Advertisement

ಪ್ರಧಾನಿ ಮೋದಿಯಿಂದ ITPO ರಾಷ್ಟ್ರಾರ್ಪಣೆ

12:16 AM Jul 27, 2023 | Team Udayavani |

ಹೊಸದಿಲ್ಲಿ: ದೇಶದ ಅತಿದೊಡ್ಡ ಸಭಾಂಗಣವಿರುವ ಸಂಕೀರ್ಣವೆಂಬ ಖ್ಯಾತಿಗೆ ಪಾತ್ರವಾಗಿರುವ, ನವೀಕೃತ ಐಟಿಪಿಒ (ಇಂಡಿಯಾ ಟ್ರೇಡ್‌ ಪ್ರಮೋಶನ್‌ ಆರ್ಗನೈಸೇಶನ್‌) ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದ್ದಾರೆ. ಪ್ರಗತಿ ಮೈದಾ ನದಲ್ಲಿರುವ ಐಟಿಪಿಒದಲ್ಲಿ ಹೋಮ-ಹವನಗಳು ನಡೆದಿದ್ದು, ಇದರಲ್ಲಿ ಮೋದಿ ಕೂಡ ಪಾಲ್ಗೊಂಡಿದ್ದರು. ಕರ್ನಾಟಕದ ಶೃಂಗೇರಿ ಮಠದ ಅರ್ಚಕರಿಂದ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗಿದೆ. ಇದೇ ಸಂಕೀರ್ಣದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ20 ರಾಷ್ಟ್ರಗಳ ಸಭೆಯನ್ನು ನಡೆಸಲು ಯೋಜಿಸಲಾಗಿದೆ.

Advertisement

ಭಾರತ ಮಂಠಪಂ ಸಮರ್ಪಣಂ: 123 ಎಕ್ರೆಯಲ್ಲಿ ವ್ಯಾಪಿಸಿರುವ ಐಟಿಪಿಒ ಸಂಕೀರ್ಣದ ಭಾಗವಾಗಿ ನೂತನವಾಗಿ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಹಾಗೂ ಸಭಾಂಗಣ (ಐಇಸಿಸಿ)ವನ್ನು ನಿರ್ಮಿಸಲಾ­ಗಿದೆ. ಭಾರತ ಮಂಠಪಂ ಎಂದು ಹೆಸರಿಸಲಾಗಿರುವ ಸಭಾಂಗಣವನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ದೇಶದಲ್ಲಿರುವ ಅತಿದೊಡ್ಡ ಸಭಾಂಗಣವೆಂಬ ಖ್ಯಾತಿಗೆ ಪಾತ್ರವಾಗಿರುವ ಈ ಭಾರತ ಮಂಠಪಂ ಸಿಡ್ನಿಯಲ್ಲಿರುವ ಒಪೆರಾ ಹೌಸ್‌ಗಿಂತಲೂ ವಿಸ್ತಾರವಾಗಿದೆ..

ವಿಶ್ವದ ಅಗ್ರ ಆರ್ಥಿಕತೆಯಲ್ಲಿ ಭಾರತ
ಐಟಿಪಿಒ .ಉದ್ಘಾಟಿಸಿ ಮಾತನಾಡಿದ ಮೋದಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದೆ. ಮೂರನೇ ಬಾರಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದ ಭಾರತ ವಿಶ್ವದ 3ನೇ ಅತೀದೊಡ್ಡ ಆರ್ಥಿ ಕತೆಗಳಲ್ಲಿ ಒಂದಾಗಲಿದೆ ಎಂದು ಹೇಳಿದ್ದಾರೆ. ಭಾರತ ದಲ್ಲಿ ಬಡತನ ನಿರ್ಮೂಲನೆ ಮಾಡುವ ಭರವಸೆಯನ್ನು ನೀಡಿದ್ದಾರೆ. ಇದೇ ವೇಳೆ ಭಾರತ ಪ್ರಜಾಪ್ರಭುತ್ವದ ತಾಯಿ ಎಂಬುದನ್ನು ಜಗತ್ತೇ ಒಪ್ಪಿಕೊಂಡಿದೆ ಎಂದಿದ್ದಾರೆ.

ಯುಗೇ ಯುಗೇ ಭಾರತ ಶೀಘ್ರ

ಪ್ರಗತಿ ಮೈದಾನ ಸಂಕೀರ್ಣ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರಾಷ್ಟ್ರ ರಾಜಧಾನಿ ದಿಲ್ಲಿ ಸಾಕ್ಷಿ ಯಾಗುತ್ತಿದೆ. ದಿಲ್ಲಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕ, ಪೊಲೀಸರ ಸ್ಮಾರಕ, ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸ್ಮಾರಕವಿದೆ. ಇವೆಲ್ಲವೂ ನಮ್ಮ ಹೆಮ್ಮೆ, ಇದರ ಜತೆಗೆ ಶೀಘ್ರವೇ ವಿಶ್ವದಲ್ಲೇ ಅತೀ ದೊಡ್ಡ ವಸ್ತು ಸಂಗ್ರಹಾಲಯವಾಗಿ ಯುಗೇ ಯುಗೇ ಭಾರತಂ ಎಂಬ ವಸ್ತು ಸಂಗ್ರಹಾಲಯವನ್ನು ದಿಲ್ಲಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರಧಾನಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next