Advertisement
ಕಾರು ಕೊಳ್ಳುವುದು ಕಷ್ಟದ ಮಾತು ಎನ್ನುತ್ತಿದ್ದ ಕಾರ್ ಪ್ರಿಯರಿಗೆ ಈ ವರ್ಷ ಗೋಲ್ಡನ್ ಇಯರ್ ಎಂದೇ ಕರೆಯಬಹುದು. ಸದ್ಯ ಆಟೋಮೊಬೈಲ್ ಮಾರುಕಟ್ಟೆ ಮಂದಗತಿಯಲ್ಲಿ ಸಾಗುತಿದ್ದು, ಇದಕ್ಕೆ ವೇಗ ನೀಡಲು ಕಾರ್ ಕಂಪನಿಗಳು ಮತ್ತು ಶೋ ರೂಂಗಳು ಈ ಹಿಂದೆಂದೂ ನೀಡದಂತ ಆಫರ್‌ಗಳನ್ನು ನೀಡುತ್ತಿವೆ. ಹಿಂದಿನಂತೆ ಬ್ಯಾಂಕ್ ಲೋನ್ ಪಡೆ ಯಲು ಗ್ರಾಹಕರು ಬ್ಯಾಂಕ್‌ಗಳಿಗೆ ಅಲೆದಾ ಡುವಂತ ಪರಿಸ್ಥಿತಿ ಈಗ ಮಾಯವಾಗಿದೆ. ಈಗ ಶೋ ರೂಂಗಳಲ್ಲೇ ಬ್ಯಾಂಕ್‌ಗಳು ಲೋನ್ ವಿಭಾಗಗಳನ್ನು ತೆರೆದಿದ್ದು, ಬ್ಯಾಂಕ್ ಗಳಲ್ಲಿ ಕೂಡ ಕಾರ್ ಲೋನ್ ಗಳಿಗೆ ಪ್ರತ್ಯೇಕ ವಿಭಾಗಗಳಿವೆ. ಎರಡೂ ವಿಭಾಗಗಳಲ್ಲಿ ಕಾರ್ ಲೋನ್ ಬಗ್ಗೆ ಮಾಹಿತಿ ನೀಡಲಾಗುತ್ತದೆ.
Related Articles
Advertisement
ಬಡ್ಡಿ ದರ ಕಡಿಮೆ ಮಾಡಲಾಗಿದೆ: ಕಳೆದ ವರ್ಷ ಕಾರ್ ಲೋನ್ ಬಡ್ಡಿ ದರ ಶೇ.9.5 -10ರವರೆಗೆ ಇತ್ತು. ಆದರೆ ಈಗ ಅದು ಶೇ.8.6ಕ್ಕೆ ಇಳಿದಿದೆ. ಇದರಿಂದ ಗ್ರಾಹಕರು ಸುಮಾರು 10 ರಿಂದ 20ಸಾವಿರದಷ್ಟು ಪ್ರತಿ ವರ್ಷ ಉಳಿತಾಯ ಮಾಡಬಹುದು,. ಇಡೀ ಭಾರತೀಯ ಬ್ಯಾಂಕಿಂಗ್ ಇತಿಹಾಸದಲ್ಲೇ ಇಷ್ಟು ಕಡಿಮೆ ಕಾರ್ ಲೋನ್ ಬಡ್ಡಿ ದರ ಹಿಂದೆಂದೂ ಕಾಣಲು ಸಾಧ್ಯವಿಲ್ಲ.
ಪ್ರಸಕ್ತ ಸಾಲಿನಲ್ಲಿ ಕಾರು ಲೋನ್ ಮೇಲಿನ ಬಡ್ಡಿ ದರ ಕಡೆಮೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಶೇ.1ರಷ್ಟು ಕಾರ್ ಲೋನ್ ಬಡ್ಡಿ ಕಡಿತಗೊಳಿಸಲಾಗಿದೆ. ಕಾರ್ ಕೊಳ್ಳುವವರ ಸಹಾಯಕ್ಕೆ ಬ್ಯಾಂಕ್‌ಗಳು ಸದಾ ಸಿದ್ದವಾಗಿವೆ. ಕಾರ್ ಲೋನ್ ನೀಡಲು ಲೋನ್ ಮೇಳಗಳನ್ನು ಮಾಡಲಾಗುತ್ತಿದೆ. ಆಟೋಮೊಬೈಲ್ ಮಾರುಕಟ್ಟೆ ಮತ್ತೆ ಚೇತರಿಸಿಕೊಳ್ಳುತ್ತಿದೆ. -ನಾಗರಾಜ್, ಬ್ಯಾಂಕ್ ನೌಕರ ಸಂಘದ ಕಾರ್ಯದರ್ಶಿ ಬ್ಯಾಂಕ್‌ಗಳಲ್ಲಿ ಹಿಂದಿಗಿಂತಲೂ ಕಾರಿನ ಸಾಲಗಳು ಸುಲಭವಾಗಿ ಸಿಗುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಕಾರು ಕೊಳ್ಳುವ ಗಾರಹಕರಿಗೆ ಹೆಚ್ಚು ಬೇಗ ಸಾಲ ದೊರೆಯಲಿದ್ದು, ಈ ಹಿಂದೆ ಬ್ಯಾಂಕ್ ಗಳು ಪಡೆಯುತಿದ್ದ ಲೋನ್ ಪ್ರೊಸೆಸಿಂಗ್ ಫೀಸ್ ಈಗ ಪಡೆಯುತ್ತಿಲ್ಲ. ಗ್ರಾಹಕರ ಆದಾಯದ ವಿವರಗಳನ್ನು ಪರಿಶೀಲಿಸಿ 30ನಿಮಿಷದಲ್ಲಿ ಕಾರ್ ಲೋನ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.
-ಶ್ರೀನಿವಾಸ್, ಬ್ಯಾಂಕ್ ಕಾರ್ ಲೋನ್ ವಿಭಾಗದ ಮುಖ್ಯಸ್ಥ * ಲೋಕೇಶ್ ರಾಮ್