Advertisement

“ಇತರರ ಕಷ್ಟಕ್ಕೆ ಸ್ಪಂದಿಸುವುದೇ ಶ್ರೇಷ್ಠ ಕಾರ್ಯ’

08:25 PM Apr 10, 2019 | Sriram |

ಸುರತ್ಕಲ್‌: ಕಷ್ಟದಲ್ಲಿರುವವರ ಕಣ್ಣೀರು ಒರೆಸುವ ಕಾರ್ಯ ಪುಣ್ಯದ ಕಾರ್ಯವಾಗಿದ್ದು ಹತ್ತು ವರ್ಷಗಳಲ್ಲಿ ವಿವಿಧ ಸೇವೆ ಸಲ್ಲಿಸುತ್ತಾ ಬಡವರ ಕಣ್ಣಿನೀರು ಒರೆಸುವ ಕರಾವಳಿ ಆಶ್ರಯ ಸಮುದಾಯ ಒಂದು ಮಾದರಿ ಸಂಸ್ಥೆ ಎಂದು ಬೊಲೊಟ್ಟು ವಿಖ್ಯಾತನಂದ ಸ್ವಾಮೀಜಿ ಹೇಳಿದರು.

Advertisement

ಕರಾವಳಿ ಆಶ್ರಯದ ದಶಮಾನೋತ್ಸವ ಸಮಾರೋಪದಲ್ಲಿ ಅರ್ಹ ಫಲಾ ನುಭಾವಿಗಳಿಗೆ ವೈದ್ಯಕೀಯ ಚಿಕಿತ್ಸಾ ನೆರವು ವಿತರಣೆ ಮತ್ತು ದಶಮಾನೋತ್ಸವ ಪ್ರಯುಕ್ತ “ಜನಾಶ್ರಯ ವಾಣಿ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.

ಶಾಸಕ ಡಾ| ಭರತ್‌ ಶೆಟ್ಟಿ ವೈ. ಭೇಟಿ ನೀಡಿ ಶುಭಕೋರಿದರು. ಪ್ರಾಸ್ತಾವಿಕ ಭಾಷಣ ಮಾಡಿದ ಸಂಸ್ಥೆಯ ಸಂಚಾಲಕ ಸೂರ್ಯನಾರಾಯಣ ಎಚ್‌., ಸಂಸ್ಥೆಯ ಹುಟ್ಟು ಮತ್ತು ಬೆಳವಣಿಗೆಗಳ ವಿವರ ನೀಡುತ್ತಾ ದಾನಿಗಳ ಪ್ರೋತ್ಸಾಹವೇ ಸಂಸ್ಥೆಯ ಜನ ಸೇವಾ ಯೋಜನೆಗಳಿಗೆ ನಮಗೆ ಸ್ಫೂರ್ತಿ ಎಂದು ಹೇಳಿದರು.

ದಿ| ಬಿ.ಕೆ. ಸಂಜೀವ ಸ್ಮರಣಾರ್ಥ ಸಭಾ ವೇದಿಕೆಯನ್ನು ನಿರ್ಮಿಸಲು ಸಹಕರಿಸಿದ ಅವರ ಸುಪುತ್ರ ಬಿ.ಕೆ. ತಾರನಾಥ ಸುರತ್ಕಲ್‌ ಅವರನ್ನು ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ ವಿತರಣೆ
ಈ ಸಂದರ್ಭ ಪ್ರತಿಭಾ ಪುರಸ್ಕಾರಗಳನ್ನು ವಿತರಿಸಲಾಯಿತು.ವಿದ್ಯಾದಾಯಿನಿ ಸಂಸ್ಥೆಯ ನಿವೃತ್ತ ಅಧ್ಯಾಪಿಕೆ ಕಲಾವತಿ ಮತ್ತು ಖ್ಯಾತ ನೃತ್ಯ ಮತ್ತು ಸಂಗೀತ ತರಬೇತುದಾರರಾದ ಸುಮಂಗಲಾ ರತ್ನಾಕರ್‌, ಕರಾವಳಿ ಆಶ್ರಯ ಸಮುದಾಯದ ಕಾರ್ಯಕ್ರಮಗಳನ್ನು ಮೆಚ್ಚಿ ತಮ್ಮ ಸಹಕಾರವನ್ನು ವ್ಯಕ್ತಪಡಿಸಿದರು. ಸಂಸ್ಥೆಯ ಅಧ್ಯಕ್ಷ ಸುರೇಶ್‌ ಕೋಟ್ಯಾನ್‌ ಇಡ್ಯಾ,ಗೌ.ಪ್ರ.ಕಾರ್ಯದರ್ಶಿ ಕುಮಾರ್‌ ಕರ್ಕೇರ ಹೊಸಬೆಟ್ಟು,ಕೋಶಾ ಧಿಕಾರಿಗಳಾದ ಸುನೇತ್ರಾ ಎಚ್‌. ಉಪಸ್ಥಿತರಿದ್ದರು. ದಿವ್ಯಾ ಸುದೇಶ್‌ ಸ್ವಾಗತಿಸಿದರು. ನವೀನ್‌ ಕುಮಾರ್‌ ಇಡ್ಯಾ ನಿರೂಪಿಸಿದರು.

Advertisement

ಮಾದರಿಯಾದ ಕಾರ್ಯಕ್ರಮ
ರಾಮಚಂದರ್‌ ಬೈಕಂಪಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರಾವಳಿ ಆಶ್ರಯ ಸಮುದಾಯವು ನಡೆಸುತ್ತಿರುವ ಜನ ಸೇವಾ ಕಾರ್ಯಕ್ರಮಗಳು ಶ್ಲಾಘ ನೀಯ ಮತ್ತು ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು,ಇತರ ಸಂಸ್ಥೆಗಳಿಗೆ ಮಾದರಿ ಹೆಜ್ಜೆ ಹಾಕಿಕೊಟ್ಟಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next