್ವ ವಾದಿಯ ಎದುರು ಸೋತರೆ ತಾವು ಸಂಗ್ರಹಿಸಿದ್ದ ಅಷ್ಟೂ ತಾಮ್ರಪತ್ರಗಳನ್ನು ಆ ಹೊಸಬನ ಮುಂದೆ ಇಟ್ಟುಬಿಡುತ್ತಿದ್ದರು. ಅವೆಲ್ಲವೂ ನ್ಯಾಯವಾಗಿ ಈಗ ಆ ಹೊಸಬನ ಸ್ವತ್ತು ಎಂಬಂತೆ! 

ಹಾಗಾದರೆ, ಈ ಸರ್ಟಿಫಿಕೇಟುಗಳನ್ನು ಸಂಗ್ರಹಿಸುವ ಹುಚ್ಚು ನಮಗೆ ಯಾವಾಗ ಪ್ರಾರಂಭವಾಯಿತು? ಜನಸಂಖ್ಯೆ ಬೆಳೆಯುತ್ತ ಹೋದಂತೆ ನಾವೆಲ್ಲ ಹೆಚ್ಚು ಸ್ವಾವಲಂಬಿಗಳಾಗಬೇಕಿತ್ತು. ಆದರೆ, ಅದಕ್ಕೆ ವಿರುದ್ಧವಾಗಿ ನಾವೆಲ್ಲರೂ ಕಂಪೆನಿ ಕೆಲಸಕ್ಕೆ ಅರ್ಜಿ ಹಾಕಿ ಕಾಯತೊಡಗಿದೆವಲ್ಲ, ಬಹುಶಃ ಆಗ ಈ ಕಡತಗಳನ್ನು ಕಂಕುಳಲ್ಲಿ ಸಿಕ್ಕಿಸಿಕೊಂಡು ಅಲೆಯುವ ಹೊಸ ಅಲೆ ಪ್ರಾರಂಭವಾಯಿತು ಎಂದು ಕಾಣುತ್ತದೆ. ಲಾರ್ಡ್‌ ಮೆಕಾಲೆ ತನ್ನ ಬ್ರಿಟಿಷ್‌ ಶಿಕ್ಷಣ ಪದ್ಧತಿಯ ಪರಮೋದ್ದೇಶ ಕಾರಕೂನರನ್ನು ಸೃಷ್ಟಿಸುವುದು ಎಂದು ಅತ್ಯಂತ ಸ್ಪಷ್ಟವಾಗಿ ಹೇಳಿದ್ದ ತಾನೆ? ಹಾಗಾಗಿಯೇ ನಮ್ಮಲ್ಲಿ ಕಾರಕೂನಿಕೆಗೆ ಎಷ್ಟು ಬೇಕೋ ಅಷ್ಟು – ಸ್ವಲ್ಪ ವಿಜ್ಞಾನ, ಸ್ವಲ್ಪ ಇತಿಹಾಸ, ಸ್ವಲ್ಪ ಗಣಿತ, ಸ್ವಲ್ಪ ಭಾಷೆ ಎಂದು ಕಲಿಸುವ ಪದ್ಧತಿ ರೂಢಿಗೆ ಬಂತು. ಹೀಗೆ ಎಲ್ಲವನ್ನೂ ಸ್ವಲ್ಪ ಸ್ವಲ್ಪವೇ ಕಲಿತು, ಪ್ಲೇಟ್‌ ಮೀಲ್ಸ್‌ ಉಂಡು ಹೊಟ್ಟೆ ತುಂಬಿಸಿಕೊಂಡವರಂತೆ, ನಾವೆಲ್ಲರೂ ಸಾಕ್ಷರರಾಗಿ ಪದವಿಪತ್ರ ಸಂಗ್ರಹಿಸುವ ಚಟಕ್ಕೆ ಬಿ¨ªೆವು. ಕಾಲೇಜು ಶಿಕ್ಷಣ ಪೂರ್ತಿಗೊಳಿಸಿ ಪದವಿಪತ್ರ ಕೈಯಲ್ಲಿ ಹಿಡಿದವನು ಮಾತ್ರ ಯೋಗ್ಯ, ಉಳಿದವರೆಲ್ಲ ಅಯೋಗ್ಯರು ಎಂಬಂತೆ ಸರಕಾರ ನಡೆಸಿಕೊಳ್ಳಲು ಪ್ರಾರಂಭಿಸಿದ ಮೇಲೆ ಶ್ರಮಜೀವಿಗಳೆಲ್ಲರೂ ಎರಡು-ಮೂರನೇ ದರ್ಜೆಯ ವ್ಯಕ್ತಿಗಳಾಗಿಬಿಟ್ಟರು. ಸೈಟಿನಲ್ಲಿ ನಿಂತು ಮನೆ ಕಟ್ಟಲು ನಿರ್ದೇಶಿಸುವ ಸಿವಿಲ್‌ ಇಂಜಿನಿಯರ್‌ ಶ್ರೇಷ್ಠ, ಆದರೆ ಅವನ ಆಣತಿಯಂತೆ ಕಲ್ಲು ಕೆತ್ತುವ, ಇಟ್ಟಿಗೆ ನೆಡುವ, ಗಾರೆ ಕಲಸುವ ಕಾರ್ಮಿಕರೆಲ್ಲರೂ ಕನಿಷ್ಠ – ಎಂಬ ಸಮೀಕರಣವನ್ನು ಸಮಾಜವೇ ಬರೆಯಿತು. ಮೂವತ್ತು ನಲವತ್ತು ವರ್ಷಗಳ ಹಿಂದೆ ಸರಕಾರೀ ನೌಕರಿ ಎಂಬುದೇ ಪ್ರತಿಯೊಬ್ಬ ಪದವೀಧರನ ಆಜನ್ಮವ್ಯಸನವಾಗಿತ್ತು. ಸರಕಾರೀ ನೌಕರಿ ಸಿಕ್ಕರೆ ಸಾಕು, ಬದುಕು ಸೆಟ್ಲ ಆಯಿತು ಎಂದೇ ಎಲ್ಲರೂ ಭಾವಿಸುತ್ತಿದ್ದರು. ಹಾಗಾಗಿ, ಅದೊಂದು ಗಗನಕುಸುಮವನ್ನು ದಕ್ಕಿಸಿಕೊಳ್ಳಲೋಸುಗ ಎಲ್ಲರೂ ಕಾಲೇಜು ವಿದ್ಯಾಭ್ಯಾಸಕ್ಕೆ ಸೇರಿಕೊಳ್ಳತೊಡಗಿದರು. ಪದವಿ ಪಡೆಯುವುದು ಏಕೆ ಎಂದರೆ ಒಳ್ಳೆಯ ನೌಕರಿಗಾಗಿ ಎಂಬ ಒಂದೇ ಉತ್ತರ ಇಡೀ ದೇಶದಲ್ಲಿ ಅನುರಣಿಸುತ್ತಿತ್ತು. ಪದವಿಪತ್ರವೇ ನಮ್ಮ ಸಾಮರ್ಥ್ಯದ ಸೂಚಕ ಎಂದು ಯಾವಾಗ ಖಾತರಿಯಾಯಿತೋ ಆಗ ಆ ಪದವಿಪತ್ರವನ್ನು ಯಾವ ಮಾರ್ಗದಿಂದಾದರೂ ದಕ್ಕಿಸಿಕೊಳ್ಳುವ ಭ್ರಷ್ಟಾಚಾರವೂ ಪ್ರಾರಂಭವಾಯಿತು. ವಿವಾಹದ ಕರೆಯೋಲೆಯಲ್ಲಿ ವಧೂವರರ ಹೆಸರಿನ ಕೆಳಗೆ ಡಿಗ್ರಿಗಳನ್ನೂ ಪ್ರಿಂಟಿಸುವ ಸಂಪ್ರದಾಯವಿರುವ ರಾಜ್ಯಗಳಲ್ಲಿ, ಪದವಿಪತ್ರವೆಂಬುದು ಲಕ್ಷಾಂತರ ರುಪಾಯಿಗಳ ವ್ಯವಹಾರದ ಸರಕು!

