Advertisement

ಟೆಸ್ಟ್‌ನಿಂದ ಹೊರಬಿದ್ದಿದ್ದರಿಂದ ಬೇಸರವಾಗಿದ್ದು ನಿಜ: ಧವನ್‌

06:00 AM Nov 29, 2018 | |

ಸಿಡ್ನಿ: ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌, ಸದ್ಯ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿಲ್ಲ. 

Advertisement

ಹಿಂದಿನ ಟೆಸ್ಟ್‌ ಪಂದ್ಯಗಳಲ್ಲಿ ಅವರ ಕಳಪೆ ಫಾರ್ಮ್ ಪರಿಗಣಿಸಿ, ಬಿಸಿಸಿಐ ಆಯ್ಕೆ ಸಮಿತಿ ಈ ನಿರ್ಧಾರ ಮಾಡಿದೆ. ಈ ಬಗ್ಗೆ ಮೊದಲ ಬಾರಿಗೆ ಧವನ್‌ ಪ್ರತಿಕ್ರಿಯೆ ನೀಡಿದ್ದಾರೆ. 

ಟೆಸ್ಟ್‌ ತಂಡದಿಂದ ಕೈಬಿಟ್ಟಿದ್ದು ನೋಡಿ ಆರಂಭದಲ್ಲಿ ಸ್ವಲ್ಪ ಬೇಸರವಾಗಿತ್ತು. ಆದರೆ ಪ್ರಸ್ತುತ ಆ ನೋವಿನಿಂದ ಹೊರಬಂದಿದ್ದೇನೆ. ನಾನೀಗ ಧನಾತ್ಮಕವಾಗಿ ಯೋಚಿಸುತ್ತಿದ್ದೇನೆ, ನನ್ನ ಮನಸ್ಸು ಆನಂದದಲ್ಲಿದೆ, ಈ ಬಾರಿ ಭಾರತಕ್ಕೆ ಆಸ್ಟ್ರೇಲಿಯ ವಿರುದ್ಧ ಗೆಲ್ಲುವ ಎಲ್ಲ ಅವಕಾಶವಿದೆ ಎಂದು ಅವರು ಹೇಳಿದ್ದಾರೆ.  ಧವನ್‌ ಪ್ರಸ್ತುತ ಟಿ20, ಏಕದಿನ ಪಂದ್ಯಗಳಲ್ಲಿ ಅತ್ಯುತ್ತಮ ಲಯದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next