Advertisement

ಗರ್ಭಿಣಿಯನ್ನು 5 ಕಿ.ಮೀ ಹೊತ್ತೊಯ್ದು ಆಸ್ಪತ್ರೆಗೆ ಸೇರಿಸಿದ ಯೋಧರು

05:24 PM Aug 15, 2018 | Sharanya Alva |

ಛತ್ತೀಸ್ ಗಢ್: ಸಮರ್ಪಕ ರಸ್ತೆ, ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲದೆ ಅಸಹಾಯಕತೆಯಲ್ಲಿದ್ದ ತುಂಬು ಗರ್ಭಿಣಿಯನ್ನು ಭಾರತ-ಟಿಬೆಟ್ ಗಡಿ ಪೊಲೀಸ್(ಐಟಿಬಿಪಿ) ಸಿಬ್ಬಂದಿಗಳು ಸ್ಟ್ರೇಚರ್ ನಲ್ಲಿ ಮಲಗಿಸಿ ಸುಮಾರು ಐದು ಕಿಲೋ ಮೀಟರ್ ದೂರದಲ್ಲಿರುವ ಆಸ್ಪತ್ರೆಗೆ ಹೊತ್ತೊಯ್ದ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ.

Advertisement

ಛತ್ತೀಗಢದ ಕೊಂಡಗಾಂವ್ ಜಿಲ್ಲೆಯ ಹಾಡೇಲಿ ಗ್ರಾಮದ ಸಾದೈ ಎಂಬಾಕೆ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದಳು. ಈ ಸಂದರ್ಭದಲ್ಲಿ ವಿಷಯ ತಿಳಿದ ಐಟಿಬಿಪಿಯ 41ನೇ ಬೆಟಾಲಿಯನ್ ಯೋಧರು ತಾವೇ ಸ್ಟ್ರೇಚರ್ ನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಹೊತ್ತೊಯ್ದು ಸೇರಿಸಿದ್ದರು.

ಈ ಘಟನೆಯನ್ನು ಐಟಿಬಿಪಿಯ ಅಧಿಕೃತ ಟ್ವೀಟರ್ ಖಾತೆಯಲ್ಲಿ, ಐಟಿಬಿಪಿಯ ಮತ್ತೊಂದು ಮಾನವೀಯತೆ ಕೆಲಸ ಎಂಬುದಾಗಿ ಬರೆದು ವಿಡಿಯೋ ಸಹಿತ ಪೋಸ್ಟ್ ಮಾಡಲಾಗಿತ್ತು. ಈ ವಿಡಿಯೋ ನಂತರ ವೈರಲ್ ಆಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಯೋಧರ ಈ ಕರ್ತವ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಏತನ್ಮಧ್ಯೆ ಇನ್ನೂ ಕೆಲವರು ಪ್ರತಿ ಬಾರಿಯೂ ಇಂತಹ ಸಂದರ್ಭದಲ್ಲಿ ಯೋಧರು ಅಲ್ಲಿರಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಅಲ್ಲಿ ಜನರ ಅಗತ್ಯದ ಮೂಲಭೂತ ಸೌಕರ್ಯ ಒದಗಿಸುವುದು ಉತ್ತಮ ಎಂಬುದಾಗಿಯೂ ಸಲಹೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next