ನಲ್ವತ್ತು ಪುಟಗಳ ಆತ್ಮಶ್ಲಾಘನೆ
ಒಮ್ಮೆ ಯೋಚಿಸಿ. ಸಮಾಜದಲ್ಲಿ ಇಂದು ಅತಿ ಹೆಚ್ಚು ದುಡಿಯುತ್ತಿರುವುದು, ಹೆಚ್ಚು ನೆಮ್ಮದಿಯಿಂದ ಇರುವುದು, ಹೆಚ್ಚು ಜನಪ್ರಿಯರಾಗಿರುವುದು ಯಾರು? ಸ್ವಾಮೀಜಿಗಳು, ರಾಜಕಾರಣಿಗಳು, ಸಿನೆಮಾ ನಟರು, ನಿರ್ದೇಶಕರು, ತಂತ್ರಜ್ಞರು, ಬ್ಯುಸಿನೆಸ್‌ಮನ್‌ಗಳು, ಕ್ರೀಡಾಪಟುಗಳು, ಲೇಖಕರು, ಟಿವಿ ಆಂಕರ್‌ಗಳು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು… ಇಂಥವರೇ ಅಲ್ಲವೆ? ಇವರಲ್ಲಿ ಯಾರ್ಯಾರು ಎಷ್ಟು ಸರ್ಟಿಫಿಕೇಟು ಸಂಪಾದಿಸಿ¨ªಾರೆ? ಅಥವಾ ಅವರ ಸರ್ಟಿಫಿಕೇಟುಗಳ ಕಡತವನ್ನು ಯಾರು ಕೇಳುತ್ತಾರೆ? ಈ ಜಗತ್ತಿನ ದೈತ್ಯ ಕಂಪೆನಿಗಳಾದ ಮೈಕ್ರೋಸಾಫ್ಟ್, ಫೇಸ್‌ಬುಕ್‌, ಆಪಲ್‌, ಗೂಗಲ್‌, ರಿಲಯನ್ಸ್‌ ಇವೆಲ್ಲವೂ ಪ್ರಾರಂಭವಾದದ್ದು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಎದ್ದುಹೋದವರಿಂದ! ಅವರಲ್ಲಿ ಸರ್ಟಿಫಿಕೇಟ್‌ ಇಲ್ಲ! ನಾನು ಕೆಲವೊಂದು ಕಾಲೇಜು ಉಪನ್ಯಾಸಕರ ರೆಸ್ಯೂಮೆಗಳನ್ನು ನೋಡಿದ್ದೇನೆ. ಅವು ಹತ್ತಾರು ಪುಟಗಳಿರುತ್ತವೆ. ಕರ್ನಾಟಕದಲ್ಲಿ ಒಂದು ವಿಶ್ವವಿದ್ಯಾಲಯಕ್ಕೆ ಉಪಕುಲಪತಿಗಳಾಗಿ ನೇಮಕ ಮಾಡಿ ಎಂದು ಸರಕಾರವನ್ನು ಕೇಳಿಕೊಂಡವರ ಒಂದು ಬಯೋಡೇಟಾ ಅಂತೂ ನಲವತ್ತು ಪುಟಗಳ ಒಂದು ಪುಸ್ತಕದಂತಿತ್ತು ! ಅದರಲ್ಲಿ ಅವರು ಯಾವ್ಯಾವ ಸಭೆ-ಸಮಾರಂಭಗಳಲ್ಲಿ, ಯಾವ್ಯಾವ ಮದುವೆ-ಮುಂಜಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ ಎಂಬುದನ್ನೂ ದಾಖಲಿಸಿದ್ದರು! ಆದರೆ ಟೆಸ್ಲಾ ಎಂಬ ಹಲವು ಕೋಟಿ ಡಾಲರುಗಳ ಕಂಪೆನಿಯನ್ನು ನಡೆಸುತ್ತಿರುವ ಎಲಾನ್‌ ಮಸ್ಕ್ನ ಬಯೋಡಾಟ ಅರ್ಧಪುಟಕ್ಕಿಂತ ಹೆಚ್ಚಿಲ್ಲ! ನಮ್ಮ ಸಾಮರ್ಥ್ಯವನ್ನೆಲ್ಲ ನಾವು ಗಳಿಸಿಕೊಂಡ ಸರ್ಟಿಫಿಕೇಟುಗಳ ಮೂಲಕವೇ ಹೇಳಿಕೊಳ್ಳಬೇಕಾದಾಗ ಕಡತದ ದಪ್ಪ ಹೆಚ್ಚುತ್ತದೆ. 

