Advertisement

KH 234: ಮಣಿರತ್ನಂ ಜೊತೆಗಿನ ಸಿನಿಮಾದ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ಕಮಲ್‌ ಹಾಸನ್

03:04 PM Oct 23, 2023 | Team Udayavani |

ಚೆನ್ನೈ: ದಿಗ್ಗಜ ನಟ ಕಮಲ್‌ ಹಾಸನ್‌ ಹಾಗೂ ನಿರ್ದೇಶಕ ಮಣಿರತ್ನಂ ಅವರು 35 ವರ್ಷಗಳ ಬಳಿಕ ಜೊತೆಯಾಗಿ ಸಿನಿಮಾ ಮಾಡುತ್ತಿರುವ ಕುರಿತ ಸುದ್ದಿ ಕಾಲಿವುಡ್‌ ಸಿನಿರಂಗದಲ್ಲಿ ಹವಾ ಎಬ್ಬಿಸಿತ್ತು. ʼನಾಯಗನ್‌ʼ ಬಳಿಕ ಈ ಸೂಪರ್‌ ಹಿಟ್‌ ಜೋಡಿ ಒಂದಾಗುತ್ತಿರುವ ವಿಚಾರ ಕೇಳಿ ಅಭಿಮಾನಿಗಳು ಖುಷ್‌ ಆಗಿದ್ದರು.

Advertisement

2022 ರ ನವೆಂಬರ್‌ 6 ರಂದು ಕಮಲ್‌ ಹಾಸನ್‌ ಅವರು ತನ್ನ ಹುಟ್ಟುಹಬ್ಬದ ದಿನದಂದು ಮಣಿರತ್ನಂ ಅವರೊಂದಿಗೆ ಸಿನಿಮಾ ಮಾಡುವುದಾಗಿ ಹೇಳಿದ್ದರು. ಈ ಸಿನಿಮಾಕ್ಕೆ‌ ತಾತ್ಕಾಲಿಕವಾಗಿ “KH234” ಎಂದು ಟೈಟರ್‌ ಇಡಲಾಗಿದೆ. ಸಿನಿಮಾ ಅನೌನ್ಸ್‌ ಬಳಿಕ ಯಾವ ಅಪ್ಡೇಟ್‌ ಕೂಡ ಬಂದಿರಲಿಲ್ಲ. ಇದೀಗ ಸಿನಿಮಾದ ಬಗ್ಗೆ ಸ್ವತಃ ಕಮಲ್‌ ಹಾಸನ್‌ ಅವರೇ ಒಂದು ಬಿಗ್‌ ಅಪ್ಡೇಟ್‌ ನ್ನು ನೀಡಿದ್ದಾರೆ.

ಕಮಲ್‌ ಹಾಸನ್‌ ನಡೆಸಿಕೊಡುವ ಬಿಗ್‌ ಬಾಸ್‌ ತಮಿಳು ಸೀಸನ್‌ -7 ನಲ್ಲಿ “KH234” ಬಿಗ್‌ ಅಪ್ಡೇಟ್‌ ನ್ನು ʼನಾಯಗನ್‌ʼ ಕೊಟ್ಟಿದ್ದಾರೆ.

“ಮಣಿರತ್ನಂ ಮತ್ತು ನಾನು ಚಿತ್ರವೊಂದಕ್ಕೆ ಕೈಜೋಡಿಸಿ ಬಹಳ ದಿನಗಳಾಗಿವೆ. ಮಣಿರತ್ನಂ ಚಿತ್ರದ ಟೀಸರ್ ಕೆಲಸ ಆರಂಭಿಸಿದ್ದು, ನಾನು ಕೂಡ ಚಿತ್ರೀಕರಣಕ್ಕೆ ಸೇರಿಕೊಂಡಿದ್ದೇನೆ. ನನ್ನ ಜನ್ಮದಿನವಾದ ನವೆಂಬರ್ 7 ರಂದು ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ” ರಿಲೀಸ್‌ ಆಗಲಿದೆ ಎಂದು ಕಮಲ್‌ ಹಾಸನ್‌ ಹೇಳಿದ್ದಾರೆ.

ತ್ರಿಶಾ, ಜಯಂ ರವಿ ಮತ್ತು ದುಲ್ಕರ್ ಸಲ್ಮಾನ್ ಚಿತ್ರದಲ್ಲಿ ಇರಲಿದ್ದಾರೆ ಎನ್ನಲಾಗಿದೆ. ಆದರೆ ಇದು ಅಧಿಕೃತವಾಗಿಲ್ಲ.

Advertisement

ಸದ್ಯ ಕಮಲ್ ಹಾಸನ್ ಶಂಕರ್ ಅವರ ‘ಇಂಡಿಯನ್ 2’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಹೆಚ್ ವಿನೋತ್ ಜೊತೆಗಿನ ಸಿನಿಮಾ ಕೂಡ ಅವರ ಕೈಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next