Advertisement

Cold Weather: ಕೊನೆಗೂ ಚಳಿ ಶುರು ಆಯ್ತು ಗುರು

03:25 PM Dec 18, 2024 | Team Udayavani |

ಪ್ರತಿ ವರ್ಷವೂ ದೀಪಾವಳಿಯ ನಂತರ ಶುರುವಾಗುವ ಚಳಿಗಾಲವು ಈ ಬಾರಿಯೂ ಭಾರಿ ಪ್ರಮಾಣದಲ್ಲಿ ಶುರುವಾಗಿದೆ. ಚಳಿಗಾಲ ಎಂದರೆ ಎಲ್ಲರಿಗೂ ಸ್ವಲ್ಪ ಕಷ್ಟವೇ. ಎಲ್ಲರೂ ಹೆಚ್ಚಾಗಿ ಇಷ್ಟಪಡುತ್ತಾರೆ ಹೊರತು ಚಳಿಗಾಲವನ್ನು ಇಷ್ಟಪಡುವುದಿಲ್ಲ. ಏಕೆಂದರೆ ವಿಪರಿತವಾದ ತಂಪಾದ ವಾತಾವರಣ ಇರುವುದರಿಂದ ರಾತ್ರಿ ವೇಳೆ ಮತ್ತು ಮುಂಜಾವಿನಲ್ಲಿ ಭಾರಿ ಪ್ರಮಾಣದ ತಂಪಾದ ವಾತಾವರಣ ಕಂಡುಬರುತ್ತದೆ. ಈ ಚಳಿಗಾಲ ಶುರುವಾದರೆ ರಾತ್ರಿ ಮತ್ತು ಮುಂಜಾವಿನಲ್ಲಿ ಇಬ್ಬನಿ ಬೀಳುವುದು ಮತ್ತು ಎಲ್ಲವೂ ಮಸುಕಾಗಿ ಕಾಣುತ್ತದೆ, ಯಾವ ರಸ್ತೆ ಮತ್ತು ವ್ಯಕ್ತಿಯು ಕಾಣುವುದಿಲ್ಲ.

Advertisement

ಹೌದು ಬೆಳ್ಳಂಬೆಳಗ್ಗೆ ಮುಂಜಾವು ಹೇಗಿರುತ್ತೆ ಎಂದರೆ ಅಬ್ಟಾ ಹೇಳಲು ಕೂಡ ಆಗದು. ಮುಂಜಾವಿನಲ್ಲಿ ಜನರಿಗೆ ಹಾಸಿಗೆ ಬಿಟ್ಟು ಹೇಳಲು ಕೂಡ ಆಗುವುದಿಲ್ಲ ಅಷ್ಟೊಂದು ತಂಪಾದ ವಾತಾವರಣ ಇರುತ್ತದೆ ಇನ್ನು ಏನೇ ಕೆಲಸ ಮಾಡಬೇಕು ಎಂದರು ನೀರು ಬಳಸಲೇಬೇಕು ನೀರು ಕೂಡ ಅತಿಯಾಗಿ ತಂಪಾಗಿರುವುದರಿಂದ ಯಾವುದೇ ಕೆಲಸ ಮಾಡಲು ಮನಸಾಗುವುದಿಲ್ಲ. ಹಾಗೆ ಹೊರಗಡೆ ಬಂದು ನೋಡಿದರೆ ಒಬ್ಬರ ಮುಖವು ಇನ್ನೊಬ್ಬರಿಗೆ ಕೂಡ ಕಾಣುವುದಿಲ್ಲ. ಮಧ್ಯಾಹ್ನ ತಲೆ ಕಾಯುವಷ್ಟು ಬಿಸಿಲಿದ್ದರೂ ಕೂಡ ಮತ್ತೆ ಸಂಜೆ 7ರ ನಂತರ ತಂಪಾದ ಹವಾಮಾನ ಬೀಸಲು ಶುರುವಾಗುತ್ತದೆ. ಈ ವೇಳೆಯಲ್ಲಿ ಯಾರೂ ಕೂಡ ಹೊರಬರಲು ಬಯಸುವುದಿಲ್ಲ.

ಈ ತಂಪಾದ ವಾತಾವರಣ ಕೆಲವರಿಗೆ ಇಷ್ಟಾನು ಆಗಬಹುದು. ಬಹಳಷ್ಟು ಜನರಿಗೆ ಇಷ್ಟ ಆಗದೇ ಇರಬಹುದು ಏಕೆಂದರೆ ತಂಡಿ ಜಾಸ್ತಿನೇ.

ತಂಡಿಯಲ್ಲಿ ಪದೇ ಪದೇ ಬಿಸಿ ಬಿಸಿ ಚಹಾ ಕುಡಿಯಬೇಕು ಅನಿಸುತ್ತದೆ. ಹಾಗೆ ಏನೇ ತಿಂದರೂ ಕೂಡ ಬಿಸಿ ಬಿಸಿಯಾಗಿ ಕೊಟ್ರೆ ಸಾಕಪ್ಪ ಅಂತ ಅನಿಸುವುದು ಸಹಜಾನೆ ತಾನೆ….

ಒಂದು ಕಡೆ ಚಳಿಯವಾದ ವಿಪರಿತವಾಗಿದ್ದರೂ ಕೂಡ ಇನ್ನೊಂದು ಕಡೆ ಚಳಿಗಾಲದಲ್ಲಿ ಹಲವಾರು ಜನರು ಅನಾರೋಗ್ಯದಿಂದ ಬಳಲುತ್ತಾರೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಹಲವಾರು ಕಾಯಿಲೆಗಳು ಕಂಡುಬರುತ್ತವೆ.

Advertisement

ಅವುಗಳೆಂದರೆ…? ಒಂದು ನೆಗಡಿ, ಸ್ರವಿಸುವ ಮೂಗು, ಗಂಟಲು ನೋವು, ಕೆಮ್ಮು, ಹೀಗೆ ಹಲವಾರು ವಿವಿಧ ರೀತಿಯ ವೈರಸ್‌ ಶೀತ ವಾತಾವರಣದಲ್ಲಿ ಹೆಚ್ಚು ಹೆಚ್ಚು ಸುಲಭವಾಗಿ ಹರಡುತ್ತವೆ. ಇದರಿಂದ ಜ್ವರ, ದೇಹದ ನೋವು, ಆಯಾಸ, ಜಠರುಗಳಿಂದ ಸಮಸ್ಯೆ ಹೀಗೆ ಹಲವಾರು ಕಾಯಿಲೆಗಳು ಹರಡಲು ಶುರುವಾಗುತ್ತದೆ.

ಅಲರ್ಜಿಯೂ ಸಹ ಈ ಹವಾಮಾನದ ಬದಲಾವಣೆಯಿಂದ ಸೊಳ್ಳೆ ಹೆಚ್ಚಾಗಿ ಡೆಂಗಿ ಅಥವಾ ಚಿಕನ್‌ ಗುನ್ಯಾ ದಂತಹ ರೋಗಗಳು ಹೆಚ್ಚಾಗಿ ಅಲರ್ಜಿಯು ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತದೆ.

ಚಳಿ ಅಂತೂ ಶುರುವಾಗಿಯೇ ಬಿಟ್ಟಿತ್ತು ಎಲ್ಲರೂ ತಮ್ಮ ತಮ್ಮ ಆರೋಗ್ಯದ ಕಡೆಗೆ ಗಮನವಿರಲಿ.

 ಪ್ರೀತಿ ಮಾಳವದೆ

ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next