Advertisement
ನಾವು ಕೈಗೆಕಟ್ಟಿಕೊಳ್ಳುವ ವಾಚುಗಳು ಸಮಯ, ದಿನಾಂಕ ತೋರಿಸಿದರೆ, ಸ್ಮಾರ್ಟ್ ಬ್ಯಾಂಡುಗಳು, ಸಮಯ, ದಿನಾಂಕದಜೊತೆ ನಮ್ಮ ದೇಹದ ಆರೋಗ್ಯಸೂಚ್ಯಂಕವನ್ನು ಅಳೆಯುತ್ತವೆ. ನಿಮಿಷಕ್ಕೆ ನಮ್ಮ ಹೃದಯದ ಬಡಿತ ಎಷ್ಟಿದೆ? ನಡೆದಾಗ, ಓಡಿದಾಗ, ವ್ಯಾಯಾಮ ಮಾಡಿದಾಗ ದೇಹದಲ್ಲಿ ಎಷ್ಟು ಕ್ಯಾಲೋರಿ ಖರ್ಚಾಗಿದೆ? ರಾತ್ರಿ ಮಲಗಿದಾಗಎಷ್ಟುಹೊತ್ತು ನಿದ್ದೆ ಮಾಡಿದಿರಿ? ಆ ನಿದ್ದೆಯ ಸಮಯದಲ್ಲಿ, ನೀವು ಎಷ್ಟು ಹೊತ್ತು ಉತ್ತಮ ನಿದ್ದೆ (ಸೌಂಡ್ ಸ್ಲಿàಪ್) ಮಾಡಿದಿರಿ? ಎಷ್ಟು ಹೊತ್ತು ಸಾಧಾರಣ ನಿದ್ದೆ ಮಾಡಿದಿರಿ? ಹಲವು ನಿಮಿಷಗಳಿಂದ ನೀವು ಒಂದೇ ಕಡೆ ಕುಳಿತಿದ್ದೀರಿ.. ಇತ್ಯಾದಿ ಮಾಹಿತಿಗಳನ್ನೆಲ್ಲ ಸ್ಮಾರ್ಟ್ ಬ್ಯಾಂಡ್‌ಗಳು ನೀಡುತ್ತವೆ. ಭಾರತದಲ್ಲಿ ಇದೀಗ ಬಿಡುಗಡೆಯಾಗಿರುವ ಮಿ ಸ್ಮಾರ್ಟ್ ಬ್ಯಾಂಡ್ 4ನ ಗುಣವಿಶೇಷಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
ಬಳಿಕ ಸ್ಟೇಟಸ್ ಆಯ್ಕೆ ಇದ್ದು ಅದರಲ್ಲಿ ಇಟ್ಟ ಹೆಜ್ಜೆಗಳ ಸಂಖ್ಯೆ, ದೂರ, ನಿಮ್ಮ ದೇಹದಲ್ಲಿ ಈ ದಿನ ಖರ್ಚಾದ ಕ್ಯಾಲೋರಿ ಪ್ರದರ್ಶಿಸುತ್ತದೆ. ಬಳಿಕ ಪರದೆಯನ್ನು ಮೇಲ್ಮುಖವಾಗಿ ಉಜ್ಜಿದರೆ (ಸ್ವೆ„ಪ್) ಹೃದಯದ ಬಡಿತದ ಆಯ್ಕೆ ಬರುತ್ತದೆ. ಅದನ್ನು ಸ್ಪರ್ಶಿಸಿ, ಮೂವತ್ತು ಸೆಕೆಂಡ್ ಕಾದರೆ, ಒಂದು ನಿಮಿಷಕ್ಕೆ ನಿಮ್ಮ ಹೃದಯದ ಬಡಿತಎಷ್ಟಿದೆ ಎಂಬುದನ್ನು ತೋರಿಸುತ್ತದೆ. ಈ ಬಡಿತ ವಿವಿಧ ಸಮಯದಲ್ಲಿ ಬೇರೆ ಬೇರೆ ಪ್ರಮಾಣ ಇರುತ್ತದೆ. ವ್ಯಾಯಾಮ, ಕ್ಯಾಲೋರಿ ನಷ್ಟದ ಮಾಹಿತಿ
ಬಳಿಕ ಟ್ರೆಡ್‌ಮಿಲ್, ಸೈಕ್ಲಿಂಗ್, ವಾಕಿಂಗ್, ವ್ಯಾಯಾಮ, ಈಜಿನ ಚಿಹ್ನೆಗಳಿವೆ. ನೀವು ಇದರಲ್ಲಿ ಯಾವುದಾದರೊಂದು ಚಟುವಟಿಕೆ ಮಾಡುವಾಗ ಆ ನಿರ್ದಿಷ್ಟ ಚಿಹ್ನೆಯ ಮೇಲೆ ಸ್ಪರ್ಶಿಸಿದರೆ ಅದರ ಸೂಚ್ಯಂಕ ಕಾರ್ಯಾಚರಣೆ ಶುರುಮಾಡುತ್ತದೆ. ನೀವು ವ್ಯಾಯಾಮ ಮಾಡಿದಾಗ ಹೃದಯದಬಡಿತ ಎಷ್ಟಿರುತ್ತದೆ? ಎಷ್ಟು ಕ್ಯಾಲೋರಿ ನಷ್ಟವಾಯಿತು ಎಂಬುದನ್ನು ದಾಖಲಿಸುತ್ತದೆ. ಇದನ್ನು ಧರಿಸಿ ಈಜಬಹುದು, ಈಜಿನಿಂದ ನಷ್ಟವಾದ ಕ್ಯಾಲೋರಿ ಮಾಹಿತಿ ಪಡೆಯಬಹುದು. ನೀರಿನಲ್ಲಿ ಬಿದ್ದರೂ ನೀರು ಒಳ ಸೇರದಂಥ ರಕ್ಷಣೆಯಿದೆ.
