ಪುರಾತನ ಗ್ರೀಕ್‌ನ ವಿದ್ವಾಂಸರು ರೂಪಿಸಿರುವ “ಗೋಲ್ಡನ್ ರೇಷಿಯೋ ಆಫ್ ಬ್ಯೂಟಿ ‘ ಸಿದ್ಧ ಸೂತ್ರ ಆಧರಿಸಿ, ಹಲವಾರು ಸುಂದರಿ ಯರನ್ನು ವಿಶ್ಲೇಷಿಸಿದ ಲಂಡನ್‌ನ ಕಾಸ್ಮೆಟಿಕ್ ಸರ್ಜನ್ ಡಾ. ಜೂಲಿಯನ್ ಡಿಸಿಲ್ವಾ ನೇತೃತ್ವದ ತಂಡ, ಬೆಲ್ಲಾ ಅವರೇ “ಬೆಲ್ಲದ ಅಚ್ಚು’ವಿನಂಥ ಹುಡುಗಿ ಎಂಬ ನಿರ್ಧಾರಕ್ಕೆ ಬಂದಿದೆ.
Advertisement
ಗ್ರೀಕರ ಸೂತ್ರಗಳಿಗೆ ಬೆಲ್ಲಾರ ಮುಖ ಶೇ.94.35ರಷ್ಟು ಹೋಲುತ್ತದೆ ಎಂಬುದು ಈ ತಂಡದ ಅಭಿಮತ. ಪಟ್ಟಿಯಲ್ಲಿ ಅಮೆರಿಕದ ಪಾಪ್ ತಾರೆ ಬೆಯೋನ್ಸ್‌ಗೆ (ಶೇ. 92.44) ದ್ವಿತೀಯ ಸ್ಥಾನ ಸಿಕ್ಕಿದ್ದರೆ, ಹಾಲಿವುಡ್ ನಟಿ ಆ್ಯಂಬರ್ ಹರ್ಡ್ (ಶೇ. 91.81) ತೃತೀಯ ಸ್ಥಾನ ಪಡೆದಿದ್ದಾರೆ.
“ಗೋಲ್ಡನ್ ರೇಷಿಯೋ ಆಫ್ ಬ್ಯೂಟಿಫಿ’ಯಲ್ಲಿ ಯಾವುದೇ ಯುವತಿಯ ಮುಖದ ಉದ್ದ ಅಗಲಕ್ಕೆ ತಕ್ಕಂತೆ ಕಣ್ಣು, ಮೂಗು, ಹಣೆ, ಗಲ್ಲ, ತುಟಿಗಳು, ಕೆನ್ನೆಗಳ ಅಳತೆಗಳು ಎಷ್ಟೆಷ್ಟಿರ ಬೇಕೆಂದು ನಿಖರವಾಗಿ ಸೂಚಿಸಲಾಗಿದೆ. ಅದನ್ನು, “ಗೋಲ್ಡನ್ ರೇಷಿಯೋ’ ಎನ್ನಲಾಗುತ್ತದೆ. ಬೆಲ್ಲಾ ಪಡೆದ ಅಂಕ
ಮುಖದ ಆಕಾರ – ಶೇ. 94.5
ಹುಬ್ಬುಗಳು – ಶೇ. 89
ಕಣ್ಣುಗಳು ಇರುವ ಸ್ಥಳ -ಶೇ. 97.65
ತುಟಿಗಳು – ಶೇ. 94.1
ಗಲ್ಲ – ಶೇ. 99.7, ಹಣೆ – ಶೇ. 97
ಹುಬ್ಬು-ಕಿವಿ ನಡುವಿನ ಭಾಗ – ಶೇ. 88
ಮೂಗಿನ ಉದ್ದ-ಅಗಲ – ಶೇ. 93.4
ಮೂಗಿನ ಬೇಸ್/ತುಟಿಗಳ ಅಗಲ – ಶೇ. 95.8