ಕೋಲಾರ: ರಾಜ್ಯದಲ್ಲಿ ಆನ್‌ಲೆ„ನ್ ಮೂಲಕ ಐ.ಟಿ.ಐ. ವಿದ್ಯಾರ್ಥಿಗಳಿಗೆ ಸಿಬಿಟಿ ಪರೀಕ್ಷೆ ರದ್ದುಪಡಿಸುವಂತೆ ಒತ್ತಾಯಿಸಿ ಶನಿವಾರ ನಗರದ ಬಸ್ ನಿಲ್ದಾಣದ ವೃತ್ತದಲ್ಲಿ ಜಿಲ್ಲಾ ಖಾಸಗಿ
ಐ.ಟಿ.ಐ ಆಡಳಿತ ಮಂಡಳಿಯ ಸದಸ್ಯರು ಹಾಗೂ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಖಾಸಗಿ ಐ.ಟಿ.ಐ ಆಡಳಿತ ಮಂಡಳಿಯ ಅಧ್ಯಕ್ಷ ಬೈಚಪ್ಪ ಮಾತನಾಡಿ, ಐ.ಟಿ.ಐ. ವಿದ್ಯಾರ್ಥಿ ಗಳಿಗೆ ಮೊದಲು ಪರೀಕ್ಷೆ ನಡೆದಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವುದು ಸೂಕ್ತವಾಗಿಲ್ಲ. ಸಿ.ಬಿ.ಟಿ. ಪರೀಕ್ಷೆಯನ್ನು ಸಂಪೂರ್ಣ ರದ್ದುಗೊಳಿಸಿ ಫಲಿತಾಂಶ ಘೋಷಣೆ ಮಾಡಬೇಕು. ಬಡ ವಿದ್ಯಾರ್ಥಿಗಳು ಐಟಿಐಗೆ ದಾಖಲಾಗಿದ್ದು ಅವರಿಗೆ ಎರಡು ಬಾರಿ ಶುಲ್ಕ ಎರಡು ಬಾರಿ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆಯಾಗುತ್ತದೆ ಎಂದರು.
ಜಿಲ್ಲೆಯಲ್ಲಿ 27 ಖಾಸಗಿ ಐ.ಟಿ.ಐ ಗಳು ಇದ್ದು, 1730 ಜನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅವರ ಹಿತ ಕಾಪಾಡುವ ಕೆಲಸ ಕೇಂದ್ರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮೇಲಿದ್ದು ಪ್ರತಿಭಟನೆ ನಡೆಸಿದ ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ :ವಾಲ್ಮೀಕಿ ಸಮಾಜಕ್ಕೆ ಪ್ರತ್ಯೇಕ ರೆಜಿಮೆಂಟ್: ಪಾದಯಾತ್ರೆ
ಈ ಸಂದರ್ಭದಲ್ಲಿ ಖಾಸಗಿ ಐ.ಟಿ.ಐ. ಸಂಸ್ಥೆಗಳ ಮುಖ್ಯಸ್ಥರಾದ ಮಂಜುನಾಥ ಗೌಡ, ಎಂ.ವಿ.ನಾರಾಯಣಸ್ವಾಮಿ, ರಾಮನಾಥ್, ರವಿ, ವಿಶ್ವನಾಥ್, ಮಂಜುನಾಥ್, ವಿದ್ಯಾರ್ಥಿಗಳು ಇದ್ದರು.