Advertisement

ಆಗಸದಲ್ಲಿ ತೆರೆದುಕೊಂಡ ವಿಮಾನದ ಬಾಗಿಲು: ಚಿನ್ನ, ವಜ್ರದ ಸುರಿಮಳೆ

06:01 PM Mar 16, 2018 | Team Udayavani |

ಮಾಸ್ಕೋ : ರಶ್ಯದ ಯಾಕುತ್‌ಸ್ಕ್ ವಿಮಾನ ನಿಲ್ದಾಣದಿಂದ ಸರಕು ಸಾಗಣೆ ವಿಮಾನವೊಂದು ಟೇಕಾಫ್ ಆದ ಸ್ವಲ್ಪ ಹೊತ್ತಿನ ಬಳಿಕ ಅದರ ಬಾಗಿಲು ಆಕಸ್ಮಿಕವಾಗಿ ತೆರೆದುಕೊಂಡ ಪರಿಣಾಮವಾಗಿ  ಅದರೊಳಗಿದ್ದ ಹತ್ತು ಟನ್‌ ಚಿನ್ನ, ಪ್ಲಾಟಿನಂ ಮತ್ತು ವಜ್ರಗಳು ರನ್‌ವೇ ಮತ್ತು ಆಸುಪಾಸಿನ 26 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ  ಚೆಲ್ಲಾಪಿಲ್ಲಿಯಾಗಿ ಉದುರಿ ಹರಡಿಕೊಂಡು ಬಿದ್ದ ಘಟನೆ ವರದಿಯಾಗಿದೆ. ಇವುಗಳ ಮೌಲ್ಯ 2,6369 ಕೋಟಿ ರೂ.ಗಳೆಂದು (ಅಥವಾ 365 ದಶಲಕ್ಷ ಡಾಲರ್‌) ಅಂದಾಜಿಸಲಾಗಿದೆ.

Advertisement

ನಿಂಬಸ್‌ ಏರ್‌ ಲೈನ್ಸ್‌ ಎಎನ್‌ -12 ಸರಕು ಸಾಗಣೆ ವಿಮಾನ ಟೇಕಾಫ್ ಆದ ಸ್ವಲ್ಪ ಹೊತ್ತಿನಲ್ಲೇ ಅದರಲ್ಲಿ ತಾಂತ್ರಿಕ ದೋಷ ಕಂಡು ಬಂತು. ಪರಿಣಾಮವಾಗಿ ಅದರ ಬಾಗಿಲು ತೆರೆದುಕೊಂಡು ಅದರೊಳಗಿದ್ದ  10 ಟನ್‌ ಚಿನ್ನ, ಪ್ಲಾಟಿನಂ, ವಜ್ರದ ಸರಕುಗಳು ಆಗಸದಿಂದ ಬೀಳುವಾಗ ಚಿನ್ನ, ವಜ್ರಗಳ ಸುರಿ ಮಳೆ ಆಗುತ್ತಿರುವಂತೆ ತೋರಿಬಂತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕೂಡಲೇ ಅದನ್ನು ಸುರಕ್ಷಿತವಾಗಿ ಸಮೀಪದ ಮಗಾನ್‌ ವಿಮಾನ ನಿಲ್ದಾಣದಲ್ಲಿ  ಇಳಿಸಲು ವಿಮಾನದ ಪೈಲಟ್‌ ನಿರ್ಧರಿಸಿದ. ಆ ಸಂದರ್ಭದಲ್ಲಿ ತೆರೆದುಕೊಂಡ ವಿಮಾನದ ಬಾಗಿಲಿನಿಂದ ಹೊರ ಚೆಲ್ಲಿ ಹೋದ ಚಿನ್ನ, ವಜ್ರ, ಪ್ಲಾಟಿನಂ ಗಳು ರನ್‌ವೇ ಮತ್ತು ಆಸುಪಾಸಿನ ಸುಮಾರು 26 ಕಿ.ಮೀ. ಫಾಸಲೆಯಲ್ಲಿ ಹರಡಿಕೊಂಡು ಬಿದ್ದವು. 

ಈ ಘಟನೆಯನ್ನು ಅನುಸರಿಸಿ ರನ್‌ವೇಯನ್ನು ಮುಚ್ಚಲಾಯಿತು. ಪೊಲೀಸರು ಮತ್ತು ರಹಸ್ಯ ಸೇವಾ ದಳದ ಸಿಬಂದಿಗಳು ವ್ಯಾಪಕ ಶೋಧ ಕಾರ್ಯಾಚರಣೆಯಲ್ಲಿ ತೊಡಗಿಕೊಂಡರು. 

ಈ ವಿಮಾನದಲ್ಲಿ ವಜ್ರ, ಚಿನ್ನ, ಪ್ಲಾಟಿನಂ ತುಂಬಿದ್ದ ಸರಕು ಚುಕೋತಾ ಮೈನಿಂಗ್‌ ಆ್ಯಂಡ್‌ ಜಿಯೋಲಾಜಿಕಲ್‌ ಕಂಪೆನಿಗೆ ಸೇರಿದ್ದಾಗಿದೆ. ಈ ಕಂಪೆನಿಯಲ್ಲಿ ಕೆನಡದ ಕಿನ್‌ರೋಸ್‌ ಗೋಲ್ಡ್‌ ಕಂಪೆನಿಗೆ ದೊಡ್ಡ ಮಟ್ಟದ ಹಿತಾಸಕ್ತಿ ಇದೆ. 

Advertisement

ವಿಮಾನವು ಕ್ರಾಸ್ನೋಯಾರ್‌ಸ್ಕ್ ಮಾರ್ಗವಾಗಿ ಕುಪೋಲ್‌ (ಡೋಮ್‌) ಗಣಿ ಪ್ರದೇಶದತ್ತ ಸಾಗುತ್ತಿತ್ತು. ರಶ್ಯದ ಯಾಕುತ್‌ಸ್ಕ್ ಪ್ರಾಂತ್ಯ ಅತ್ಯಂತ ಶೀತಲ ಪ್ರದೇಶವಾಗಿದ್ದು ಇದು ವಜ್ರ ಉತ್ಪಾದನೆಯ ಪ್ರಮುಖ ಕೇಂದ್ರವಾಗಿದೆ. ಈ ವಿಮಾನದ ಹಾರಾಟವನ್ನು ಸಜ್ಜುಗೊಳಿಸಿದ ತಾಂತ್ರಿಕ ಇಂಜಿನಿಯರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next