Related Articles
ಈ ಸ್ಮಾರ್ಟ್ ಬ್ಯಾಂಡಿನ ದರ 2,300 ರೂ. ಈ ಸ್ಮಾರ್ಟ್ ಬ್ಯಾಂಡ್ 22.1 ಗ್ರಾಂ ತೂಕವಿದೆ. 0.95 ಇಂಚಿನ ಪರದೆ ಹೊಂದಿದೆ. ಇದಕ್ಕೆ ಅಮೋಲೆಡ್ ಬಣ್ಣದ ಡಿಸ್‌ಪ್ಲೇ ಇದೆ. ಪರದೆಯ ರಕ್ಷಣೆಗೆ ಟೆಂಪರ್ಡ್ ಗಾಜಿನ ರಕ್ಷಣೆಯಿದ್ದು ಇದು ಬೆರಳ ಸ್ಪರ್ಶದಿಂದ (ಟಚ್ ಸ್ಕ್ರೀನ್) ಕೆಲಸ ಮಾಡುವುದರಿಂದ, ಬೆರಳಚ್ಚು ಮೆತ್ತದ ಆ್ಯಂಟಿ ಫಿಂಗರ್‌ಪ್ರಿಂಟ್ ಕೋಟಿಂಗ್ ನೀಡಲಾಗಿದೆ. ಸ್ಮಾರ್ಟ್ ಬ್ಯಾಂಡನ್ನು ಕೈಗೆ ಕಟ್ಟಿಕೊಳ್ಳುವ ಬೆಲ್ಟ್ (ಸ್ಟ್ರಾéಪ್) ಪ್ಲಾಸ್ಟಿಕ್ ಆಗಿದೆ.
Advertisement
ನಿಮ್ಮ ಮೊಬೈಲ್ ಫೋನ್ ಸಂಪರ್ಕ ಇಲ್ಲದಿದ್ದರೆ ಈ ಡಿಜಿಟಲ್ ಬ್ಯಾಂಡ್ ಯಾವ ಮಾಹಿತಿಯನ್ನೂ ನೀಡುವುದಿಲ್ಲ. ಹಾಗಾಗಿ ಬ್ಯಾಂಡ್ ಬಳಸುವ ಮುನ್ನ ನಿಮ್ಮ ಮೊಬೈಲ್ ಫೋನಿನಲ್ಲಿ “ಮಿ ಫಿಟ್’ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅದರಲ್ಲಿ ನಿಮ್ಮ ಮೇಲ್ ಐಡಿ ಅಥವಾ ಫೇಸ್‌ಬುಕ್ ಮಾಹಿತಿ ಮೂಲಕ ಶಿಯೋಮಿ ಅಕೌಂಟನ್ನು ತೆರೆಯಬೇಕು. ಇಷ್ಟಾದರೆ ನಿಮ್ಮ ಸ್ಮಾರ್ಟ್ ಬ್ಯಾಂಡ್ ಬಳಕೆಗೆಸಿದ್ಧ.ಬಳಿಕ ಮೊಬೈಲ್‌ನ ಬ್ಲೂಟೂತ್ ಜೊತೆ ಪೇರ್ ಮಾಡಿಕೊಳ್ಳಬೇಕು. ಒಮ್ಮೆ ಪೇರ್ ಮಾಡಿಕೊಂಡರೆ ನಂತರ, ಈ ಸ್ಮಾರ್ಟ್ ಬ್ಯಾಂಡ್, ಬ್ಲೂಟೂತ್ ಆನ್ ಮಾಡಿದ್ದರೆ ಸ್ವಯಂಚಾಲಿತವಾಗಿ ಮೊಬೈಲ್ ಜೊತೆ ಸಂಪರ್ಕ ಕಲ್ಪಿಸಿಕೊಳ್ಳುತ್ತದೆ.
