Advertisement

ಕೋವಿಡ್ ನಡುವೆಯೂ ಜಿಗಿದ ಐಟಿ ಉದ್ಯೋಗ! ದೈತ್ಯ ಐಟಿ ಕಂಪೆನಿಗಳಿಂದ 72 ಸಾವಿರ ಮಂದಿ ಆಯ್ಕೆ

11:15 PM Apr 19, 2021 | Team Udayavani |

ಹೊಸದಿಲ್ಲಿ/ಬೆಂಗಳೂರು : ಕೊರೊನಾ ಸಂಕಟದ ನಡುವೆಯೂ 2020-21ನೇ ಆರ್ಥಿಕ ವರ್ಷದಲ್ಲಿ ದೇಶದ ಮೂರು ದೈತ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆಗಳು 72 ಸಾವಿರ ಮಂದಿಗೆ ಉದ್ಯೋಗ ನೀಡಿವೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ. 44ರಷ್ಟು ಹೆಚ್ಚಳವಾಗಿದೆ.

Advertisement

ಪ್ರಸಕ್ತ ಹಣಕಾಸು ವರ್ಷದಲ್ಲೂ 1.10 ಲಕ್ಷ ಮಂದಿಗೆ ಉದ್ಯೋಗ ನೀಡಲು ದೇಶದ ಪ್ರಮುಖ ಐದು ಐಟಿ ಕಂಪೆನಿಗಳು ಮುಂದಾಗಿರುವುದು ಇದಕ್ಕಿಂತ ಸಿಹಿ ಸುದ್ದಿ.

ಐಟಿ ಕನ್ಸಲ್ಟಿಂಗ್‌ ಮತ್ತು ರಿಸರ್ಚ್‌ ಸಂಸ್ಥೆಯಾದ ಎವರೆಸ್ಟ್‌ ಗ್ರೂಪ್‌ ಈ ಬಗ್ಗೆ ಮಾಹಿತಿ ನೀಡಿದ್ದು, ಕೊರೊನಾ ಸಂಕಷ್ಟದ ನಡುವೆಯೂ ಐಟಿ ಕಂಪೆನಿಗಳು ಉತ್ತಮ ಉದ್ಯೋಗಾವಕಾಶ ಕಲ್ಪಿಸಿವೆ ಎಂದಿದೆ.

ಈ ಸಂಸ್ಥೆಯ ಅಧ್ಯಯನದ ಪ್ರಕಾರ 2020ನೇ ಹಣಕಾಸು ವರ್ಷದಲ್ಲಿ ವಿಪ್ರೋ, ಇನ್ಫೋಸಿಸ್‌ ಮತ್ತು ಟಿಸಿಎಸ್‌ ಕಂಪೆನಿಗಳು 49,887 ಮಂದಿಗೆ ಉದ್ಯೋಗ ನೀಡಿದ್ದವು. ಅದಕ್ಕೆ ಹಿಂದಿನ ವರ್ಷ ಇವೇ ಕಂಪೆನಿಗಳು 64,805 ಮಂದಿಗೆ ಉದ್ಯೋಗ ನೀಡಿದ್ದವು. ಈ ಎರಡು ಹಣಕಾಸು ವರ್ಷಗಳಿಗೆ ಹೋಲಿಸಿದರೆ ಕೊರೊನಾದಿಂದ ಪೀಡಿತವಾಗಿದ್ದ 2021ರ ಹಣಕಾಸು ವರ್ಷದಲ್ಲಿ 72,079 ಮಂದಿಗೆ ಉದ್ಯೋಗ ನೀಡಿವೆ.

ಇದನ್ನೂ ಓದಿ :“ಇಂಡಿಯಾ ಓಪನ್‌ ಸೂಪರ್‌-500 ಬ್ಯಾಡ್ಮಿಂಟನ್‌’ ಟೂರ್ನಿ ಮುಂದಕ್ಕೆ

Advertisement

ಲಾಕ್‌ಡೌನ್‌ ಕಾಲದಲ್ಲಿ ಉದ್ಯೋಗ ಸೃಷ್ಟಿಯಾಗದಿದ್ದರೂ ಅನ್‌ಲಾಕ್‌ ವೇಳೆ ಹೆಚ್ಚು ಬೇಡಿಕೆ ಬಂದಿದ್ದರಿಂದ ಹೆಚ್ಚು ಉದ್ಯೋಗಾವಕಾಶ ನೀಡಲಾಗಿದೆ ಎಂಬುದು ಈ ಕಂಪೆನಿಗಳ ಮಾತು.

2022ರಲ್ಲೂ ಹೆಚ್ಚಳ
2022ರ ಹಣಕಾಸು ವರ್ಷದಲ್ಲೂ ಐಟಿ ಕಂಪೆನಿಗಳು ಹೆಚ್ಚು ಮಂದಿಯನ್ನು ನೇಮಕ ಮಾಡಿಕೊಳ್ಳಲಿವೆ. ಟಿಸಿಎಸ್‌ ಈ ವರ್ಷ ಕ್ಯಾಂಪಸ್‌ ಸಂದರ್ಶನ ನಡೆಸಿ 40 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ. ಇನ್ಫೋಸಿಸ್‌ ಕೂಡ 25 ಸಾವಿರ ಮಂದಿಗೆ ಉದ್ಯೋಗ ನೀಡಲಿದೆ. ವಿಪ್ರೋ ನಿಖರವಾದ ಸಂಖ್ಯೆ ಹೇಳದಿದ್ದರೂ, ಸದ್ಯದಲ್ಲೇ ಹೆಚ್ಚು ಮಂದಿಯನ್ನು ನೇಮಕ ಮಾಡುವುದಾಗಿ ತಿಳಿಸಿದೆ.

ಇವುಗಳ ಜತೆಗೆ ಡಿಎಕ್ಸ್‌ಸಿ ಟೆಕ್ನಾಲಜಿ, ಮೈಂಡ್‌ಟ್ರೀ  ಕಂಪೆನಿಗಳೂ ಹೆಚ್ಚು ಮಂದಿಯನ್ನು ನೇಮಿಸಿಕೊಳ್ಳಲು ತಯಾರಿ ನಡೆಸಿವೆ. ಇವು ಕ್ಯಾಂಪಸ್‌ ಸಂದರ್ಶನದ ಮೂಲಕ 7,000 ಮಂದಿಯನ್ನು ಆರಿಸಿಕೊಳ್ಳಲು ಚಿಂತನೆ ನಡೆಸಿದ್ದು, ಕಳೆದ ವರ್ಷ 4 ಸಾವಿರ ಮಂದಿಯನ್ನು ನೇಮಿಸಿಕೊಂಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next