Advertisement

ಅಂಕಿತಾ-ಪ್ರಾರ್ಥನಾ ಕ್ವಾರ್ಟರ್‌ ಫೈನಲ್‌ಗೆ

11:21 PM Mar 07, 2023 | Team Udayavani |

ಬೆಂಗಳೂರು: ಇಲ್ಲಿನ ಕೆಎಸ್‌ಎಲ್‌ಟಿಎ ಅಂಕಣದಲ್ಲಿ ನಡೆಯುತ್ತಿರುವ ಐಟಿಎಫ್ ಮಹಿಳಾ ಓಪನ್‌ ಟೆನಿಸ್‌ನಲ್ಲಿ ಅಂಕಿತಾ ರೈನಾ-ಪ್ರಾರ್ಥನಾ ಥೋಂಬರೆ ಜೋಡಿ ಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ಗೇರಿದೆ. 2ನೇ ಶ್ರೇಯಾಂಕಿತ ಅಂಕಿತಾ-ಪ್ರಾರ್ಥನಾ, ವೈಲ್ಡ್‌ ಕಾರ್ಡ್‌ ಮೂಲಕ ಪ್ರವೇಶ ಪಡೆದಿದ್ದ ಇಂಡೋ-ಜರ್ಮನ್‌ ಜೋಡಿ ಶರ್ಮದಾ ಬಾಲು-ಸಾರಾ ರೆಬೆಕ್ಕಾ ಸೆಕುಲಿಕ್‌ ಅವರನ್ನು 5-7, 6-3, 10-6ರಿಂದ ಮಣಿಸಿತು.

Advertisement

3ನೇ ಶ್ರೇಯಾಂಕಿತ ಋತುಜಾ ಭೋಂಸ್ಲೆ-ಸ್ವೀಡನ್ನಿನ ಜಾಕ್ವೆಲಿನ್‌ ಅವದ್‌ ಜೋಡಿ ಕೂಡ ಕ್ವಾರ್ಟರ್‌ ಫೈನಲ್‌ಗೇರಿದೆ. ಈ ಜೋಡಿ ಜಿ ಹೀ ಚಾಯಿ-ಲೀ ಯಾ  ಅವರನ್ನು 6-4, 6-2ರಿಂದ ಮಣಿಸಿತು.

 

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next