Advertisement

ಭಾರತದಲ್ಲಿ ಇಂದು ಇಂಜಿನಿಯರಿಂಗ್‌ ಕಾಲೇಜುಗಳಿಂದ ವಿದ್ಯಾರ್ಥಿಗಳು, ಕಾರ್ಖಾನೆಯಿಂದ ಬೆಂಕಿಪೆಟ್ಟಿಗೆ ಹೊರಬಂದಂತೆ ಬರುತ್ತಿದ್ದಾರೆ. ಒಬ್ಬೊಬ್ಬರ ಕೈಯಲ್ಲೂ ಅವರು ಗಳಿಸಿದ ಪದವಿಪತ್ರಗಳು. ಪ್ರಾವೀಣ್ಯ ಪತ್ರಗಳು. ಪ್ರಾಜೆಕ್ಟ್ ರಿಪೋರ್ಟ್‌ಗಳು. ಕ್ಯಾರೆಕ್ಟರನ್ನು ಪ್ರಮಾಣೀಕರಿಸುವುದಕ್ಕೂ ಸರ್ಟಿಫಿಕೇಟುಗಳು. ಅವೆಲ್ಲಕ್ಕೆ ಮೇಲೆ ತಮ್ಮ ಅಧ್ಯಾಪಕರಿಂದ ಶಿಫಾರಸು ಪತ್ರಗಳು. ಅಷ್ಟಿದ್ದರೂ ಇಂದು ಕಂಪೆನಿಗಳು ಅವರನ್ನು ನೇರವಾಗಿ ನೌಕರಿಗೆ ಸೇರಿಸಿಕೊಳ್ಳುತ್ತಿಲ್ಲ. ಉದ್ಯೋಗಾಕಾಂಕ್ಷಿಗಳಿಗೆ ಕಂಪೆನಿಗಳು ಪ್ರವೇಶ ಪರೀಕ್ಷೆ ನಡೆಸುತ್ತವೆ. ಇಂಜಿನಿಯರಿಂಗ್‌ ಪದವಿ ಪಡೆದು ಬಂದ ವಿದ್ಯಾರ್ಥಿ, ಒಂದು ಕುರಿ, ಮೂರು ಹಸು ಒಂದು ಹುಲ್ಲುಗಾವಲನ್ನು 4 ದಿನಗಳಲ್ಲಿ ಮೇಯ್ದರೆ, ಅದೇ ಹುಲ್ಲುಗಾವಲನ್ನು ಮೇಯಲು ಮೂರು ಕುರಿ, ಒಂದು ಹಸುವಿಗೆ ಎಷ್ಟು ದಿನ ಬೇಕು? ಎಂಬ ಪ್ರಶ್ನೆಗೆ ಉತ್ತರ ಬರೆಯಲು ತಿಣುಕಾಡುತ್ತಿರುತ್ತಾನೆ. ಮತ್ತು ಅದನ್ನು ಉತ್ತರಿಸಿ ಆತ ಕೆಲಸ ಗಿಟ್ಟಿಸಿದರೂ ಮಾಡುವುದೇನು ಎಂದರೆ ಯಾರೋ ಬರೆದ ಪ್ರೋಗ್ರಾಮಿನ ಟೆಸ್ಟಿಂಗ್‌ ಕೆಲಸ! ಕಲಿತದ್ದಕ್ಕೂ ಪ್ರವೇಶ ಪರೀಕ್ಷೆಗೂ ಮಾಡುವ ನೌಕರಿಗೂ ಯಾವ ಬಾದರಾಯಣ ಸಂಬಂಧವೂ ಇಲ್ಲ! ಇಂಥ ಸರ್ಕಸ್‌ ಎಲ್ಲ ಬೇಡವೇ ಬೇಡ ಎಂದು ನಿರ್ಧರಿಸಿರುವ ಗೂಗಲ್‌ ಸಂಸ್ಥೆ ಈಗ ತನ್ನ ನೇಮಕಾತಿ ಪ್ರಕ್ರಿಯೆಯನ್ನು ಪೂರ್ತಿಯಾಗಿ ಬದಲಿಸಿಹಾಕಿದೆ. ಅಲ್ಲೀಗ ಪದವಿಪತ್ರಗಳ ಪರಿಶೀಲನೆ ಇಲ್ಲ. ಗೂಗಲ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನೌಕರರ ಪೈಕಿ 15%ರಷ್ಟು ಮಂದಿ ಯಾವ ಬಗೆಯ ಉನ್ನತ ಶಿಕ್ಷಣವನ್ನೂ ಪಡೆದವರಲ್ಲ ಎಂದರೆ ನೀವು ನಂಬಲೇಬೇಕು!

ಮುಂದೊಂದು ದಿನ ವಿಚ್ಛೇದನ ಪಡೆಯುವ ಸಂದರ್ಭವೂ ಬರಬಹುದು ಎಂಬ ಭಯ ಹುಟ್ಟಿದ್ದರಿಂದ ಮ್ಯಾರೇಜ್‌ ಸರ್ಟಿಫಿಕೇಟ್‌ ಪ್ರಾಮುಖ್ಯ ಪಡೆಯಿತು. ಹಾಗೆಯೇ ಕಲಿತದ್ದನ್ನು ಮರೆಯುವುದಕ್ಕೂ ಅವಕಾಶವಿರಲಿ ಎಂಬ ಕಾರಣಕ್ಕೆ ಪದವಿ ಸರ್ಟಿಫಿಕೇಟುಗಳ ವ್ಯವಸ್ಥೆ ಹುಟ್ಟಿರಬೇಕು! ಕೈಯಲ್ಲಿ ಯಾವ ಸರ್ಟಿಫಿಕೇಟೂ ಇಲ್ಲ ಎಂದಾಗ ವ್ಯಕ್ತಿಗೆ ತನ್ನ ವ್ಯಕ್ತಿತ್ವದಿಂದ ದೊಡ್ಡವನಾಗಬೇಕಾದ ಜವಾಬ್ದಾರಿ ಹುಟ್ಟುತ್ತದೆ. ಅದು ಒಳ್ಳೆಯದು ಅಲ್ಲವೆ?

ಸ್ವರೂಪಾನಂದ

Advertisement

Udayavani is now on Telegram. Click here to join our channel and stay updated with the latest news.

Next