ರೋಮ್: ಇಟಲಿಯ ಪ್ರಧಾನಿ ಮಾರಿಯೋ ದ್ರಾಗಿ ಗುರುವಾರ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಮತ್ತೆ ಅಲ್ಲಿ ಚುನಾವಣೆ ಏರ್ಪಡುವ ಸ್ಥಿತಿ ಉಂಟಾಗಿದೆ.
ಬುಧವಾರ ಅಲ್ಲಿನ ಸಂಸತ್‌ನಲ್ಲಿ ವಿಶ್ವಾಸ ಮತಯಾಚನೆ ವೇಳೆ, ಮೈತ್ರಿಕೂಟದ ಪ್ರಧಾನ ಪಕ್ಷ ಗೈರು ಹಾಜರಾಗಿತ್ತು. ರಷ್ಯಾ ವಿರುದ್ಧ ದಿಗ್ಬಂಧನ ಹೇರಿದ ಬಳಿಕ ಐರೋಪ್ಯ ಒಕ್ಕೂಟದಲ್ಲಿ ಬಿಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಿರುವಂತೆಯೇ ಇ ಟಲಿಯಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ.
ಅಲ್ಲಿನ ಅಧ್ಯಕ್ಷ ಸರ್ಗಿಯೋ ಮಟ್ಟಾರೆಲ್ಲಾ ಅವರು ದ್ರಾಗಿ ರಾಜೀನಾಮೆ ಅಂಗೀಕರಿಸಿದ್ದು, ಹಂಗಾಮಿ ವ್ಯವಸ್ಥೆಯಲ್ಲಿ ಇರುವಂತೆ ಸೂಚಿಸಿದ್ದಾರೆ.
2018ರಲ್ಲಿ ಅಲ್ಲಿ ಸಂಸತ್‌ಗೆ ನಡೆದಿದ್ದ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳಿಗೂ ಬಹುಮತ ಬಂದಿರಲಿಲ್ಲ.
ಮೊದಲಿಗೆ ಗಿಸೊಪ್ಪೆ ಕಾಂಟೆ 2018ರಿಂದ 2021 ಫೆ.13ರ ವರೆಗೆ ಅಧಿಕಾರದಲ್ಲಿದ್ದರು. ಮರಿಯೋ ದ್ರಾಗಿ 2021 ಫೆ.13ರಿಂದ ಅಧಿಕಾರದಲ್ಲಿದ್ದರು.