Advertisement

ಐಟಿಐ ಕಲಿತವರಿಗಿದೆ ಉತ್ತಮ ಭವಿಷ್ಯ

03:15 PM Jul 08, 2019 | Suhan S |

ರೋಣ: ಐಟಿಐ ಕಲಿಕೆಯಿಂದ ಭವಿಷ್ಯದಲ್ಲಿ ಜೀವನ ಸುಭದ್ರವಾಗಿಸಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಇಂಜಿನಿಯರಿಂಗ್‌ ಓದಿದವರಿಗೇ ಉದ್ಯೋಗವಕಾಶಗಳು ಕಡಿಮೆಯಾಗುತ್ತಿವೆ. ಏಕೆಂದರೆ ಅವರ ಸಂಬಳದ ನಿರೀಕ್ಷೆ ಹೆಚ್ಚಿರುತ್ತದೆ. ಆದರೆ ಐಟಿಐ ಮತ್ತು ಡಿಪ್ಲೊಮಾ ಕಲಿತವರ ಸಂಬಳ ನಿರೀಕ್ಷೆ ಕಡಿಮೆ ಇರುವುದರಿಂದ ಕಂಪನಿಗಳು ಅವರನ್ನೇ ಹೆಚ್ಚು ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳುತ್ತವೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಬದಲಾಗುವುದು ಎಂದು ಮುಖ್ಯೋಪಾಧ್ಯಯ ಸುರೇಶ ಕೊಪ್ಪದ ಹೇಳಿದರು.

Advertisement

ಕೋಟುಮಚಗಿ ಗ್ರಾಮದ ಸೋಮೇಶ್ವರ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ 2017ರಿಂದ 2019ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಬೀಳ್ಳೊಡುಗೆ ಹಾಗೂ ಸರಸ್ವತಿ ಪೂಜಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಎಸ್‌ಎಸ್‌ಎಲ್ಸಿ, ಪಿಯುಸಿಯಲ್ಲೇ ವಿದ್ಯಾಭ್ಯಾಸ ಮೊಟಕುಗೊಳಿಸುವವರು, ಫೇಲಾದರೆ ಭವಿಷ್ಯವಿಲ್ಲ ಎಂದು ತಿಳಿದುಕೊಳ್ಳುವವವರು ಯೋಚನೆ ಮಾಡಬೇಕು. ಅನುತ್ತಿರ್ಣರಾದರೂ, ಕಡಿಮೆ ಅಂಕ ಬಂದರೂ ಭವಿಷ್ಯಕ್ಕೆ ಪೂರಕವಾದ ವಿದ್ಯಾಭ್ಯಾಸ ಮುಂದುವರಿಸಲು ಸಾಕಷ್ಟು ಅವಕಾಶಗಳಿವೆ. ಐಟಿಐ ಕೋರ್ಸ್‌ ಆಯ್ಕೆ ಮಾಡಿಕೊಂಡಲ್ಲಿ ಭವಿಷ್ಯ ಸದೃಢವಾಗುತ್ತದೆ.

