Advertisement

ಮೀನುಗಾರರನ್ನು ಇಟಲಿ ನಾವಿಕರು ಕೊಂದ ಪ್ರಕರಣ: ಅಂ.ರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತಕ್ಕೆ ಜಯ

11:00 PM Jul 02, 2020 | Hari Prasad |

ನವದೆಹಲಿ: 2012ರಲ್ಲಿ ಭಾರತೀಯ ಮೀನುಗಾರರಿಬ್ಬರನ್ನು ಇಟಲಿ ನೌಕೆಯ ಸಿಬ್ಬಂದಿಗಳಿಬ್ಬರು ಗುಂಡಿಟ್ಟು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾನೂನು ಹೋರಾಟದಲ್ಲಿ ಭಾರತದ ಪಾಲಿಗೆ ಜಯ ಸಿಕ್ಕಿದೆ.

Advertisement

ಈ ಪ್ರಕರಣದ ವಿಚಾರಣೆಯನ್ನು ನೆದೆರಲ್ಯಾಂಡ್ ನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನಡೆಸಲಾಗಿತ್ತು.

ಇದಕ್ಕೆ ಸಂಬಂ‍ಧಿಸಿದಂತೆ ತೀರ್ಪು ನೀಡಿರುವ ಪರ್ಮನೆಂಟ್ ಕೋರ್ಟ್ ಆಫ್ ಆರ್ಬಿಟ್ರೇಷನ್ ಈ ಪ್ರಕರಣದಲ್ಲಿ ಭಾರತವು ಸೂಕ್ತ ಪರಿಹಾರವನ್ನು ಪಡೆದುಕೊಳ್ಳಲು ಅರ್ಹವಾಗಿದೆ ಎಂದು ತೀರ್ಪು ನೀಡಿದೆ.

ಆದರೆ ಇಟಲಿ ನಾವಿಕರಿಬ್ಬರನ್ನು ಭಾರತ ಶಿಕ್ಷೆಗೆ ಗುರಿಪಡಿಸಲು ಸಾಧ್ಯವಿಲ್ಲವೆಂದು ತನ್ನ ತೀರ್ಪಿನಲ್ಲಿ ತಿಳಿಸಿದೆ. ಈ ವಿಚಾರವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಹೇಳಿಕೆಯಲ್ಲಿಂದು ತಿಳಿಸಿದೆ.

ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಭಾರತವು ಈ ಇಬ್ಬರು ಇಟಲಿ ನಾವಿಕರನ್ನು ಭಾರತವು ಬಂಧಿಸಿತ್ತು ಹಾಗೂ ಇದಕ್ಕೆ ಪ್ರತಿಯಾಗಿ ಅಂದಿನ ಇಟಲಿಯು ಸಾಗರ ಗಡಿ ಕಾನೂನು ವಿಚಾರವನ್ನು ಪ್ರಸ್ತಾಪಿಸಿ ಭಾರತದ ವಿರುದ್ಧ ವಿಶ್ವ ಸಂಸ್ಥೆಯ ಅಧಿವೇಶನದಲ್ಲಿ ತಕರಾರರು ಎತ್ತಿತ್ತು.

Advertisement

ಇಬ್ಬರು ಮೀನುಗಾರರ ಸಾವಿಗೆ ಸಂಬಂಧಿಸಿ ಭಾರತವು ಇಟಲಿಯಿಂದ ಸೂಕ್ತ ಪರಿಹಾರವನ್ನು ಪಡೆದುಕೊಳ್ಳಲು ಅರ್ಹವಾಗಿದೆ, ಆದರೆ ಬಂಧಿತ ನಾವಿಕರಿಬ್ಬರು ಅಲ್ಲಿನ ಉನ್ನತ ಅಧಿಕಾರಿಗಳಾಗಿರುವುದರಿಂದ ಅವರು ಭಾರತದಲ್ಲಿ ಶಿಕ್ಷೆಗೊಳಪಡುವುದರಿಂದ ನ್ಯಾಯಾಲಯವು ಇಬ್ಬರಿಗೂ ವಿನಾಯಿತಿ ನೀಡಿದೆ.

ಇಟಲಿ ದೇಶದ ನಾವಿಕರಾದ ಸಾಲ್ವೆಟೋರ್ ಗಿರೋನ್ ಹಾಗೂ ಮೆಸ್ಸಿಮಿಲಿಯಾನೊ ಲಾಟೊರ್ರೆ 2012ರಲ್ಲಿ ಕೇರಳ ಕಡಲ ತೀರದಲ್ಲಿ ಇಬ್ಬರು ಮೀನುಗಾರರ ಮೇಲೆ ಗುಂಡು ಹಾರಿಸಿದ ಆರೋಪಕ್ಕೆ ಒಳಗಾಗಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲ್ವೆಟೋರ್ ಹಾಗೂ ಮೆಸ್ಸಿಮಿಲಿಯಾನೋ ಕ್ರಮವಾಗಿ ಎರಡು ಹಾಗೂ ನಾಲ್ಕು ವರ್ಷಗಳ ಕಾಲ ಭಾರತದಲ್ಲಿ ಬಂಧಿಯಾಗಿದ್ದರು ಮತ್ತು ಬಳಿಕ ಅವರನ್ನು ಬಿಡುಗಡೆಗೊಳಿಸಲಾಗಿತ್ತು. ಪ್ರಸ್ತುತ ಅವರಿಬ್ಬರು ಇಟಲಿಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next