Advertisement

ಇಟಾಲಿಯನ್‌ ಟೆನಿಸ್‌: ಜೊಕೋಗೆ ಸೋಲುಣಿಸಿ ನಡಾಲ್‌ ಫೈನಲ್‌ಗೆ

06:40 AM May 21, 2018 | |

ರೋಮ್‌: ಟೆನಿಸ್‌ನ ಇಬ್ಬರು ದಿಗ್ಗಜ ಆಟಗಾರರ ನಡುವಿನ ಕದನಕ್ಕೆ ಶನಿವಾರ ರೋಮ್‌ ಸಾಕ್ಷಿಯಾಯಿತು. ಸ್ಪೇನ್‌ನ ರಫೆಲ್‌ ನಡಾಲ್‌ ಹಾಗೂ ಸರ್ಬಿಯಾದ ನೊವಾಕ್‌ ಜೊಕೋವಿಕ್‌ ಅವರ ನಡುವಿನ ಮ್ಯಾರಥಾನ್‌ ಹೋರಾಟದಲ್ಲಿ ಅಂತಿಮವಾಗಿ ಮಾಜಿ ವಿಶ್ವ ನಂಬರ್‌ 1 ಜೊಕೋಗೆ 7-6 (4), 6-3 ಸೆಟ್‌ಗಳಿಂದ ಆಘಾತ ನೀಡಿದ ನಡಾಲ್‌ ಫೈನಲ್‌ ಪ್ರವೇಶಿಸಿದ್ದಾರೆ. 

Advertisement

ನಡಾಲ್‌ ಮತ್ತು ಜೊಕೋವಿಕ್‌ 2006ರ ಅನಂತರ ಇಷ್ಟರ ವರೆಗೆ 51 ಬಾರಿ ಮುಖಾಮುಖೀಯಾಗಿದ್ದು ಜೊಕೋವಿಕ್‌ 26 ಗೆಲುವು 25 ಸೋಲಿನ ದಾಖಲೆ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next