ಜಮ್ಮು:ಜುಲೈ 1ರಿಂದ ಆರಂಭವಾಗಿರುವ ಪವಿತ್ರ ಗುಹಾಂತರ ದೇವಾಲಯ ಅಮರನಾಥ ಯಾತ್ರೆ ಹಲವು ಸವಾಲುಗಳ ಮಧ್ಯೆ ನಡೆಯುತ್ತಿದ್ದು, ಒಂದೆಡೆ ಉಗ್ರರ ಕರಿನೆರಳು ಇನ್ನೊಂದೆಡೆ ವಾತಾವರಣ ಮತ್ತು ಕಠಿಣ ಹಾದಿಯೂ ಭಕ್ತರ ಸುರಕ್ಷತೆಗೆ ಸವಾಲಾಗಿ ಪರಿಣಮಿಸಿದೆ. ಐಟಿಬಿಪಿ ಯೋಧರು ಹಿಮಪರ್ವತದಲ್ಲಿ ಕಲ್ಲು ಮುಳ್ಳುಗಳ ಮಧ್ಯೆ ಪ್ರಾಣವನ್ನು ಪಣಕ್ಕಿಟ್ಟು ಯಾತ್ರಿಕರಿಗೆ ಸುರಕ್ಷಿತವಾಗಿ ದೇವಾಲಯ ತಲುಪಲು ಸಹಕಾರ ನೀಡುತ್ತಿದ್ದಾರೆ.
ಪರ್ವತದಿಂದ ಕಲ್ಲುಗಳು, ಬಂಡೆಗಳು ಉರುಳುತ್ತಿದ್ದು ಐಟಿಬಿಪಿ ಯೋಧರು ಅವುಗಳನ್ನು ತಡೆದು ಪ್ರಯಾಣಿಕರಿಗೆ ಮಾರ್ಗವನ್ನು ಸರಾಗ ಮಾಡಿ ಕೊಡುತ್ತಿದ್ದಾರೆ.
ಪ್ರಯಾಣದ ಆಯಾಸದಿಂದ 25 ಕ್ಕೂ ಹೆಚ್ಚು ಯಾತ್ರಿಕರು ಬಳಲಿದ್ದು ಅವರಿಗೆ ಆಕ್ಸಿಜನ್ ನೀಡುವ ಕೆಲವನ್ನೂ ಐಟಿಬಿಪಿ ಯೋಧರು ಮಾಡಿದ್ದಾರೆ.
ಐಡಿಬಿಪಿ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು, ಉರುಳುತ್ತಿರುವ ಬಂಡೆಗಳನ್ನು ತಡೆದು ಯಾತ್ರಿಕರಿಗೆ ಸುರಕ್ಷಿತ ಮಾರ್ಗ ಮಾಡಿ ಕೊಡುವ ದೃಶ್ಯವನ್ನು ಲಗತ್ತಿಸಿ ಹೀಮವೀರರು ಎಂದು ಕರೆದಿದೆ.
ಪಹಲ್‌ಗಾಮ್‌ನಿಂದ 379 ಮಹಿಳೆಯರು , 15 ಮಕ್ಕಳು ಮತ್ತು 49 ಸಾಧುಗಳು ಸೇರಿ 1617 ಯಾತ್ರಿಕರು, ಬಾಲ್‌ತಾಲ್‌ನಿಂದ 463 ಮಹಿಳೆಯರು, 16 ಮಕ್ಕಳು ಸೇರಿದಂತೆ 2800 ಮಂದಿ ಯಾತ್ರೆ ಆರಂಭಿಸಿದ್ದಾರೆ.