ನಾವು ನಮ್ಮ ಜೀವನದ ಗುರಿ ಸಾಧಿಸುವುದು ಕಷ್ಟಕರ. ಹಾಗೆ ಸಾಧಿಸಿದ ಯಶಸ್ಸನ್ನು ಕಾಪಾಡಿಕೊಳ್ಳುವುದು. ಹೀಗಾಗಿ ಆದ್ದರಿಂದ ಸೋಲೇ ಗೆಲುವಿನ ಸೋಪಾನ. ಯಶಸ್ಸು ಬಂದಾಗ ಸಾಗಿಬಂದ ದಾರಿಯನ್ನು ನಾವು ಎಂದಿಗೂ ಮರೆಯಬಾರದು. ವಿದ್ಯಾರ್ಥಿಗಳ ಜೀವನದಲ್ಲಿ ಸಾಧನೆ ಮುಖ್ಯ. ಪರಿಶ್ರಮ ಶ್ರದ್ಧೆ, ಆಸಕ್ತಿ, ನಿರಂತರ ಅಭ್ಯಾಸ ಮಾಡಿದರೆ ತಮ್ಮ ಪರೀಕ್ಷೆ ಫಲಿತಾಂಶ ನಿರೀಕ್ಷೆಗೂ ಮೀರಿ ಯಶಸ್ಸನ್ನು ಪಡೆಯಬಹುದು. ಐಟಿಐ ಕೋರ್ಸ್‌ ಪೂರ್ಣಗೊಳಿಸಿದವರಿಗೆ ಉದ್ಯೋಗ ಅವಕಾಶ ದೊರಕುವುದರಲ್ಲಿ ಯಾವುದೇ ಅನುಮಾನ ಇಲ್ಲ. ವಿದ್ಯಾರ್ಥಿಗಳು ಶ್ರಮ ವಹಿಸಿ ಓದುವ ಮೂಲಕ ಉತ್ತಮ ದರ್ಜೆಯಲ್ಲಿ ತೆರ್ಗಡೆಯಾಗಬೇಕು ಎಂದು ಹೇಳಿದರು. ಹೆಸ್ಕಾಂ ಹಿರಿಯ ಅಧಿಕಾರಿ ಆನಂದ ಕುಲಕರ್ಣಿ ಮಾತನಾಡಿ, ಐಟಿಐ ವ್ಯಾಸಂಗ ಮಾಡಿದವರಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕೇಂದ್ರ, ರಾಜ್ಯ ಸರಕಾರ ಹಲವು ಸೌಲಭ್ಯ ಒದಗಿಸಿದೆ. ಎರಡು ವರ್ಷದ ಐಟಿಐ ಕೋರ್ಸ್‌ ಈಗ ದ್ವಿತೀಯ ಪಿಯುಸಿಗೆ ಸಮಾನವಾಗಿದೆ. ನೇರವಾಗಿ ಬಿಎ, ಬಿಕಾಂ, ಬಿಬಿಎಂ ಪದವಿಗೆ ಸೇರಬಹುದು ಅಥವಾ ಕೈಗಾರಿಕಾಗಳಲ್ಲಿ ಅಪ್ರಂಟಿಸ್‌ ತರಬೇತಿ ಪಡೆಯಬಹುದು. ಅಪ್ರಂಟಿಸ್‌ ಅವಧಿಯಲ್ಲಿ ಮಾಸಿಕ ಸ್ಟೈಫಂಡ್‌ ದೊರಕಲಿದೆ. ಬಳಿಕ ಅಲ್ಲಿಯೇ ಕೆಲಸ ಮುಂದುವರಿಸಬಹುದು. ಇನ್ನೊಂದೆಡೆ ಐಟಿಐ ಮುಗಿಸಿದವರು ಡಿಪ್ಲೊಮಾ ಕೋರ್ಸ್‌ ಆಸಕ್ತಿ ಇದ್ದರೆ 2 ವರ್ಷದ ಡಿಪ್ಲೊಮಾ ಮುಗಿಸಿ ಇಂಜಿನಿಯರಿಂಗ್‌ ಪದವಿಗೂ ಸೇರಲು ಅವಕಾಶವಿದೆ. ರಾತ್ರಿ ಕಾಲೇಜಿನಲ್ಲೂ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಕೃಷ್ಣಾ ಕುಲಕರ್ಣಿ ಮಾತನಾಡಿ, ಎಚ್ಚರಿಕೆ ಮತ್ತು ಸಾಮರ್ಥ್ಯ ಗಣ ಮೈಗೂಡಿಸಿಕೊಂಡರೆ ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ತಲುಪಲು ಸಾಧ್ಯವಿದೆ. ವೃತ್ತಿ ಶಿಕ್ಷಣವನ್ನು ಕೇವಲ ಉದ್ಯೋಕ್ಕೆ ಪರಿಗಣಿಸಬಾರದು. ಅದು ಜೀವನದ ಗುರಿ ಎಂಬುದಾಗಿ ಕಾಣಬೇಕು ಎಂದು ಹೇಳಿದರು

Advertisement

2017ರಿಂದ 2019ರ ವರೆಗಿನ ವಿದ್ಯಾರ್ಥಿಗಳಿಗೆ ತರಬೇತಿ ಪ್ರಮಾಣ ಪತ್ರ ವಿತರಿಸಲಾಯಿತು. ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರವೀಣ ಮಡಿವಾಳರ, ಉಪನ್ಯಾಸಕರು, ಸೋಮೇಶ್ವರ ಸಂಸ್ಥೆ ಆಡಳಿತ ಮಂಡಳಿ ಸದಸ್ಯರು, ಗ್ರಾಪಂ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next