Advertisement
ಇದರೊಂದಿಗೆ ರಫೆಲ್ ನಡಾಲ್ 4 ವಿವಿಧ ಎಟಿಪಿ ಪಂದ್ಯಾವಳಿಗಳಲ್ಲಿ 10 ಪ್ರಶಸ್ತಿ ಗೆದ್ದ ಸಾಧನೆಗೈದರು. ಉಳಿದಂತೆ 13 ಸಲ ಫ್ರೆಂಚ್ ಓಪನ್, 12 ಸಲ ಬಾರ್ಸಿಲೋನಾ ಓಪನ್ ಹಾಗೂ 11 ಸಲ ಮಾಂಟೆ ಕಾರ್ಲೊ ಟೆನಿಸ್ ಪ್ರಶಸ್ತಿ ಜಯಿಸಿದ್ದಾರೆ.ಅತ್ಯಧಿಕ 36 ಸಲ “ಮಾಸ್ಟರ್-1000′ ಪ್ರಶಸ್ತಿ ಗೆದ್ದ ಜೊಕೋವಿಕ್ ದಾಖಲೆಯನ್ನೂ ನಡಾಲ್ ಸರಿದೂಗಿಸಿದರು. ಜೊಕೋ ಅವರನ್ನು ಮಣಿಸಿಯೇ ಅವರಿಗೆ ಸರಿಸಮನಾಗಿ ಕಾಣಿಸಿಕೊಂಡದ್ದು ನಡಾಲ್ ಹೆಗ್ಗಳಿಕೆಯಾಗಿದೆ.
ಈ ಜಯದೊಂದಿಗೆ ರಫೆಲ್ ನಡಾಲ್ ತಾನು “ಕ್ಲೇ ಕೋರ್ಟ್ ಕಿಂಗ್’ ಎಂಬುದನ್ನು ಮತ್ತೂಮ್ಮೆ ಸಾಬೀತುಪಡಿಸಿದರು. ಜತೆಗೆ ಫ್ರೆಂಚ್ ಓಪನ್ ಪ್ರಶಸ್ತಿ ಉಳಿಸಿಕೊಳ್ಳುವ ಹಾದಿಯಲ್ಲಿ ದಿಟ್ಟ ಹೆಜ್ಜೆ ಇರಿಸಿದರು. ಕಳೆದ ವರ್ಷ ಜೊಕೋವಿಕ್ ಅವರನ್ನು ನೇರ ಸೆಟ್‌ಗಳಲ್ಲಿ ಮಣಿಸುವ ಮೂಲಕ ನಡಾಲ್ 20ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗೆ ಮುತ್ತಿಕ್ಕಿದ್ದರು. 2016ರ ರೋಮ್ ಕ್ವಾರ್ಟರ್ ಫೈನಲ್ ಬಳಿಕ ಆವೆಯಂಗಳದ ಕೂಟಗಳಲ್ಲಿ ನಡಾಲ್ ಅವರನ್ನು ಮಣಿಸಲು ಜೊಕೋವಿಕ್‌ಗೆ ಸಾಧ್ಯವಾಗಿಲ್ಲ.