Advertisement

ಅಂತಾರಾಷ್ಟ್ರೀಯ ಯೋಗ ದಿನ: ಹಿಮಪಾತದ ನಡುವೆ 18 ಸಾವಿರ ಅಡಿ ಎತ್ತರದಲ್ಲಿ ಯೋಧರಿಂದ ಯೋಗ

09:37 AM Jun 21, 2021 | Team Udayavani |

ನವದೆಹಲಿ:ಕೋವಿಡ್ ಸೋಂಕಿನ ಭೀತಿಯ ನಡುವೆಯೇ ಸೋಮವಾರ(ಜೂನ್ 21) ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂಡೋ-ಟಿಬೇಟಿಯನ್ ಗಡಿ ಭದ್ರತಾ ಪಡೆ(ಐಟಿಬಿಪಿ) ಯೋಧರು ಲಡಾಖ್ ನಲ್ಲಿ ಬರೋಬ್ಬರಿ ಹದಿನೆಂಟು ಸಾವಿರಕ್ಕೂ ಎತ್ತರದ ಪ್ರದೇಶದಲ್ಲಿ ಹಿಮಪಾತ ಹಾಗೂ ಮೈಕೊರೆಯುವ ಚಳಿಯ ನಡುವೆ ಯೋಗಾಭ್ಯಾಸ ಮಾಡುವ ಮೂಲಕ ಯೋಗ ದಿನಾಚರಣೆ ಆಚರಿಸಿದ್ದಾರೆ.

Advertisement

ಇದನ್ನೂ ಓದಿ:ಲಷ್ಕರ್ ಸಂಘಟನೆಯ ಕಮಾಂಡರ್ ಸೇರಿದಂತೆ ಮೂವರು ಉಗ್ರರನ್ನು ಹತ್ಯೆ ಮಾಡಿದ ಸೇನಾ ಪಡೆ

ಗಡಿ ಭದ್ರತಾ ಪಡೆಯ “ಹಿಮವೀರರು” ಕೂಡಾ ಲಡಾಖ್ ನ ಪಾಂಗೋಂಗ್ ತ್ಸೊ ಸರೋವರ ಪ್ರದೇಶದಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ಗಮನ ಸೆಳೆದಿರುವುದಾಗಿ ವರದಿ ತಿಳಿಸಿದೆ.

ಏಳನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಐಟಿಬಿಪಿ ಪಡೆ ಈ ಬಾರಿ ಲಡಾಖ್ ನ 18 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ನಡೆಸಿದೆ. ಹಿಂದಿನ ವರ್ಷಗಳಲ್ಲಿಯೂ ಐಟಿಬಿಪಿ ಯೋಧರು ಲಡಾಖ್ ನ ವಿವಿಧ ಎತ್ತರದ ಪ್ರದೇಶದಲ್ಲಿ ಯೋಗಾಭ್ಯಾಸ ನಡೆಸಿದ್ದರು.

Advertisement

ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಐಟಿಬಿಪಿಯ ಕೆಲವು ಯೋಧರು ಹಿಮಾಚಲ್ ಪ್ರದೇಶದ 16 ಸಾವಿರ ಅಡಿ ಎತ್ತರದಲ್ಲಿ, ಲಡಾಖ್ ನ ಪಾಂಗೋಂಗ್ ತ್ಸೋ ಪ್ರದೇಶದ 14 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಯೋಗಪ್ರದರ್ಶನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next