Advertisement

8ರಂದು ಸೋನಂ ಮದುವೆ

08:00 AM May 02, 2018 | Team Udayavani |

ಹೊಸದಿಲ್ಲಿ: ಬಾಲಿವುಡ್‌ ನಟಿ ಸೋನಂ ಕಪೂರ್‌ ಹಾಗೂ ಆನಂದ್‌ ಅಹುಜಾ ಅವರ ವಿವಾಹ ಸುದ್ದಿಗಳಿಗೆ ಇಬ್ಬರ ಕುಟುಂಬಗಳೂ ಅಧಿಕೃತ ಮೊಹರು ಒತ್ತಿವೆ. ಈ ಕುರಿತಂತೆ ಪ್ರಕಟನೆ ನೀಡಿರುವ ಎರಡೂ ಕುಟುಂಬದ ಹಿರಿಯರು, ಮೇ 8ರಂದು ಮುಂಬಯಿಯಲ್ಲೇ ಅವರಿಬ್ಬರ ವಿವಾಹ ನೆರವೇರಿಸುವುದಾಗಿ ತಿಳಿಸಿವೆ. ಸೋನಂ-ಆನಂದ್‌ ವಿವಾಹದ ಬಗ್ಗೆ ಹಲವಾರು ಮಾಧ್ಯಮಗಳಲ್ಲಿ ಕೆಲವು ತಿಂಗಳುಗಳಿಂದ ಗುಸುಗುಸು ವ್ಯಕ್ತವಾಗುತ್ತಿತ್ತು. ಜಿನಿವಾದಲ್ಲಿ ಇವರು ಸದ್ಯದಲ್ಲೇ ಮದುವೆಯಾಗುತ್ತಾರೆಂಬ ಸುದ್ದಿಗಳೂ ಬಿತ್ತರಗೊಂಡಿದ್ದವು. ಆದರೀಗ, ಆ ಎಲ್ಲಾ ಗಾಳಿ ಸುದ್ದಿಗಳಿಗೆ ಅಧಿಕೃತವಾಗಿ ತೆರೆಬಿದ್ದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next