Advertisement

ಮಾಹಿತಿ ಇದ್ದರೂ ಬಿಜೆಪಿಯವರು ತಮ್ಮ ಹುಡುಗನ ರಕ್ಷಣೆ ಯಾಕೆ ಮಾಡಿಲ್ಲ?: ಕುಮಾರಸ್ವಾಮಿ

12:23 PM Feb 21, 2022 | Team Udayavani |

ಬೆಂಗಳೂರು: ಹಿಂದೂ ಸಂಘಟನೆ ಸದಸ್ಯ ಹರ್ಷನ ಹತ್ಯೆಗೆ ಎರಡು ವರ್ಷದ ಹಿಂದೆಯೇ ಯೋಜನೆ ಹಾಕಿದ್ದರು ಎಂದು ಅವರ ಕುಟುಂಬ ಸಂಬಂಧಿಕರು ಹೇಳುತ್ತಿದ್ದರು. 10 ಲಕ್ಷ ಘೋಷಿಸಿದ್ದರು ಎನ್ನುತ್ತಿದ್ದಾರೆ. ಎರಡು ವರ್ಷಗಳ ಹಿಂದೆಯೇ ಇದು ಹೊರಬಿದ್ದಿದೆ. ಇದು ಬಿಜೆಪಿ ನಾಯಕರಿಗೆ ಗೊತ್ತಿರಲಿಲ್ವೇ. ನಿಮ್ಮ‌ಸದಸ್ಯನನ್ನು ರಕ್ಷಣೆ ಮಾಡಲು ನಿಮಗೆ ಆಗಲಿಲ್ಲವೇ? ಎರಡು ವರ್ಷಗಳ‌ ಹಿಂದೆಯೇ ಈ ಮಾಹಿತಿ ನಿಮಗಿದ್ದರೂ ಯಾಕೆ ಯುವಕನ ರಕ್ಷಣೆ ಮಾಡಿಕೊಳ್ಳಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಅಮಾಯಕ ಯುವಕನ ಬಲಿಯಾಗಿದೆ. ಮುಖಂಡರು ಆ ಯುವಕನ ಮನೆಗೆ ಹೋಗುವುದು, ಸಾಂತ್ವನ ಹೇಳುವುದು ಮಾಡುತ್ತಾರೆ. ಮೂರು ದಿನದ ನಂತರ ಅತ್ತ ಯಾರೂ ಸುಳಿಯುವುದಿಲ್ಲ. ಆ ಅಮಾಯಕನ ಕುಟುಂಬದ ಬಗ್ಗೆ ಕೇಳುವವರಿರಲ್ಲ. ಮಕ್ಕಳು ತಮ್ಮ ಕುಟುಂಬದ ಬಗ್ಗೆ ಯೋಚಿಸಬೇಕು. ತಮ್ಮ ಕುಟುಂಬವನ್ನು ಮತ್ತೆ ಯಾರೂ ‌ನೋಡಲ್ಲ. ಇದನ್ನ ಮಕ್ಕಳು ಅರ್ಥ ಮಾಡಿಕೊಂಡರೆ ಸಾಕು ಎಂದರು.

ಇದನ್ನೂ ಓದಿ:ಶಿವಮೊಗ್ಗ ಹತ್ಯೆ ಕೇಸ್:ಈಶ್ವರಪ್ಪ ಹೇಳಿಕೆ ಸಮರ್ಥಿಸಿಕೊಳ್ಳದ ಸಿಎಂ

ಇದನ್ನ ನೋಡಿದರೆ ಪ್ರಾರಂಭಿಕ ಎಂದೆನಿಸುತ್ತಿದೆ. ಸರ್ಕಾರ ಇದನ್ನು ಮೊದಲೇ ಅರ್ಥ ಮಾಡಿಕೊಳ್ಳಬೇಕು ಎಂದರು.

ಅವಕಾಶ ಸಿಗುತ್ತಿಲ್ಲ: ನಮ್ಮ‌ಶಾಸಕರು ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿದ್ದಾರೆ. ರಾಜ್ಯದ ಪ್ರಮುಖ ವಿಚಾರಗಳ ಚರ್ಚೆಗೆ ಅವಕಾಶ ಸಿಗಲಿಲ್ಲ. ಇವತ್ತು, ನಾಳೆ ಸದನ ಮುಂದೂಡಬಹುದು. ಬಜೆಟ್ ಅಧಿವೇಶನದವರೆಗೆ ಮುಂದೂಡಬಹುದು. ಬೆಳಗಾವಿಯಲ್ಲೂ ಮತಾಂತರ ನಿಷೇಧ ಕಾಯ್ದೆ ತಂದರು. ಯಾವುದೇ ಸಮಸ್ಯೆ ಚರ್ಚೆಯಿಲ್ಲದೆ ಮುಕ್ತಾಯವಾಗಿತ್ತು. ಈಗಿನ ಸದನವೂ ಹಾಗೆ ಆಗುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next