ಅಮೋಲೆಡ್ ಪರದೆ ಬಣ್ಣದ್ದಾಗಿದ್ದು, ಪರದೆಯಲ್ಲಿ ಸದಾ ಸಮಯ, ದಿನಾಂಕ, ವಾರ ಮತ್ತು ಆ ದಿನ ನೀವು ನಡೆದ ಹೆಜ್ಜೆಗಳ ಸಂಖ್ಯೆ ತೋರಿಸುತ್ತದೆ. ಹೀಗೆ ನೋಡಲು ಸ್ಮಾರ್ಟ್ ಬ್ಯಾಂಡಿನ ಪರದೆಯ ಮೇಲೆ ನಿಮ್ಮ ಬೆರಳನ್ನು ಸ್ಪರ್ಶಿಸಬೇಕು. ಆಗ ಸ್ಮಾರ್ಟ್ ಬ್ಯಾಂಡ್‌ನ ಪರದೆ ಕಾಣುತ್ತದೆ. ಇದರಲ್ಲಿ 135 ಎಂಎಎಚ್ ಬ್ಯಾಟರಿ ಇದ್ದು, ಇದು 20 ದಿನದಷ್ಟು ಸುದೀರ್ಘ ಕಾಲ ಬಾಳಿಕೆ ಬರುತ್ತದೆ ಎಂದು ಕಂಪೆನಿ ಹೇಳುತ್ತದೆ.ದರ - 2,300 ರೂ. amazon.in ಮತ್ತು ಮಿ ಸ್ಟೋರ್‌ನಲ್ಲಿ ಲಭ್ಯ. ಇನ್ನಷ್ಟು ಅನುಕೂಲಗಳು
ಮೆನು ಆಯ್ಕೆಯಲ್ಲಿ ಹವಾಮಾನ ವಿವರ ದೊರಕುತ್ತದೆ. ನೀವಿರುವ ಊರಿನ ಈಗಿನ ಉಷ್ಣಾಂಶ, ಗರಿಷ್ಠ, ಕನಿಷ್ಟ ಉಷ್ಣಾಂಶ, ಮಳೆಯ ಲಕ್ಷಣ, ಮುಂದಿನ ಐದು ದಿನಗಳ ಹವಾಮಾನ ವಿವರಗಳನ್ನು ಪ್ರದರ್ಶಿಸುತ್ತದೆ. ಸಂಗೀತ ಇದಲ್ಲದೇ, ಈ ಬ್ಯಾಂಡನ್ನು ನೀವು ಅಲಾರಾಂ, ಸ್ಟಾಪ್ ವಾಚ್, ಟೈಮರ್ ಆಗಿ ಕೂಡ ಬಳಸಬಹುದು. ನಿಮ್ಮ ಮೊಬೈಲ್ ಫೋನಿನಲ್ಲಿ ಇಯರ್‌ಫೋನ್ ಮೂಲಕ ಸಂಗೀತ ಆಲಿಸುತ್ತಿದ್ದರೆ, ನಿಮ್ಮ ಸ್ಮಾರ್ಟ್ ಬ್ಯಾಂಡಿನಲ್ಲೇ ಹಾಡನ್ನು ನಿಲ್ಲಿಸುವ, ಮುಂದಿನ ಅಥವಾ ಹಿಂದಿನ ಹಾಡಿಗೆ ಹೋಗುವ, ಸೌಂಡನ್ನು ನಿಯಂತ್ರಿಸುವ ಆಯ್ಕೆಯಿದೆ. ನಿಮ್ಮ ಮೊಬೈಲ್ ಫೋನ್‌ಗೆ ಕರೆ ಬಂದಾಗಲೆಲ್ಲ ವೈಬ್ರೇಟ್ ಮೂಲಕ ಕರೆ ಬಂದ ಸೂಚನೆ ನೀಡುತ್ತದೆ. ಆಗ ನೀವು ಕರೆಯನ್ನು ಬ್ಯಾಂಡ್ ಮೂಲಕವೇ ಸೈಲೆಂಟ್ ಮಾಡಬಹುದು. ಅಥವಾ ತಿರಸ್ಕರಿಸಬಹುದು. ಆದರೆ ಕರೆಯನ್ನು ಬ್ಯಾಂಡ್ ಮೂಲಕ ಸ್ವೀಕರಿಸಲಾಗುವುದಿಲ್ಲ. -ಕೆ.ಎಸ್. ಬನಶಂಕರ ಆರಾಧ್ಯ